Daily Archive: February 15, 2024
ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ ನನ್ನ ಮನಸ್ಥಿತಿಗೆ ಹೊಂದುವಂತೆ ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇನನ್ನದೊಂದು ತರಹ ಮನೆಯೊಳಗಣ ಆಕ್ರೋಶ ಇದನ್ನು ನಾ ಕಲಿತೆ ಅಮ್ಮನಿಂದ ಅದಕ್ಕೆ ಮುಂಚೆ ಅವಳು ಕಲಿತಿರಬಹುದು ಅವಳಮ್ಮನಿಂದ ಹೀಗೇ………ಗ್ರೀಕರು ಇದಕ್ಕೆ ಒಂದು ಹೆಸರಿಟ್ಟಿರಬಹುದು ಈಗ ಜರ್ಮನರೂ ಸಹ ಹೆಚ್ಚು ಹೆಚ್ಚು ಅದರ ಬಗೆ ತಿಳಿಯುತ್ತಾ ಹೋದಷ್ಟು ಅವಳಂತರಂಗದೊಳಗಿನ ತುಮುಲಗಳ...
“ನವೋ ನವೋ ಭವತಿ ಜಾಯಮಾನಃ ” ದಿನವೂ ನಿತ್ಯಹೊಸತಾಗಿಕಾಣುವ ,ರಮಣೀಯತೆಯ ನಿಧಿ, ನನ್ನ ಸೌಂದರ್ಯ ಆರಾಧಕ, ತೇಜಪುಂಜ, ಸಕಲಕೂ ಜೀವದಾತನಾದ ಸೂರ್ಯನಿಗೆ ಮಿಗಿಲಾದ ಶಕ್ತಿ ಮತ್ತೊಂದಿಲ್ಲ..ಇಂತಹ ದೇವನ ಆರಾಧನೆಯ ದಿನವೇ ರಥಸಪ್ತಮಿ. “ಆದಿದೇವ ನಮಸ್ತುಭ್ಯಂ ಪ್ರಸೀದಂ ಮಮ ಭಾಸ್ಕರ, ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ”…ಎಂದು ಪ್ರಾರಂಭವಾಗುವ...
ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲಆಕೆ ನನ್ನೊಡನೆ ಮಾತನಾಡದೆನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ. ಏನು ಕಾರಣವಿರಬಹುದೆಂದುಅರಿಯಲು ಪ್ರಯತ್ನಿಸಿದೆಆದರೆ ಪ್ರತಿ ಬಾರಿಯೂ ಸೋತೆ.ಮೌನಕ್ಕೆ ಶರಣಾದೆ. ಇಂಥ ಮೌನ ಹಿಗ್ಗಿತು ನಿಮಿಷಗಳಿಂದಗಂಟೆಗಳಿಗೆ, ಗಂಟೆಗಳಿಂದ ದಿನಗಳುದಿನಗಳು ವಾರಗಳಲ್ಲಿಗೆ.ನಂತರ ಎಲ್ಲವೂ ಸಾಮಾನ್ಯ,ನಾನು ಪರಿಸ್ಥಿತಿಗೆ ಶರಣಾದೆ. ನನ್ನ ನೆಚ್ಚಿನ ಗೆಳತಿ, ನನ್ನ ಆದರ್ಶನನ್ನಾಪ್ತಳು,...
ಮನುಷ್ಯ ತನ್ನ ಜೀವನ ಪಥದಲ್ಲಿ ಬಂದುದನ್ನು ಬಂದಂತೆಯೇ ಸ್ವೀಕರಿಸಬೇಕು. ಅದರ ಸಾಧಕ- ಬಾಧಕಗಳ ಬಗ್ಗೆ ಚಿಂತಿಸಬಾರದು.ಮುಂದಾಗುವ ಪರಿಣಾಮದ ಬಗೆಗೆ ಯೋಚಿಸಿ ಭಯ ಭೀತರಾಗಿ ಕರ್ತವ್ಯದಿಂದ, ಜವಾಬ್ದಾರಿಯಿಂದ ಹಿನ್ನಡೆಯಬಾರದು ;ಎಂಬುದೇ ಶ್ರೀಮದ್ ಭಗವದ್ಗೀತೆಯ ಪರಮ ಸಂದೇಶವಾಗಿದೆ; ಸ್ಥಿತಪ್ರಜ್ಞನು ತನ್ನ ಕರ್ತವ್ಯವನ್ನು ಅರಿತು ಮುಂದುವರೆಯುತ್ತಾನೆ. ಉದಾಹರಣೆಗೆ ಶ್ರೀರಾಮಚಂದ್ರನು ಸುಖ –...
ಒಳ್ಳೆಯ ಹಾಗೂ ತಮಾಷೆಯ ನೆನಪುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕಂದಿನ ನೆನಪುಗಳೇ ನಮ್ಮ ಜೋಳಿಗೆಯೊಳಗೆ ತುಂಬಿರುವುದು ಹೆಚ್ಚು. ಆ ಮುಗ್ಧ ಮನಸ್ಸಿನಲ್ಲಿ ನೆಲೆ ನಿಂತ ನೆನಪುಗಳು ಸದಾ ಹಸಿರು.. ಅಷ್ಟೇ ಆಪ್ತ. ಅವುಗಳನ್ನು ಮೆಲುಕು ಹಾಕುವುದೆಂದರೆ ಬೆಲ್ಲ ತಿಂದಷ್ಟು ರುಚಿ. ಹಾಗೆಯೇ ಕೆಲವೊಮ್ಮೆ ಕೆಟ್ಟ ನೆನಪುಗಳೂ ಕಾಡದೆ...
1.ಉರಿಮೂತ್ರಕ್ಕೆ:– ಒಂದು ಸ್ಪೂನ್ ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಪ್ರಥಮವಾಗಿ ಜಗಿದು ನುಂಗಬೇಕು. 2. ರಕ್ತಾತಿಸಾರಕ್ಕೆ:- (1) ಕೂವೆ ಹುಡಿ 2 ಸ್ಪೂನು(ಮರಗೆಣಸು ಪುಡಿ ಮಿಶ್ರ ನಿಷಿದ್ಧ) ಯನ್ನು ಪ್ರಾತಃಕಾಲ ಎದ್ದ ಕ್ಷಣ ಕಾಸಿ ಆರಿದ ದನದ ಹಾಲಿನಲ್ಲಿ ಬೆರೆಸಿ ಕುಡಿಯಬೇಕು.(2) ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ ತುಪ್ಪ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ರಾಮೇಶ್ವರಂ-5 ಶಿವಲಿಂಗಗಳ ದರ್ಶನ ಬದುಕಿರುವಾಗ ಒಮ್ಮೆಯಾದರೂ ಕಾಶಿ-ರಾಮೇಶ್ವರಕ್ಕೆ ಭೇಟಿ ಕೊಟ್ಟು, ರಾಮೇಶ್ವರದ ಸಮುದ್ರದ ಮರಳನ್ನು ಕಾಶಿಯಲ್ಲಿರುವ ಗಂಗಾನದಿಗೆ ಹಾಗೂ ಗಂಗಾಜಲವನ್ನು ರಾಮೇಶ್ವರದ ಸಮುದ್ರದಲ್ಲಿ ವಿಲೀನಗೊಳಿಸಿದರೆ ಜೀವನ ಪಾವನವಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಉತ್ತರದ ಬದರಿನಾಥ, ದಕ್ಷಿಣದ ರಾಮನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕನಾಥ...
ಮರಗಳ ಎಲೆಗಳ ಮರೆಕೋಗಿಲೆ ಕಾಣದು ಎಲ್ಲೂಯಾರೇ ಕೇಳಲಿ ಬಿಡಲಿಎದೆ ಆಳದಿಂದಲದರ ಕುಕಿಲು ಬಿಸಿಲಿನ ತಾಪಕೆ ಅದು ದೂರಿದೆಯೇಸಹಿಸಲಾರದೇ ಬೇಗೆ ?ನೆರಳಿನ ತಂಪ ಸವಿದು ಹೊಗಳಿದೆಯೇಪ್ರಕೃತಿ ಇತ್ತ ಸೊಗಕೆ ! ಹಕ್ಕಿಯೊರಲ ಒಡಲಲಿ ಇದೆಯೆಕರುಳ ಕತ್ತರಿಸಿ ಹಾರಿದಅಮ್ಮನ ಕಾಣುವ ಬಯಕೆ ಕೂಗುವ ಕಂಠದಿ ಕೇಳಿದೆಯೆತುತ್ತನಿತ್ತೂ ಹೊರಹಾಕಿದಸಾಕಿದ ತಾಯಿಯ ನೆನಕೆ...
ಕನ್ನಡ ಪ್ರೀತಿಯ ರಹದಾರಿಗಳು: ಮಲೆನಾಡಿನ ಕವಿ ಉಪ್ಪುಕಡಲಿನ ರವಿ ಎಂದು ಪ್ರಖ್ಯಾತರಾದ ಪ್ರೊ: ಎಸ್.ವಿ. ಪರಮೇಶ್ವರ ಭಟ್ಟರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿನವರು. ಕನ್ನಡದ ಪ್ರಾಚೀನ ಕಾವ್ಯ-ಪ್ರಕಾರ, ಛಂದೋ ಪ್ರಬೇಧಗಳಾದ ಸಾಂಗತ್ಯ, ತ್ರಿಪದಿ, ವಚನ, ಏಳೆಗಳನ್ನು ಹೊಸಗನ್ನಡ ಕಾವ್ಯರೂಪದಲ್ಲಿ ಪುನರುಜ್ಜೀವನಗೊಳಿಸಿದ ಪ್ರಯೋಗಶೀಲರು. ದೇಸಿಯ ಅನನ್ಯತೆಯನ್ನು ಉಳಿಸಿದ...
ನಿಮ್ಮ ಅನಿಸಿಕೆಗಳು…