Daily Archive: August 3, 2023
ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾದಿಂದ ಐದು ಕಿ.ಮೀ. ದೂರದಲ್ಲಿರುವ ಕಿಸಾಮ ಹೆರಿಟೇಜ್ ವಿಲೇಜ್ ನೋಡಲು ಉತ್ಸಾಹದಿಂದ ಹೊರಟೆವು. ದಾರಿಯಲ್ಲಿ ನಮ್ಮ ಗೈಡ್ ಈ ಪ್ರವಾಸೀ ಸ್ಥಳದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ. ನಾಗಾ ಪದದ ಮೂಲ ಬರ್ಮೀ ಭಾಷೆಯ ನಾ-ಕಾ ಎಂಬ ಸ್ವರಗಳಿಂದ ಬಂದಿದೆ. ಅಂದರೆ ಮೂಗಿಗೆ ಆಭರಣ...
ಕವಿ ಕೆಎಸ್ ನರಸಿಂಹ ಸ್ವಾಮಿ ಅವರ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ .ಇಲ್ಲಿಯವರೆಗೂ 25 ಮುದ್ರಣಗಳನ್ನು ಕಂಡ ಕನ್ನಡದ ಕೃತಿ .ಇದರ ಕವನಗಳನ್ನು ಹೊಂದಿಸಿಕೊಂಡು ಕಥೆ ಬರೆದು ಹಾಡುಗಳಿಗಾಗಿ ರೂಪುಗೊಂಡ ಸಿನಿಮಾ ಎಂಬ ಹೆಗ್ಗಳಿಕೆಯೂ ಇದರದೇ. ಪ್ರೇಮಗೀತೆಗಳ ಕವಿ ಎಂದು ಹೆಸರಿದ್ದರೂ ಕವಿ ತಮ್ಮ ಗೀತೆಗಳನ್ನು...
ಅದೊಂದು ಪವಿತ್ರವಾದ , ಆಕರ್ಷಣೀಯವಾದ ಸ್ಥಳ. ವಿಶಾಲವಾದ ದ್ವಾರ. ದ್ವಾರದಲ್ಲಿ ಶಿಸ್ತು ಪಾಲಿಸಲು ವಿವರಿಸುವ ಸೆಕ್ಯೂರಿಟಿಗಳು ಪ್ರೀತಿಯಿಂದ ಗೈಡ್ ಮಾಡುವರು. ಹೊರಗಿನಿಂದ ನೋಡಲು ದೇಗುಲದ ಛಾಯೆಹೊಂದಿರುವ ಈ ವನದಲ್ಲಿ ಒಳಹೊಕ್ಕರೆ ಎಡಕ್ಕೆ ತಿರುಗಿದರೆ ಶ್ರೀ ಅವಧೂತ ದತ್ತಪೀಠ, ಧ್ಯಾನಮಂದಿರ,ಯೋಗಮಂದಿರ, ಕಛೇರಿ ಹೀಗೆ ಸಿಮೆಂಟ್ ಕಟ್ಟಡಗಳು ಆಕರ್ಷಿಸುತ್ತವೆ. ಬಲಕ್ಕೆ...
ಗೋವಿನ ಹಾಡು ಬಹಳ ಪ್ರಸಿದ್ಧವಾದ ಜನಪದ ಕಾವ್ಯ. ಇದನ್ನು ಅನೇಕರು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿದ್ದಾರೆ. ಇವತ್ತಿನ ಅನಿಮೇಷನ್ ಭಾಷೆಯಲ್ಲಿ ಅಥವಾ ಕಾರ್ಟೂನ್ ಭಾಷೆಯಲ್ಲಿ ವಾಸ್ತವತೆ ಮತ್ತು ಆದರ್ಶಗಳನ್ನು ಭಾವನಾತ್ಮಕವಾಗಿ ಸಹಜ ಪ್ರಾಕೃತಿಕ ಪರಿಸರದ ಹಿನ್ನಲೆಯಲ್ಲಿ ಈ ಕಾವ್ಯ ಬಹಳ ಸುಂದರವಾಗಿ ಬೆಸೆದಿದೆ. ಇದನ್ನು ಪುನಃ ಓದುವ,...
ಜುಲೈ 24,2023 ಸೋಮವಾರಸದ್ದು ಮಾಡಿತೆಂದು ಮೊಬೈಲ್ ಪರದೆ ನೋಡಿದಾಗ ತಮ್ಮನ ಮಗಳ ಕರೆ. ಯಾವತ್ತೂ ಕರೆ ಮಾಡದ ಅವಳಿಂದ ಕರೆ ಬಂದದ್ದನ್ನು ನೋಡಿ ಎದೆಯೊಳಗೆ ಡವಡವ. ತಮ್ಮನ ಹೆಂಡತಿಯ ಧ್ವನಿ “ನೀವು ಎಲ್ಲಿದ್ದೀರಿ?”. “ಕಾಲೇಜಿನಲ್ಲಿ” ಎಂದೆ. “ಏನಾಯಿತು?” ಎಂದಾಗ ಆ ಕಡೆಯಿಂದ ಬಿಕ್ಕಳಿಕೆಯ ಧ್ವನಿ. “ನಿಮ್ಮಮ್ಮ ಮಾತಾಡ್ತಾ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಬಫೆಲೊದಲ್ಲಿ ಬೆಳಗು… ಸ್ವಲ್ಪ ತಡವಾಗಿಯೇ ಎಚ್ಚೆತ್ತ ನಮಗೆ ಉದ್ದಿನ ದೋಸೆಯ ಘಮ ಮೂಗಿಗೆ ಬಡಿಯಿತು. ಹೊರಗಡೆಗೆ ಮಂಜು ಕವಿದ ವಾತಾವರಣದಲ್ಲಿ ಹಸಿರುಸಿರಿಯ ನಡುವೆ ಅಲ್ಲಲ್ಲಿ, ದೂರ ದೂರಕ್ಕೆ ಹಲವಾರು ಮನೆಗಳು ಮೈ ತುಂಬಾ ಮಂಜಿನ ತೆಳ್ಳಗಿನ ಬಿಳಿ ಹೊದಿಕೆ ಹೊದ್ದು ಖುಷಿಯಿಂದ ಕುಳಿತಿರುವುದು...
ಯಮ ಎಂಬ ಹೆಸರು ಕೇಳಿದೊಡನೆ ಸಾವಿನ ನೆನಪು ಆವರಿಸಿ ಬಿಡುತ್ತದೆ. ಆಯುಷ್ಯ ಮುಗಿದಾಗ ಯಮದೂತರು ಬಂದು ಪ್ರಾಣವನ್ನು ಎಳೆದೊಯ್ಯುತ್ತಾರಂತೆ. ಯಮಪಾಶಕ್ಕೆ ಕೊರಳೊಡ್ಡಬೇಕಂತೆ ಎಂದೆಲ್ಲ ಕಥೆಗಳಲ್ಲಿ ಕೇಳುತ್ತೇವೆ. ಇಂತಹ ಯಮನೆಂದರೆ ಯಾರು? ಆತನ ಚರಿತ್ರೆಯೇನು? ಆತನಿಗೆ ಜೀವ ಕೊಂಡೊಯ್ಯವ ಕೆಲಸವನ್ನು ಯಾರು ಕೊಟ್ಟರು?ಅವರು ಮೃತ್ಯುದೇವತೆಯೇ? ಸೂರ್ಯ ಹಾಗೂ ದೇವಶಿಲ್ಪಿ...
ಹೋಗಿದ್ದೆವು ಸ್ನೇಹಿತರೆಲ್ಲ ಸೇರಿಬಂಡೀಪುರಕ್ಕೆಹುಲಿ ಸಂರಕ್ಷಿತ ಪ್ರದೇಶಕ್ಕೆಸಫಾರಿ ಬಸ್ ಏರಿ..ಮಾರ್ಗ ಮಧ್ಯದಲ್ಲಿಸಾರಂಗಗಳು ಮುಗುಳುನಗುತ್ತಾ ಬಂದು ಗೌರವ ಸೂಚಿಸಿದವುಜಿಂಕೆಗಳು ಜಿಗಿಯುತ್ತ ಬಂದು ಸಂತಸ ವ್ಯಕ್ತಪಡಿಸಿದವುಸುಂದರ ನವಿಲೊಂದು ಬಂದು ಗರಿಗೆದರಿ ನರ್ತಿಸಿತುಆದರೆ ಹುಲಿ ಯಾಕೋ ಬರಲಿಲ್ಲಸ್ನೇಹಿತರು ಧೈರ್ಯ ಮಾಡಿ ಅದರ ಫೋಟೋ ಕ್ಲಿಕ್ಕಿಸಲು ಸಜ್ಜಾಗಿದ್ದರುನಾನು ಧೈರ್ಯ ಮಾಡಿ ಅದರ ಬಗ್ಗೆ ಬರೆದ...
ಒಂದು ಚಿಕ್ಕದಾದ ನೌಕೆಯಲ್ಲಿ ನಾಲ್ಕು ಜನ ಪ್ರಯಾಣ ಮಾಡುತ್ತಿದ್ದರು. ಒಬ್ಬನು ವಿದ್ಯಾವಂತ, ಮತ್ತೊಬ್ಬ ಶಕ್ತಿವಂತ. ಮೂರನೆಯವನು ರೂಪವಂತ ಮತ್ತು ನಾಲ್ಕನೆಯವನು ಸಿರಿವಂತ. ಅವರಿಗೆ ತಮ್ಮಲ್ಲಿರುವ ವಿಶೇಷತೆಗಳ ಬಗ್ಗೆ ತುಂಬ ಹೆಮ್ಮೆಯಿತ್ತು. ಇದರಿಂದಾಗಿ ಪ್ರತಿಯೊಬ್ಬರೂ ಇತರರನ್ನು ಹೀಗಳೆಯುತ್ತ ತಾನೆ ಶ್ರೇಷ್ಠವಾದವನು ಎಂದು ಜಂಭ ಕೊಚ್ಚಿಕೊಳ್ಲುತ್ತಿದ್ದರು. ನೌಕೆಯು ಸಮುದ್ರದ ಮಧ್ಯಭಾಗದಲ್ಲಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕೆಂಭೂತ ಸಿಂಗಾಪುರಿನ ವಾಸ ಗಿರೀಶನ ಹೊಸ ಜೀವನದ ಮೊದಲನೆಯ ಅಧ್ಯಾಯ. ಅವನ ಸಹಪಾಠಿಯರು ಯಾರೂ ಅಲ್ಲಿ ಇರಲಿಲ್ಲ. ಸಹಪಾಠಿಯರೇ ಏಕೆ ಅವನ ಪರಿಚಯದವರೂ ಇಲ್ಲ ಅಲ್ಲಿ. ಕೆಲಸದ ಜೊತೆ ಮೊದಲು ಅಲ್ಲಿ ವಿಶ್ವವಿದ್ಯಾಲಯದಲ್ಲಿ ಇನ್ನೊಂದು ಮ್ಯಾನೆಜ್‍ಮೆಂಟ್ ಪದವಿ ಪಡೆದ. ಒಮ್ಮೆ ಅವನ ಕಂಪನಿಯವರು ಅವನನ್ನು...
ನಿಮ್ಮ ಅನಿಸಿಕೆಗಳು…