ಮಲ್ಲಿಗೆ ..ದಾರಿ ಎಲ್ಲಿಗೆ?
ಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತು
ಏಳುಸುತ್ತಿನ ದಳಗಳ ಮಲ್ಲಿಗೆಯು ಬಿರಿದಿತ್ತು
ಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತು
ಅರಳುಮುತ್ತಿನ ಎಸುಳುಗಳ ಮಲ್ಲಿಗೆಯು ವಿಕಸಿಸಿತ್ತು
ಪ್ರಕೃತಿಯ ಪವಾಡದಲ್ಲಿ ಶ್ವೇತವರ್ಣದಲ್ಲಿ ಬೆಳಗಿತ್ತು
ನಿಸರ್ಗದ ನೆರವಿನಲ್ಲಿ ನಗುವಲ್ಲಿ ಮೆರೆದಿತ್ತು
ನೋಡುವ ಕಂಗಳಿಗೆ ಆನಂದವ ನೀಡಿತ್ತು
ಭವಿಷ್ಯವನರಿಯದೆ ನಗು ನಗುತ ಮೆರೆದಿತ್ತು
ಗುಡಿ ಸೇರುವುನೋ ಮುಡಿ ಸೇರುವುನೋ ತಿಳಿಯದೆ ಚಿಂತಿಸಿತ್ತು
ಉದುರುವುನೋ ಒಣಗುವುನೋ ಅರಿಯದೆ ಕಾದಿತ್ತು
ಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತು
ಪರಿಮಳ ಪ್ರಸರಿಸಿ ಅಂದವ ಆಡಂಬರಿಸಿ ಮನಗಳ ಸೆಳೆದಿತ್ತು
ಕಾಲದಲ್ಲಿ ಕಣ್ಮರೆಯಾಗುವನೆಂಬ ಸತ್ಯದ ಅರಿವಿತ್ತು
ಕ್ಷಣಿಕತೆಯ ಸೃಷ್ಟಿಯಲ್ಲಿ ತನ್ನಾತ್ಮವ ಪ್ರಕಟಿಸಿತ್ತು
-ಮಿತ್ತೂರು ಎನ್. ರಾಮಪ್ರಸಾದ್
ಅರ್ಥಪೂರ್ಣ ಕವನ. ಧನ್ಯವಾದಗಳು
ಸೂಕ್ಷ್ಮ ಚಿಂತನೆ ಯ ಕವನ ಧನ್ಯವಾದಗಳು ಸಾರ್
Nice one
ಮಲ್ಲಿಗೆಯೊಳಗಿನ ಪರಕಾಯ ಪ್ರವೇಶ ಸೊಗಸಾಗಿ ಆಗಿದೆ.
ಸುಂದರ, ಶ್ವೇತ, ಸುವಾಸನೆಯುಕ್ತ ಮಲ್ಲಿಗೆಯ ಮನದ ಮಾತು ಭಾವ ತುಂಬಿ ಸೊಗಸಾಗಿ ಹರಿದಿದೆ…
ನಿಮ್ಮೆಲ್ಲರ ಪ್ರೋತ್ಸಾಹ ನೀಡುವ ಹೇಳಿಕೆಗಳಿಗೆ ನನ್ನ ವಂದನೆಗಳು /
ಸೂಪರ್