ಬೆಳಕು-ಬಳ್ಳಿ

ನೆನಪಿನ ದಡ

Share Button

ಗತವಿಲ್ಲ
ಅದು ಒಂದು ನೆನಪು ಮಾತ್ರ!

ಭವಿಷ್ಯವಿಲ್ಲ
ಅದು ಕೇವಲ ಒಂದು ಕಲ್ಪನೆ ಮಾತ್ರ!

ನಿಜವಾಗಿ ಇರುವುದೇ ಈ ಕ್ಷಣ!
ಅದರೊಳಗೆ ಪ್ರವೇಶಿಸಿದ ದಿನ
ನಿನಗೆ ಕಾಲವೇ ಇರುವುದಿಲ್ಲ
ಕಾಲವಿಲ್ಲದ ಜಾಗದಲ್ಲಿ
ಎಲ್ಲವೂ ನಿಶ್ಚಲವಾಗಿರುತ್ತವೆ.

ಮರಣವೆಂದರೆ
ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ
ದಾಟುವ ಪಯಣವೆಂದು
ನಿನಗೆ ಗೊತ್ತೇ?

ಇದೆಲ್ಲ ಏಕೆ?
ಕಿಟಕಿಯ ಹೊರಗೆ ನೋಡು
ಆಕಾಶ ಎಷ್ಟು ಸುಂದರವಾಗಿದೆ!

ಕಣ್ಣುಗಳನ್ನು ಮುಚ್ಚಿ ಒಳಗೆ ನೋಡು
ಅಲ್ಲಿ ಒಂದು ಬೆಳಕು ಇರುತ್ತದೆ
ನಿಜವಾಗಿ ಆ ಬೆಳಕೇ ನೀನು!

ಮನುಷ್ಯ ಎಂದರೆ
ತಪ್ಪು ಮಾಡದವನು ಅಲ್ಲ
ತಪ್ಪನ್ನು ಅರಿತು
ಮತ್ತೆ ಅದನ್ನು ಮಾಡದವನು!

ಯಾವುದೂ ಎಂದೆಂದಿಗೂ ಮರಳಿ ಬರುವುದಿಲ್ಲ
ಆದರೆ,
ಕೆಲವು ನೆನಪುಗಳು ಮಾತ್ರ
ಸಾಯುವ ತನಕ
ಬಾವಿಯ ನೀರಿನಂತೆ
ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ.

ತೆಲುಗು ಮೂಲ : ಏಟೂರಿ ನಾಗೇಂದ್ರರಾವು 
ಕನ್ನಡ ಅನುವಾದ: ಕೊಡೀಹಳ್ಳಿ  ಮುರಳೀಮೋಹನ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *