Monthly Archive: March 2022
ಬಲಿಯುತ್ತಿದೆ ಕೊಟ್ಟು ಹೋಗೆನ್ನುವ ಭಾವ ಎಲ್ಲ ಬಿಟ್ಟು ಹೊರಡುವ ಮುನ್ನ ಆಲಯದ ಚೌಕಟ್ಟಿನ ಬದುಕಲಿ ಬಂದವರಿಗೆನನ್ನೆದೆಲ್ಲವ ಕೊಟ್ಟ ತೃಪ್ತಿಯೊಂದಿಗೆ ಉಳಿದಿದ್ದಷ್ಟೆ ನನಗಾಗಿ ಬದುಕಿನ ಇಳಿಹೊತ್ತಲಿ ನೊಗವಿಳಿಸಿದ ನೆಮ್ಮದಿ ಏಗಿದ್ದಾಗಿದೆ ಆಲಯದ ಬದುಕಿನ ಬವಣೆಗಳೊಂದಿಗೆ ಆಲಯದೊಳಗಿನ ಬದುಕು ಸಂಕೀರ್ಣ ಪ್ರತಿಫಲಾಪೇಕ್ಷೆಯ ಸ್ವಾರ್ಥದ ಲೆಕ್ಕಮಮಕಾರಗಳ ಬಂಧನದ ಸಿಕ್ಕುಗಳಒಳತೋಟಿಯ ತೀರದ ತೊಳಲಾಟ ಹಿಟ್ಟಿಲ್ಲದಾಗ ಹೊಟ್ಟೆಗೆಮುಚ್ಚಬೇಕು ಕಿಟಕಿ ಬಾಗಿಲುಮಲ್ಲಿಗೆಯಿದ್ದಾಗ ಜುಟ್ಟಿಗೆಹಾರುಹೊಡೆಯ ಬೇಕು ಬಾಗಿಲು ರಟ್ಟು ಮಾಡದೆ ಗುಟ್ಟಿನ...
ನಾ ನಿನ್ನ ಮರೆಯಲಾರೆ…! ನಾಲ್ಕು ದಿನಗಳ ನಮ್ಮ ಸಿನಿಮಾ ನಗರಿಯ ಸುತ್ತಾಟದ ಗಮ್ಮತ್ತನ್ನು ಮೆಲುಕು ಹಾಕುತ್ತಾ ಇದ್ದಂತೆಯೇ ಪುಟ್ಟ ಮಗುವಿನ ಒಡನಾಟದಲ್ಲಿ ದಿನಗಳು ಸರಾಗವಾಗಿ ಓಡುತ್ತಿದ್ದವು. ಅದಾಗಲೇ ಚಳಿಗಾಲ ಮುಗಿದು ವಸಂತಕಾಲ ಪ್ರಾರಂಭವಾಯ್ತು. ನಾವಿದ್ದ ಬೇ ಏರಿಯಾವು, ಕ್ಯಾಲಿಫೋರ್ನಿಯಾ ರಾಜ್ಯದಲ್ಲೇ, ಸಮಶೀತೋಷ್ಣ ಪ್ರದೇಶದ ಜನರಿಗೆ ವಾಸಿಸಲು ಅತ್ಯಂತ...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಮಲಗಿದ್ದ ಲಕ್ಷ್ಮಿಗೆ ಮನೆಯ ಹೊರಗಡೆ ಏನೋ ಸದ್ದುಗದ್ದಲ ಕೇಳಿಸಿ ಥಟ್ಟನೆ ಎಚ್ಚರಿಕೆಯಾಯಿತು. ಹಾಗೇ ಸದ್ದಿಗೆ ಕಿವಿಕೊಟ್ಟಳು. “ಷ್..ನಿಮ್ಮನ್ನು ಇಷ್ಟುಬೇಗ ಎದ್ದುಬನ್ನಿ ಎಂದು ಯಾರು ಹೇಳಿದರು? ಹೋಗಿ ಇನ್ನೂ ಸ್ವಲ್ಪ ಹೊತ್ತು ಮಲಗಿ. ಅಪರೂಪಕ್ಕೆ ಅಮ್ಮ ಮಲಗಿದ್ದಾರೆ. ಗಲಾಟೆ ಮಾಡಬೇಡಿ” ಭಾವನಾ ತನ್ನ ಕಿರಿಯರಿಗೆ...
ಬೆಳಗಿನಿಂದ ಇದ್ದ ತುಡಿತ, ದುಗುಡ, ಕಾತುರಗಳಿಗೆಲ್ಲಾ ಒಂದು ತೆರೆಬಿದ್ದಂತಾದುದು, ಲೇಬರ್ ಬಾರ್ಡಿನಿಂದ ಹೊರ ಬಂದು ಡಾ.ಸೌಭಾಗ್ಯಲಕ್ಷ್ಮಿ – ʼಸುಖವಾಗಿ ಪ್ರಸವವಾಯಿತು, ನಾರ್ಮಲ್ ಡೆಲಿವರಿ, ಮಗು ಮತ್ತು ತಾಯಿ ಆರೋಗ್ಯದಿಂದಿದಾರೆ ಯಶೋಧಾ ಅವರೆ, ಮುದ್ದಾದ ಮೊಮ್ಮಗಳು ಜನಿಸಿದ್ದಾಳೆ, ಇನ್ನೊಂದು ಅರ್ಧ ಗಂಟೆಯಲ್ಲಿ ಮಗು ಮತ್ತು ಬಾಣಂತಿಯನ್ನು ವಾರ್ಡಿಗೆ ಶಿಫ್ಟ್...
ಮಾರ್ಚ್ 8 ರಂದು ಆಚರಿಸುವ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ, ಪ್ರಪಂಚದ ಎಲ್ಲ ಮಹಿಳೆಯರ ಸ್ಥಾನ-ಮಾನ ಹೆಚ್ಚಿಸುವತ್ತ ಹಾಗೂ ಅವರು – ಅವರ ಕುಟುಂಬದ ಆರೋಗ್ಯ ರಕ್ಷಣೆಯತ್ತ ಒತ್ತು ಕೊಡುತ್ತಿದೆ. ಈ ದೇಶದಲ್ಲಿ ಹಿಂದಿನಿಂದ ಕೆಲವರು ಮನುವಿನ ಸೂತ್ರ ಹೇಳುತ್ತಾರೆ – ‘‘ಪಿತಾ ರಕ್ಷತಿ ಕೌಮಾರೆ, ಭರ್ತಾ ರಕ್ಷತಿ...
ಭಾರತೀಯ ಮಹಿಳೆಯ ಸಂಸ್ಕೃತಿ- ಸಂಸ್ಕಾರವು ವಿಶ್ವಮಾನ್ಯತೆ ಪಡೆದು ಆದರ್ಶವೂ ಆದರಣೀಯವೂ ಆಗಿರುವಂತಾದ್ದು. ಇಲ್ಲಿಯ ಮಹಿಳೆಯ ಕುಟುಂಬ ಬಾಂಧವ್ಯ ಬಲು ವಿಸ್ತಾರವಾದುದು. ಅದೊಂದು ರೀತಿಯ ವಿಶಾಲವಾದ ಆಲದ ಮರದಂತೆ!. ಒಬ್ಬ ಸ್ತ್ರೀ ಅಥವಾ ನಾರಿ ತನ್ನ ಜನನದಿಂದ ಮೊದಲ್ಗೊಂಡು ಮರಣದ ತನಕ ಎರಡು ಕುಟುಂಬದ ಸದಸ್ಯಳಾಗಿ ಹಾದುಹೋಗುತ್ತಾಳೆ.ಹುಟ್ಟು ಕುಟುಂಬ...
ಪ್ರತಿವರ್ಷ ಕಣ್ಣಿನ ಪರೀಕ್ಷೆ ಮಾಡಿಸುವುದು ನನ್ನ ಅಭ್ಯಾಸ. ಅಂತೆಯೇ ಈ ವರ್ಷದ ಕಣ್ಣಿನ ತಪಾಸಣೆಗೆ ಹೋದೆ. ಬೆಳಿಗ್ಗೆ ಹತ್ತು ಗಂಟೆಯ ಸಮಯ. ಆಗಲೇ ಕೆಲವರು ಅಲ್ಲಿ ಬಂದಿದ್ದರು. ಸ್ಥಿತಿವಂತರ ಹಾಗೆ ಕಾಣುವ ಒಂದು ಕುಟುಂಬವೂ ಅಲ್ಲಿತ್ತು. ತಾಯಿ, ಮಗಳು ಅಳಿಯ ಮತ್ತು ಎರಡು ವರ್ಷ ಇನ್ನೂ ತುಂಬದ...
ಹಾಲಿವುಡ್ ನಲ್ಲಿ ಕೊನೆ ದಿನ… ಅದಾಗಲೇ ಸಂಜೆ ನಾಲ್ಕು ಗಂಟೆ.. ನಮ್ಮಲ್ಲಿಯ ಜಾತ್ರೆಯಲ್ಲಿ ಇರುವಂತೆ ಕಿಕ್ಕಿರಿದ ಜನಸಂದಣಿಯನ್ನು ಅಮೇರಿಕದಲ್ಲಿ ಮೊದಲ ಬಾರಿಗೆ ನೋಡಿದೆ ಎನಿಸಿತು. ಆದರೆ ಅಲ್ಲಿ ನಮ್ಮಲ್ಲಿಯಂತೆ ಗೌಜಿ ಗದ್ದಲ ಕಾಣಲಾರದು. ಅತ್ಯಂತ ವಿಶಾಲವಾದ ಎಕರೆಗಟ್ಟಲೆ ಜಾಗದಲ್ಲಿ ಆಕಾಶದೆತ್ತರದ ಜೈಂಟ್ ವೀಲ್ ಗಳು, ಉರುಳಾಡಿಕೊಂಡು ಚಿತ್ರವಿಚಿತ್ರ...
–ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ”ರೀ.. ನಾಳೆ ಜೋಯಿಸರ ಮನೆಗೆ ಹೋದಾಗ ಅವರೇನಾದರೂ ಬೇಗ ಲಗ್ನ ಮಾಡಿಕೊಡಿ ಎಂದರೆ ಒಪ್ಪಿಕೊಂಡುಬಿಡೋಣ” ಎಂದಳು ಲಕ್ಷ್ಮಿ.‘ಲಕ್ಷ್ಮೀ ನಿನಗೆ ಬುದ್ಧಿ ಇದೆಯಾ? ಅದು ಹೇಗೆ ಆಗುತ್ತೇ? ಮನೆಯಲ್ಲಿ ಮೊದಲ ಶುಭಕಾರ್ಯ ನಡೆಸುತ್ತಿರುವುದು, ಮನೆಗೆಲ್ಲಾ ಸುಣ್ಣ ಬಣ್ಣ ಮಾಡಿಸಬೇಕು. ತಿಂಡಿ ಸಾಮಾನುಗಳು, ಒಡವೆ ವಸ್ತ್ರ...
ಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತುಏಳುಸುತ್ತಿನ ದಳಗಳ ಮಲ್ಲಿಗೆಯು ಬಿರಿದಿತ್ತುಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತು ಅರಳುಮುತ್ತಿನ ಎಸುಳುಗಳ ಮಲ್ಲಿಗೆಯು ವಿಕಸಿಸಿತ್ತು ಪ್ರಕೃತಿಯ ಪವಾಡದಲ್ಲಿ ಶ್ವೇತವರ್ಣದಲ್ಲಿ ಬೆಳಗಿತ್ತುನಿಸರ್ಗದ ನೆರವಿನಲ್ಲಿ ನಗುವಲ್ಲಿ ಮೆರೆದಿತ್ತುನೋಡುವ ಕಂಗಳಿಗೆ ಆನಂದವ ನೀಡಿತ್ತು ಭವಿಷ್ಯವನರಿಯದೆ ನಗು ನಗುತ ಮೆರೆದಿತ್ತು ಗುಡಿ ಸೇರುವುನೋ ಮುಡಿ ಸೇರುವುನೋ ತಿಳಿಯದೆ ಚಿಂತಿಸಿತ್ತು...
ನಿಮ್ಮ ಅನಿಸಿಕೆಗಳು…