ಬಿಡಿಸಿದ ಚಿತ್ರ
ನಗುವಿನದ್ದೊಂದು
ಬಿಡಿಸಿದ ಚಿತ್ರ ಬೇಕಿದೆ
ಗೆರೆಗಳಲ್ಲಿ ನೂರು ರೂಪ
ಬಣ್ಣ ಭಾವ ಸಮೀಪ
ಇರುವ ನಗುವಿನದ್ದು
ಯಾರದ್ದು ಬೇಕಾದರೂ
ಆಗಬಹುದು ಅದು
ದೇವರಂತೆ ನಗಬೇಕು
ನೋವಿರದ ಭಾವದೊಳಗೆ
ನಮ್ಮ ಅರಿವುಳಿಸಿ
ಸಂತಸ ಸಂಭ್ರಮ
ನಗುವಿನದ್ದೊಂದು ಸಾಕ್ಷಿಗೆ
ಉಳಿದು ಹೋಗಬೇಕು
ಮನೆ ಬಾಗಿಲ ಮೇಲೆ
ಮನದ ಖಾಲಿತನದ ಮೇಲೆ
ಜೀವಿತದ ನೆಲೆಯೊಂದಕ್ಕೆ
ಮೆರುಗಾಗಿ ಒಲವಾಗಿ
ಸೋತ ಭರವಸೆಗೆ ಗೆಲುವು
ನಗುವಂತೆ ಮತ್ತೆ ಮತ್ತೆ
ಉಳಿವ ಕಾಣಿಸಬೇಕು
ನೋಡಿದ ಮೊಗದಲ್ಲಿ
ಚಿತ್ತ ಗೆಲ್ಲಿಸುವಂತೆ
-ನಾಗರಾಜ ಬಿ.ನಾಯ್ಕ,ಕುಮಟಾ.
ಸೊಗಸಾದ ಕವನ
ತಮ್ಮ ಓದಿಗೆ ಧನ್ಯವಾದಗಳು
ನಿಮ್ಮದೇ ಭಾವಚಿತ್ರ ಸೂಕ್ತ ಅನಿಸುತ್ತೆ…
ಓದಿಗೆ ಧನ್ಯವಾದಗಳು
ಸರಳ ಸುಂದರ ಕವನ ಸಾರ್
ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು
ತುಂಬಾ ಚೆನ್ನಾಗಿದೆ ಕವನ
ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು
ನಗುವಿನ ಮಹತ್ವ, ಅಗತ್ಯವನ್ನು ಮನಗಾಣಿಸಿದ ಸುಂದರ ಕವಿತೆ.
ತಮ್ಮ ಓದಿಗೆ ಧನ್ಯವಾದಗಳು
ಸುಂದರ, ಸ್ವಚ್ಛ ನಗುವಿನ ಹುಡುಕಾಟದಲ್ಲಿರುವ ಕವನ ಸೊಗಸಾಗಿದೆ.
ತಮ್ಮ ಓದಿಗೆ ಧನ್ಯವಾದಗಳು