ಭುವಿಗಿಳಿದ ದೇವತೆ
ಮಗಳಲ್ಲ ನೀನು ದೇವತೆ
ಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ
ಶಾಪವಲ್ಲ ನೀನು ಭರವಸೆ
ಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ
ಅಪಶಕುನವಲ್ಲ ನೀನು ಅದೃಷ್ಟ
ಹೃದಯದಲ್ಲಿಟ್ಟು ಬೆಳಸುತ್ತಿರುವೆ
ದುರಾದೃಷ್ಟವಲ್ಲ ನೀನು ಸೌಭಾಗ್ಯ
ಕಣ್ಣಿಗೆ ಒತ್ತಿಕೊಂಡು ಪೊರೆಯುತ್ತಿರುವೆ
ಕಾಡುವ ಕಷ್ಟವಲ್ಲ ನೀನು ಮಮತೆಯ ಪುತ್ಥಳಿ
ಪ್ರೀತಿ ಮಮಕಾರ ಸುರಿಸಿ ಪೋಷಿಸಿಸುತ್ತಿರುವೆ
ಬೆಂಬಿಡದ ಭೂತವಲ್ಲ ನೀನು ಭೂತಾಯಿ
ತಲೆಯ ಮೇಲಿಟ್ಟು ಮೆರೆದಿರುವೆ
ಆ ಭಗವಂತ ನೀಡಿದ ವರ ನೀನು
ಎನ್ನ ಪುಣ್ಯವ ನೆನೆದು ಸರ್ವಶಕ್ತನಿಗೆ ನಮಿಸಿರುವೆ
-ಕೆ.ಎಂ ಶರಣಬಸವೇಶ
(ಚಿತ್ರ ಕೃಪೆ – ರಾಜಶೇಖರ ತಾಳಿಕೋಟೆ. ಚಿತ್ರ ಕಲಾ ಶಿಕ್ಷಕರು ಉಡುಪಿ ಜಿಲ್ಲೆ)
ಚಂದದ ಕವನ
ಹೆಣ್ಣನ್ನು ಭಗವಂತನೊಡನೆ ಸಮೀಕರಿಸುವ ಅರ್ಥಗರ್ಭಿತವಾದ ಕವನ
ಮಗಳ ಕುರಿತು ಸೊಗಸಾಗಿ ಬರೆದಿದ್ದೀರಿ,
ಅರ್ಥ ಪೂರ್ಣ ವಾದ ಕವನ..ಸಾರ್
ಸುಂದರ ಭಾವನೆಗಳ ಮೆರವಣಿಗೆ!
ಕೆಲವೆಡೆ ಇಂದಿಗೂ ಹೆಣ್ಣು ಮಗುವನ್ನು ತುಚ್ಛವಾಗಿ ಕಾಣುವ ವಾಸ್ತವಿಕತೆ ನಡುವೆ ಮೂಡಿಬಂದ ಕವನ ಚೆನ್ನಾಗಿದೆ
Beautiful
ಭಾವಪೂರ್ಣ ಕವನ, ಇಷ್ಟವಾಯಿತು.