Author: Published by Surahonne
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮರುದಿನ ಬೆಳಿಗ್ಗೆ ರಾಜಲಕ್ಷ್ಮಿ ಮೋಹನ್ಗೆ ಕರೆಮಾಡಿ “ನೀನು ಈಗಾಗಲೇ ಬಾ. ನಾನು ಭಾಸ್ಕರಂಗೂ ಫೋನ್ ಮಾಡ್ತೀನಿ. ಸ್ವಲ್ಪ ಮಾತಾಡುವುದಿದೆ.”“ಆಗಲಿ ಅಮ್ಮ. ನಾನೇ ಭಾಸ್ಕರನ್ನ ಕರೆದುಕೊಂಡು 12 ಗಂಟೆ ಹೊತ್ತಿಗೆ ರ್ತೀನಿ. ಚಿನ್ಮಯಿ, ಗೌರಮ್ಮ ಇಬ್ಬರೂ ಇದ್ದರೆ ಒಳ್ಳೆಯದು.”“ನೀವು ಎಲ್ಲಿಗೆ ಬರಬೇಕೂಂತ ನಾನೇ ಫೋನ್...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮರುದಿನ ರಾಜಲಕ್ಷ್ಮಿ ಭಾಸ್ಕರನಿಗೆ ಫೋನ್ ಮಾಡಿ ಬೆಳಿಗ್ಗೆ 12 ಗಂಟೆಗೆ ಬರಲು ಹೇಳಿದರು.“ಸಾಯಂಕಾಲ ಬಂದರಾಗತ್ತಾಮ್ಮ?”“ಬೇಡ. ಬೆಳಿಗ್ಗೇನೇ ಬಾ.”ಭಾಸ್ಕರ 12.15ಗೆ ಬಂದ. ರಾಜಲಕ್ಷ್ಮಿ ಅವನನ್ನು ತನ್ನ ರೂಮ್ಗೆ ಕರೆದೊಯ್ದರು.“ಏನು ವಿಷಯಾಮ್ಮ?”“ನಿನಗೆ ತಿಂಗಳಿಗೆ ಎಷ್ಟು ಸಂಬಳ ಬರ್ತಿದೆ?”“ಇಪ್ಪತ್ತು ಸಾವಿರ ಬರಬಹುದು ಯಾಕಮ್ಮಾ?”“ಮದುವೆ ಮಾಡಿಕೊಂಡು ಜೀವನ ಸಾಗಿಸಕ್ಕಾಗತ್ತಾ?”ಅವನು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಒಂದು ವಾರ ಕಳೆಯಿತು. ಕೃಷ್ಣವೇಣಿಯ ಗಂಡನಾಗಲಿ, ಮಗನಾಗಲಿ ಆಶ್ರಮದ ಕಡೆ ಸುಳಿಯಲಿಲ್ಲ. ಅಥವಾ ಫೋನ್ ಮಾಡಿ ಕೃಷ್ಣವೇಣಿಯ ಬಗ್ಗೆ ವಿಚಾರಿಸಲಿಲ್ಲ. ಕೃಷ್ಣವೇಣಿ ಮಾತ್ರ ಆರಾಮವಾಗಿದ್ದರು. ಅವರ ಬಳಿ ಮೊಬೈಲ್ ಇದ್ದರೂ ಯಾರಿಗೂ ಫೋನ್ ಮಾಡಿದಂತೆ ಕಾಣಲಿಲ್ಲ. “ನಿಮ್ಮ ಮಗಳಿಗೆ ನೀವು ಇಲ್ಲಿರುವುದು ಗೊತ್ತಾ?”“ಇಲ್ಲ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮರುದಿನ ಸುಮಾರು 11 ಗಂಟೆಗೆ ರಾಜಲಕ್ಷ್ಮಿ ಪೇಪರ್ ನೋಡುತ್ತಾ ಕುಳಿತಿದ್ದಾಗ ಫೋನ್ ರಿಂಗಾಯಿತು.“ನಮಸ್ಕಾರ, ರಾಜಲಕ್ಷ್ಮಿ ಮೇಡಂ ಇದ್ದಾರಾ?”“ನಮಸ್ಕಾರ. ನಾನೇ ಮಾತಾಡ್ತಿರೋದು. ತಾವು ಯಾರು?”“ಸದಾಶಿವರಾವ್ ಅಂತ. ಎಲ್.ಐ.ಸಿ.ಯಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದೆ. ಈಗ ಮನೇಲಿದ್ದೀನಿ.”“ನೆನ್ನೆ ಬಂದಿದ್ದವರು ನೀವೇನಾ?”“ಹೌದು ನಾನೇ. ಇವತ್ತು ಯಾವಾಗ ಬರಲಿ ಮೇಡಂ?”“ಬನ್ನಿ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ಬೆಳಿಗ್ಗೆ ಗೋದಾಮಣಿ ಹೊರಟರು. ಮಧ್ಯಾಹ್ನ ಭಾಸ್ಕರ ಬಂದು ಲೆಕ್ಕ ನೋಡಿದ. ಅವನು ಊಟ ಮಾಡಿಕೊಂಡು ಹೊರಟ.ಸಾಯಂಕಾಲ ಕಾಫಿ ಕುಡಿಯುವಾಗ ರಾಜಲಕ್ಷ್ಮಿ ಕೇಳಿದರು.“ಚಿನ್ಮಯಿ ಎಲ್ಲಿ ಗೌರಮ್ಮ?”“ಅವಳು ಫ್ರೆಂಡ್ಸ್ ಜೊತೆ ಕೆ.ಆರ್.ಎಸ್ಗೆ ಹೋದಳು”“ಹೇಗೆ ಓದ್ತಾಯಿದ್ದಾಳೆ?”“ನಂಗೇನು ಗೊತ್ತಾಗತ್ತಮ್ಮ. ಏನೋ ಯಾವಾಗಲೂ ಓದ್ತಾ ಬರೀತಾ ಇರ್ತಾಳೆ. ಅದೇನು ಓದ್ತಾಳೋ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಒಂದು ವಾರ ಕಳೆಯಿತು. ವೃದ್ಧಾಶ್ರಮದಲ್ಲಿದ್ದ ಮೂವರಿಗೆ ಗೋಡೌನ್ನಲ್ಲಿ ಪ್ಯಾಕಿಂಗ್ ಕೆಲಸ ಸಿಕ್ಕಿತು. ಉಳಿದವರಲ್ಲಿ ಕೆಲಸದ ಭೇಟೆಯಲ್ಲಿದ್ದರು.ಆ ತಿಂಗಳು ಉರುಳಿತು. ಒಂದು ಭಾನುವಾರ ಮಧ್ಯಾಹ್ನ ಊಟದ ವೇಳೆಯಲ್ಲಿ ಭವಾನಿ ಹೇಳಿದರು. “ಯಾರೋ ದಂಪತಿಗಳು ನಿಮ್ಮನ್ನು ಹುಡುಕಿಕೊಂಡು ಬಂದಿದ್ದಾರೆ ರಾಜಮ್ಮ.”“ಊಟ ಮಾಡಿಲ್ಲದಿದ್ದರೆ ಊಟಕ್ಕೆಬ್ಬಿಸಿ. ನಾನು ಆಮೇಲೆ ಮೀಟ್...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಕೆಲಸದ ಚಿಕ್ಕಮ್ಮ ತನ್ನ ಓರಗಿತ್ತಿ ಪುಟ್ಟಮ್ಮನನ್ನೇ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯಿಸಿದಳು.“ಅವಳ ಗಂಡ ಕುಡುಕ. ಎರಡು ಮಕ್ಕಳು ಚಿಕ್ಕವು. ಇವಳು ದುಡಿಯಲೇ ಬೇಕು. ಸಹಾಯ ಮಾಡ್ರವ್ವ” ಎಂದಳು.“ಕೈ, ಬಾಯಿ ಶುದ್ಧವಾಗಿರಬೇಕು. ಯಾರ ಹತ್ತಿರಾನೂ ಜಗಳವಾಡಬಾರದು” ರಾಜಲಕ್ಷ್ಮಿ ಎಚ್ಚರಿಸಿದರು.ಗೌರಮ್ಮ ಚಿಕ್ಕಮ್ಮನ ಸಹಾಯದಿಂದ ತನಗೊಬ್ಬ ಅಸಿಸ್ಟೆಂಟನ್ನು ಹುಡುಕಿಕೊಂಡರು....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಗೋದಾಮಣಿ ತೆಗೆದು ನೋಡಿದರು. “ಆಗಲಿ ಭಾಸ್ಕರ್ ನಾನು ಫಿಲಪ್ ಮಾಡಿ ತಂದು ಕೊಡ್ತೇನೆ.”“ಥ್ಯಾಂಕ್ಸ್ ಮೇಡಂ.” “ವಾಷಿಂಗ್ ಮಿಷನ್ ನಾಳೆ ಬರತ್ತಂತೆ.”“ಹೌದು. ನೀವು ಅಡ್ಜಸ್ಟ್ ಮಾಡಿಕೊಂಡು ಬಟ್ಟೆ….”“ಅದನ್ನು ನೀವು ಹೇಳಬೇಕಾ? ಡೋಂಟ್ವರಿ. ನಮ್ಮಲ್ಲಿ ಯಾವ ಸಮಸ್ಯೆಗಳೂ ಬರುವುದಿಲ್ಲ.”ಎಲ್ಲರ ಊಟದ ನಂತರ ಸರಸಮ್ಮ, ರಾಜಲಕ್ಷ್ಮಿ, ಗೌರಮ್ಮ,...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಹೊಸ ವೃದ್ಧಾಶ್ರಮಕ್ಕೆ “ಆಶಿಯಾನ” ಎಂದು ಹೆಸರಿಡುವಂತೆ ಭಾಸ್ಕರ ಸೂಚಿಸಿದ್ದ. “ಆಶಿಯಾನ” ಎಂದರೆ “ಆಶ್ರಯ” ಹೆಸರು ಚೆನ್ನಾಗಿತ್ತು. ಆದರೆ ರಾಜಲಕ್ಷ್ಮಿಗೆ ಒಪ್ಪಿಗೆಯಾಗಿರಲಿಲ್ಲ. ಕೊನೆಗೆ ‘ವಾತ್ಸಲ್ಯ’ ಎಂದು ಹೆಸರಿಟ್ಟರು. ಆ ಹೆಸರು ಎಲ್ಲರಿಗೂ ಒಪ್ಪಿಗೆಯಾಯಿತು. ಇಪ್ಪತ್ತು ದಿನಗಳ ಅವಧಿಯಲ್ಲಿ ಭಾಸ್ಕರ ‘ವಾತ್ಸಲ್ಯ’ದ ಸ್ವರೂಪವನ್ನೇ ಬದಲಾಯಿಸಿದ್ದ. ತೆರಾಂಡದಲ್ಲಿ ಒಂದು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ನಾಗಮೋಹನದಾಸ್ ದೊಡ್ಡ ಮೊತ್ತ ವೃದ್ಧಾಶ್ರಮದ ಖರ್ಚುವೆಚ್ಚಕ್ಕಾಗಿ ಇಟ್ಟಿದ್ದರು. ಸುಮಾರು 2 ಲಕ್ಷ ಪ್ರತಿತಿಂಗಳೂ ನೀಲಕಂಠನ ಕೈಗೆ ಸಿಗುತ್ತಿತ್ತು. ನ್ಯಾಯವಾಗಿ ಖರ್ಚುಮಾಡಿದ್ದರೆ ಆ ಹಣ ವೃದ್ಧಾಶ್ರಮ ನಡೆಸಲು ಸಾಕಾಗುತ್ತಿತ್ತು. ಆದರೆ ನೀಲಕಂಠನ ದುರಾಸೆಯಿಂದ ಹಣ ಅವನ ಅಕೌಂಟ್ ಸೇರುತ್ತಿತ್ತು. ವೃದ್ಧಾಶ್ರಮದವರಿಗೆ ಹೊಟ್ಟೆ ತುಂಬಾ ಊಟ...
ನಿಮ್ಮ ಅನಿಸಿಕೆಗಳು…