ಅದೃಷ್ಟ
ಲಕ್ಷೋಪಲಕ್ಷ ಸುಡು ಸುಡುವ,
ಕೊರೆ ಕೊರೆವ, ಹೊಗೆ-ಧಗೆಯ,
ನರಪಿಳ್ಳೆ, ಅರೆಪಿಳ್ಳೆ,
ಜಂತು ಜೀವಾಣುಗಳಿಲ್ಲದ,
ನೀರು-ನಿಡಿ ಸುಳಿಗಾಳಿಗಳಿಲ್ಲದ ಭಯಂಕರ ಗ್ರಹಗಳ ಬಿಟ್ಟು
ಈ ಭುವಿಯಲ್ಲಿ ಇಳಿದದ್ದು!
ಕೆಂಪೊಡೆವ ಸೂರ್ಯ, ತಂಪಿಡುವ ಚಂದ್ರರು ಮೆರೆದು ಕಾಪಿಡುವ,
ಹಸಿರು ಕಾನನ, ನೀಲ ಬಾನಿನ,
ಹಳದಿ ಕಿತ್ತಳೆ ಕಂದು ನೇರಳೆ
ಬಣ್ಣದೋಕುಳಿಯ ನೆಲೆವೀಡಿನಲ್ಲಿ
ಹೆಜ್ಜೆ ಇಟ್ಟದ್ದು!
ಅಗಾಧ ಬ್ರಹ್ಮಾಂಡದಲ್ಲಿ
ನೀಲಚೆಂಡು ತಿರುಗುವಲ್ಲಿ
ಭರತಭೂಮಿ ಖಂಡದಲ್ಲಿ
ಚೊಕ್ಕ-ಚೆಲುವು ನಾಡಿನಲ್ಲಿ
ಚಿಕ್ಕ ದೇಹವೊಂದರ ಅಂಡಕೆ,
ಸಹಸ್ರ, ಸಹಸ್ರ ಆಕಾಂಕ್ಷಿ ಮೀನುಗಳು ಆತುರದಿ, ಕಾತುರದಿ
ಈಜುತ್ತ ಬಂದಾಗ… ಹೆತ್ತವ್ವ
ಎನ್ನಮಾತ್ರವನಾಯ್ಕೆ ಮಾಡುತ್ತ
ಮೀನೊಂದು ಮನುಷ್ಯನಾಗಲು
ಸಹಕರಿಸಿ ಸಲಹಿದ್ದು!
ಸದ್ಭಾವ ಸದ್ಧರ್ಮ,
ಸಜ್ಜೀವ-ಸಂಗಮ-ಸಮಾಗಮ ಸಂಪೂರ್ಣತೆಯಲ್ಲಿ
ಸಡಗರದಿ
ಸಂಭ್ರಮಸುತ್ತ ಇರುವುದು!
ಭಲೆ ಅದೃಷ್ಟವೋ ಅದೃಷ್ಟ!
ಪಟ್ಟಿ ದೊಡ್ಡದು ಲೇಖ ಚಿಕ್ಕದು
ಮಹಿಮೆ ತಾನದು ದಿವ್ಯ
ದೃಶ್ಯ, ತೆರೆ ತೆರೆಯೆ ರಮ್ಯ
ಅನನ್ಯ, ಅಪೂರ್ವ, ಅಪಾರ!
-ಕೆ.ಆರ್.ಎಸ್. ಮೂರ್ತಿ
ಸುಂದರ ಕಲ್ಪನೆ ; ನೈಜ ವಿಜ್ಞಾನದ ಮೆರಗು. ಅಭಿನಂದನೆಗಳು
Very well narrated our anguish … very imaginative.
Keep the spirit on.
ಪದಪ್ರಯೋಗ ಅಪೂರ್ವ ಸೊಗಸಿನಿಂದ ಕೂಡಿದೆ. ಭಾಷೆ ಭಾವಗಳ ಸಮ್ಮಿಲನ ಅನನ್ಯವಾಗಿದೆ. ಕಾವ್ಯ ಓದುವಿಕೆಯ ಸೊಗಸು ಹೆಚ್ಚಿಸಿದ ನಿಮಗೆ ಧನ್ಯವಾದಗಳು…
ಬ್ರಹ್ಮಾಂಡ ಸುತ್ತಿ ಭುವಿಗಿಳಿದ ಪರಿ ಸೊಗಸಾಗಿದೆ!
Nice one. Shabdhalankara and Arthalankara both in a proper mix
ಸುಂದರ ಅರ್ಥಪೂರ್ಣ ಕವನ.ಅಭಿನಂದನೆ
ಸುಂದರ ಕಲ್ಪನೆ.ದಿವ್ಯ ಮಹಿಮೆಯ ಹಾಡಲು ಪಾಡಲು ಶಕ್ತಿಗೆ ಮೀರಿದ್ದು ಎನ್ನಯವ ವಿನಯದಲ್ಲಿ ಕವಿತೆ ಸಾರ್ಥಕತೆಕಂಡಿದೆ.
ಸೂಪರ್ ಸರ್
ಅರ್ಥಪೂರ್ಣ ಕವನ..
ಚಂದದ ಕವನ ಸಾರ್
ಸೊಗಸಾದ ಕವನ.
ಸ್ಪಂದಿಸಿದ ಎಲ್ಲ ಓದುಗರಿಗೆ ಧನ್ಯವಾದಗಳು.