ಬೆಳಕು-ಬಳ್ಳಿ

ಮೆರವಣಿಗೆ ಹೊರಟ ಮನಸಿಗೆ

Share Button

ಎದ್ದು ಮೆರವಣಿಗೆ ಹೊರಟ ಮನಸಿಗೆ
ನೂರೆಂಟು ಸುಂದರ ಸಿಹಿಸಿಹಿ ಕನಸು
ಆದರೂ ದುಗುಡ ದುಮ್ಮಾನಗಳಲ್ಲಿ
ಒಳಗೊಳಗೆ ನಲುಗುವುದು ಮನಸು

ಕಾಣದ ದೂರದೂರಿನ ಒಂಟಿ ಪಯಣ
ನಯನಗಳಲ್ಲಿ ನೂರು ಕಾತರಗಳ ತಲ್ಲಣ
ಮಾಯೆಯ ಸರಿಸಿ ನಾಳೆಗಳ ಹಂಬಲಿಸಿ
ಸಾಗಿದೆ ನಮ್ಮ ಜೀವನರಥ ಎಣಿಸಿ ಗುಣಿಸಿ

ಮತ್ತೆ ಮತ್ತೆ ಸಾಗುತ್ತಲೇ ಇರಬೇಕು ನಾವಿಲ್ಲಿ
ಭರವಸೆಯ ಬೆಳಕಹೊತ್ತು ಮನದ ಕಂಗಳಲ್ಲಿ
ಸೋತು ಎಡವಬಾರದು ಯಾವುದೇ ಕಷ್ಟಗಳಿಗಿಲ್ಲಿ
ಗೆಲುವು ಮರೀಚಿಕೆ ಆಗಬಾರದು ಬಾಳಿನಲ್ಲಿ

ಸೋಲಮರೆತು ಗೆಲ್ಲುವುದೇ ನಮಗಿಲ್ಲಿ ಸಾಹಸ
ಯೋಜಿಸಿ ಹೆಜ್ಜೆ ಇಡಲು ಹೆಚ್ಚುವುದು ವಿಶ್ವಾಸ
ನಾವೂ ಬರೆಯಬಹುದು ಆಗಷ್ಟೇ ಇತಿಹಾಸ
ಇಲ್ಲದಿರೆ ತಲೆಯಮೇಲೇ ಬಿದ್ದಂತೆನಿಸುವುದು ಆಕಾಶ

ಕಾಯುತ್ತ ಸುಮ್ಮನೆ ಕುಳಿತರೆ ಬಾರದು ಅವಕಾಶ
ಸೃಷ್ಟಿಸಿಕೊಳ್ಳಬೇಕು ಅವಕಾಶ ಆಗದೆ ಹತಾಶ
ಅನುಭವಿಸಬೇಕು ಜೀವನವೂ ಒಂದು ಪ್ರವಾಸ
ಹೊಂದಬೇಕು ನಾವಿಲ್ಲಿ ಪ್ರತಿಕ್ಷಣವೂ ಹರುಷ

–ನಾಗರಾಜ್ ಜಿ.ಎನ್.ಬಾಡ,ಕುಮಟ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *