Daily Archive: February 1, 2024
ಲೋಕಕ್ಕೂ ನಮಗೂ ನಿರಂತರ ಇರುವ ಸಂಪರ್ಕವೇ ಅನುಭವ. ಈ ಅನುಭವಗಳಲ್ಲಿ ಸಂತೋಷವೂ ಇರಬಹುದು, ಸಂಘರ್ಷಗಳೂ ಇರಬಹುದು. ಇವೆಲ್ಲವೂ ನಮ್ಮ ಮನಸ್ಸೆಂಬ ಗುಪ್ತವಾದ ಕೋಣೆಯಲ್ಲಿ ಶೇಖರಿಸಲ್ಪಡುತ್ತವೆ. ಹೀಗೆ ಮನದಲ್ಲಿ ಹುದುಗಿರುವ ಭಾವನೆಗಳಿಗೆ ಸಮಯ, ಸಂದರ್ಭ, ಸದವಕಾಶಗಳು ದೊರೆತಾಗ, ಒತ್ತಡ ಉಂಟಾದಾಗ ಅದು ಹೊರ ಹೊಮ್ಮುತ್ತದೆ. ಈ ಭಾವನೆಗಳು ಬರಹ,...
ಓಂ ಶ್ರೀ ಗುರುಭ್ಯೋ ನಮಃಸಾಕ್ಷಾತ್ ಶ್ರೀಮನ್ನಾರಾಯಣನ ಅಂಶ ಸಂಭೂತರಾಗಿಯೇ ಜನಿಸಿದ್ದ ವೇದವ್ಯಾಸರು ಭೂಲೋಕದ ಸುಜೀವರ ಉದ್ದಾರಾರ್ಥವಾಗಿ ಕೇವಲ ಜ್ಞಾನಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವನ್ನಾಗಿ ಇಟ್ಟುಕೊಂಡವರು. ಹದಿನೆಂಟು ಪುರಾಣಗಳನ್ನು ಹದಿನೆಂಟು ಉಪ-ಪುರಾಣಗಳನ್ನು ಬರೆದವರು. ಅವುಗಳಲ್ಲಿ ಅತ್ಯಂತ ಕ್ಲಿಷ್ಟವಾದುದು ಮತ್ತು ಶ್ರೇಷ್ಠವಾದುದು ಮಹಾಭಾರತ. ಇದು “ಪಂಚಮವೇದ” ಎಂದು ಖ್ಯಾತಿಯನ್ನು ಪಡೆದಿದೆ....
ರಾಜ ಮಹಾರಾಜರ ಕಾಲದಲ್ಲಿ ಜನರಿಗೆ ಅನುಕೂಲವಾಗಲೆಂದು ಕೆರೆ ಭಾವಿಗಳನ್ನು ಕಟ್ಟಿಸುತ್ತಿದ್ದುದು ಸಾಮಾನ್ಯ. ಆದರಿಲ್ಲಿ ಸೋಜಿಗದ ಸಂಗತಿಯೆಂದರೆ ಈ ಕೆರೆಯನ್ನು ಕಟ್ಟಿಸಿದ್ದು ರಾಜಕುಮಾರಿ ಶಾಂತಲೆಯಾದರೂ, ಹೆಸರು ‘ಸೂಳೆ ಕೆರೆ’. ಇದು ಅಂತಿಂಥ ಕೆರೆಯಲ್ಲ, ಏಷ್ಯಾದಲ್ಲೇ ಎರಡನೇ ಸ್ಥಾನ ಪಡೆದಿರುವ ಸಾಗರದಂತಹ ಬೃಹತ್ ಕೆರೆ. ಈ ಹೆಸರಿನ ರಹಸ್ಯವಾದರೂ ಏನು?...
ಅಜನ ಸಂಕಲ್ಪಕೆ ಅಮಿತ ಹರಕೆಯ ಬಲವುಆವರಣ ಕಳಚಿಳಿದು ಅಳಲು ನಗೆ ಹೊನಲಾಯ್ತುಇಲ್ಲಿಗೇತಕೆ ಬಂದೆ ಯಾವ ಪ್ರಾರಬ್ಧವೋಏನೇನು ಕಾದಿಹುದೋ ಭೀತಿ ಕಂಪನವೇನು ಈ ಘೋರ ಚಿಂತನೆಯೇ? ರೋಧನವು ಮುಗಿಲಾಯ್ತುಉಪ್ಪು ಸಾಸಿವೆ ಹಿಡಿದು ಹಿರಿಯಾಕೆ ಕಳವಳದಿಊಫೆನುತ ನೀವಳಿಸಿ ದೃಷ್ಟಿಯನು ತೆಗೆಯುತ್ತಋಷಿಯ ವಂಶಜ ನೀನು ಋಷಿ ಸದೃಶ ಮನವಿರಲಿ(ಎಲ್ಲರೂ ಯಾರಾದರೂ ಒಬ್ಬ...
ಮಧುರೈ ಮೀನಾಕ್ಷಿಗೆ ‘ಪೀಟರ್ ಪಾದುಕಂ’ ಈವತ್ತು ಗೂಗಲ್ ನಲ್ಲಿ ಏನೋ ಹುಡುಕುತ್ತಿದ್ದಾಗ ,ಆಕಸ್ಮಿಕವಾಗಿ ‘ಮಧುರೈ ಮೀನಾಕ್ಷಿಗೆ ಬ್ರಿಟಿಷ್ ಅಧಿಕಾರಿ ಕೊಟ್ಟ ಪಾದುಕೆಗಳು’ ಎಂಬ ಅರ್ಥ ಬರುವ ಇಂಗ್ಲಿಷ್ ಬರಹ ಕಾಣಿಸಿತು. ನಿನ್ನೆ ತಾನೇ ಮಧುರೈ ಮೀನಾಕ್ಷಿ ಅಮ್ಮನ ಬಗ್ಗೆ ಬರೆದ ಕಾರಣ, ಈ ಪವಾಡಸದೃಶ ನೈಜ ಘಟನೆಯನ್ನು...
“ಹತ್ತೂರು ಕೊಟ್ಟರೂ ಪುತ್ತೂರು ಬಿಡೆ” ಎಂಬ ಸುಂದರ ನಾಣ್ನುಡಿ ಪ್ರಚಲಿತವಾಗಿರುವ ಪುತ್ತೂರು ನಮ್ಮೂರು. ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರು ತಾಲೂಕಿನ ಮುಖ್ಯ ಪಟ್ಟಣವೂ ಆಗಿರುವ ಈ ಊರು; ಸುಂದರ ನಿಸರ್ಗ ಸಿರಿ, ಸಹಜ ಶಾಂತಪ್ರಿಯ ಜನರಿಗೆ ಹೆಸರಾಗಿದೆ. ಸುಮಾರು 800 ವರ್ಷಗಳ ಹಿಂದೆ ನಿರ್ಮಾಣಗೊಂಡಿರಬಹುದು ಎಂದು ಅಂದಾಜಿಸಲಾದ...
ಪುರಂದರದಾಸರ ಕಾಲದ ಸಾಮಾಜಿಕ ವ್ಯವಸ್ಥೆ: ಭಾರತೀಯ ಸಮಾಜವು ವೇದಗಳ ಕಾಲದ ವೇಳೆಗೇ ಸಮಾಜದ ಅಗತ್ಯಗಳನ್ನು ಪೂರೈಸುವ ನಿರ್ದಿಷ್ಟ ವರ್ಗಗಳಾಗಿ ವರ್ಗೀಕರಣಗೊಂಡಿತ್ತು. ಈ ವರ್ಗೀಕರಣವು ಅಗತ್ಯಗಳ ಪೂರೈಕೆಯು ನಿಶ್ಚಿತವಾಗಿ, ನಿರ್ದಿಷ್ಟವಾಗಿ ಮತ್ತು ಕರಾರುವಾಕ್ಕಾಗಿ ಉಂಟಾಗಲು ಪೂರಕವಾಗಿದ್ದಿರಬೇಕು. ಆ ಲಾಭವೇ ಆ ರೀತಿಯ ವರ್ಗೀಕರಣವನ್ನು ಸ್ಥಾಯಿಗೊಳಿಸುವಂತೆ ಮಾಡಿರಬೇಕು. ಇದರಿಂದ, ಒಟ್ಟಿನಲ್ಲಿ,...
ಮಗಳಲ್ಲ ನೀನು ದೇವತೆಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ ಶಾಪವಲ್ಲ ನೀನು ಭರವಸೆಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ ಅಪಶಕುನವಲ್ಲ ನೀನು ಅದೃಷ್ಟಹೃದಯದಲ್ಲಿಟ್ಟು ಬೆಳಸುತ್ತಿರುವೆ ದುರಾದೃಷ್ಟವಲ್ಲ ನೀನು ಸೌಭಾಗ್ಯಕಣ್ಣಿಗೆ ಒತ್ತಿಕೊಂಡು ಪೊರೆಯುತ್ತಿರುವೆ ಕಾಡುವ ಕಷ್ಟವಲ್ಲ ನೀನು ಮಮತೆಯ ಪುತ್ಥಳಿಪ್ರೀತಿ ಮಮಕಾರ ಸುರಿಸಿ ಪೋಷಿಸಿಸುತ್ತಿರುವೆ ಬೆಂಬಿಡದ ಭೂತವಲ್ಲ ನೀನು ಭೂತಾಯಿತಲೆಯ ಮೇಲಿಟ್ಟು...
ಒಬ್ಬ ಗೌರವಾನ್ವಿತ ಗೃಹಸ್ಥನ ಮನೆಯಲ್ಲಿ ಅವನಿಗಿದ್ದ ಒಬ್ಬಳೇ ಮಗಳ ಐದುವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆತ ತನ್ನ ಗೆಳೆಯರ ಬಳಗ, ಆಪ್ತೇಷ್ಟರೆಲ್ಲರನ್ನೂ ಆಹ್ವಾನಿಸಿದ್ದ. ಆ ಗುಂಪಿನಲ್ಲಿ ಒಬ್ಬ ನಾಸ್ತಿಕ ಗೆಳೆಯನೂ ಇದ್ದನು. ಆತ ಗೃಹಸ್ಥನ ಪುಟ್ಟ ಮಗಳಿಗೆ ಒಂದು ಸುಂದರವಾದ ಮರದ ಬೊಂಬೆಯನ್ನು ಉಡುಗೊರೆಯಾಗಿ ತಂದುಕೊಟ್ಟು...
ನಾವು ಅನುಭವಿಸುವ ಯಾವುದೇ ಸಂದರ್ಭಗಳನ್ನು ಅನುಭಾವಿಸಬೇಕೆಂದರೆ ಮನಸ್ಸಿನ ಅಭಿಮತ ಬಹಳವೇ ಮುಖ್ಯ. ಆಲೋಚನೆಗಳು, ಮನದ ಚಲನೆಗಳು ನಿಯಂತ್ರಣ ತಪ್ಪಿತೆಂದರೆ ಸಾಮಾನ್ಯ ಆಸೆಗಳೂ ಅನುಭವಕ್ಕೆ ಬಾರದಂತೆ ನಿಯಂತ್ರಣ ಕಳೆದುಕೊಳ್ಳುತ್ತವೆ. ನೋಟ ಮಾತಾಗುವ,ಮಾತು ಹಾಡಾಗುವ,ಹಾಡು ಅನುರಾಗವಾಗುವ ಸಮಯದಲ್ಲಿ ಸುಪ್ತಮನಸ್ಸಿನ ಚೇತನವು ನಿಯಂತ್ರಣ ತಪ್ಪುವುದು ಸಹಜ. ಆ ಕ್ಷಣದ ಯೋಚನೆಗಳು, ಯೋಜನೆಗಳು...
ನಿಮ್ಮ ಅನಿಸಿಕೆಗಳು…