Monthly Archive: September 2023

9

ವಾಟ್ಸಾಪ್ ಕಥೆ 34 : ನಮ್ಮ ಕೆಲಸವನ್ನು ನಾವೇ ಮಾಡಬೇಕು.

Share Button

ಒಬ್ಬ ವ್ಯಾಪಾರಿಯು ಒಂಟೆಯೊಂದನ್ನು ಸಾಕಿಕೊಂಡಿದ್ದ. ಅವನು ಅದರ ಮೇಲೆ ಸರಕುಗಳನ್ನು ಹೇರಿಕೊಂಡು ಊರಿಂದೂರಿಗೆ ವ್ಯಾಪಾರ ಮಾಡಲು ಹೋಗುತ್ತಿದ್ದ. ಅವನಿಗೆ ಒಂಟೆಯೇ ವ್ಯಾಪಾರಕ್ಕೆ ಮುಖ್ಯ ಆಧಾರವಾಗಿತ್ತು. ಒಮ್ಮೆ ಪಕ್ಕದೂರಿನಲ್ಲಿ ಜಾತ್ರೆ ನಡೆಯುತ್ತಿತ್ತು. ವ್ಯಾಪಾರಿಯು ಮುಂಜಾನೆಯೇ ಸರಕುಗಳನ್ನು ಹೆಚ್ಚಾಗಿಯೇ ಹೇರಿಕೊಂಡು ವ್ಯಾಪಾರಮಾಡಲು ಹೊರಟ. ಸಂಜೆಯವರೆಗೆ ವ್ಯಾಪಾರ ಚೆನ್ನಾಗಿ ಆಯ್ತು. ಎಂದಿಗಿಂತಲೂ...

10

ಕಾದಂಬರಿ : ‘ಸುಮನ್’ – ಅಧ್ಯಾಯ 18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಮುಂದೇನು? ತಿಂಗಳು ಉರುಳಿ ವಿದ್ಯುಚ್ಛಕ್ತಿ ಹಾಗೂ ನೀರಿನ ಬಿಲ್ ಬಂದು ಬಿದ್ದಿತ್ತು. ಸುಮನ್ ಕೈಗೆತ್ತಿಕೊಂಡು ಶನಿವಾರ ಇವನ್ನು ಕಟ್ಟಬೇಕು ಎಂದುಕೊಳ್ಳುತ್ತ ಅವುಗಳನ್ನು ನೋಡಿದಳು. ಇಸಿಎಸ್ (ಎಲೆಕ್ಟ್ರಾನಿಕ್ ಕ್ಲಿಯರೆನ್ಸ್ ಸೇವೆ) ಮುಖಾಂತರ ಅವರಪ್ಪನ ಬ್ಯಾಂಕಿನಿಂದ ಅವನ್ನು ಆಗಲೇ ಕಟ್ಟಲಾಗಿತ್ತು. ಇಷ್ಟು ದಿನ ಬಿಲ್ ಬಂದ ತಕ್ಷಣ...

8

ಪುಸ್ತಕ ಪರಿಚಯ : ಮಲೆಯಾಳದ ಪೆಣ್ ಕಥನ …

Share Button

ಪುಸ್ತಕ :– ಮಲೆಯಾಳದ ಪೆಣ್ ಕಥನ (ಮಲೆಯಾಳದ ಖ್ಯಾತ ಲೇಖಕಿಯರ ಕಥೆಗಳು)ಅನುವಾದಕರು :- ಡಾ. ಕಮಲಾ ಹೆಮ್ಮಿಗೆಪ್ರಕಾಶಕರು :- ಸೃಷ್ಟಿ ಪ್ರಕಾಶನ. ಪ್ರತಿಯೊಂದು ಭಾಷೆಯೂ ಅದನ್ನು ಆಡುವವರ ಮಟ್ಟಿಗೆ ವಿಶಿಷ್ಟವಾದುದೇ. ಯಾವ ಭಾಷೆಗೂ ಮೇಲು ಕೀಳು ಎಂಬುದು ಇಲ್ಲ . ಎಲ್ಲವೂ ಆಯಾಯ ಪ್ರದೇಶಕ್ಕೆ ತಕ್ಕಂತೆ ಶ್ರೇಷ್ಠವೇ....

6

ಭಾರತ ದೇಶದ ಹರ್ ಘಾರ್ ಚಲ್ ಯೋಜನೆ….

Share Button

ಭಾರತ ದೇಶದ ಹರ್ ಘಾರ್ ಚಲ್ ಯೋಜನೆಯಿಂದ ಜನರ ಆರೋಗ್ಯ ಹಾಗೂ ಉಳಿತಾಯದ ಮೇಲಾದ ಪರಿಣಾಮಗಳು:ವಿಶ್ವ ಆರೋಗ್ಯ ಸಂಸ್ಥೆಯ ವರದಿ. ಅತಿಸಾರ ಕಾಹಿಲೆಗಳಿಂದ ಸಾಯಬಹುದಿದ್ದ ಅಂಗವೈಕಲ್ಯದ 14 ದಶಲಕ್ಷ ಜೀವ ವರ್ಷಗಳ ಉಳಿಸುವಿಕೆಯಿಂದ, ಭಾರತ ದೇಶ 101 ಶತಕೋಟಿ ಡಾಲರ್‌ಗಳಷ್ಟು ಅಂದಾಜು ವೆಚ್ಚ ಉಳಿಸಿದೆ ಎಂದು WHO...

9

ಅವಿಸ್ಮರಣೀಯ ಅಮೆರಿಕ – ಎಳೆ 62

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಬೇಸ್ತು….!! ಇಳಿಹಗಲು ಎರಡೂವರೆ ಗಂಟೆಯ ಸಮಯ.. ಪುಟ್ಟ ಮಕ್ಕಳಿಗೆ ಆಟವಾಡಲು ಇರುವ ದೊಡ್ಡ ತೊಟ್ಟಿಯಂತಹ ಆಟದ ಬಯಲಲ್ಲಿ ಹಾಕಿದ ಮರಳಿನಲ್ಲಿ ಹತ್ತಾರು ಮಕ್ಕಳು ಆಟವಾಡುತ್ತಿದ್ದರೆ, ಅವರೊಂದಿಗಿರುವ ಹಿರಿಯರು ಮಾತು, ನಗುವಿನಲ್ಲಿ ಮುಳುಗಿದ್ದರು. ನಮ್ಮ ಪುಟಾಣಿಗಳೂ ಅಲ್ಲಿ ಆಡಲು ಹಾತೊರೆದು ಆ ಕಡೆಗೆ ನಡೆದಾಗ,...

11

ಐಸ್ ಕ್ಯಾಂಡೀ ಡಬ್ಬ…

Share Button

ಬೇಸಿಗೆ ರಜೆಯ ಒಂದು ಮಧ್ಯಾಹ್ನ “ಅಮ್ಮ ಐಸ್ ಕ್ರೀಮ್ ಕೊಡ್ಸೂ,” ಅಂತ ಮಗಳ ರಾಗ ಒಂದೇ ಸಮನೆ ಶುರುವಾಯ್ತು.ಪಾಪ ಅವಳು ತಾನೇ ಏನು ಮಾಡಲು ಸಾಧ್ಯ ಬೇಸಿಗೆ ಬಿಸಿ ಅಷ್ಟೊಂದು ಕತ್ತಿಕೊಂಡು ಉರಿತಾ ಇರುವಾಗ.” ದಿನಾ ನಿನ್ನದೊಂದು ಐಸ್ ಕ್ರೀಮ್ ರಾಗ,” ಅಂತ ಬೈದರೂ ಕೊಡಿಸದೆ ಇರಲಾಗಲಿಲ್ಲ.ಡಯಾಬಿಟಿಸ್...

4

ಯುವಕ್ರೀತನ ಜ್ಞಾನೋದಯ

Share Button

ವಿದ್ಯಾರ್ಥಿ ಜೀವನವೆಂದರೆ ಒಬ್ಬ ವ್ಯಕ್ತಿಯ ಜೀವಿತದ ವಸಂತಕಾಲ, ಪ್ರಾಥಮಿಕ ಹಂತದಲ್ಲಿ ಮಕ್ಕಳು; ಹೆತ್ತವರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದರೆ ಪ್ರೌಢ ತರಗತಿಗಳಿಗೆ ತಲುಪಿದಾಗ ಸ್ವತಃ ಆಲೋಚನಾ ಶಕ್ತಿ, ವಿಚಾರ, ವಿನಿಮಯ ಬೆಳೆಯುತ್ತದೆ. ಉತ್ಸಾಹ, ಹುಮ್ಮಸ್ಸು ಸುರಿಸುತ್ತದೆ. ಯಾವುದೇ ಒಂದು ಸಾಧನೆಯತ್ತ ಗುರಿಮುಟ್ಟಲು ಯೋಗ್ಯ ತಳಹದಿಯನ್ನು ಹಾಕಿಕೊಳ್ಳಬೇಕಾಗುತ್ತದೆ. ಇಲ್ಲದೆ...

5

ತೊರೆದು ಜೀವಿಸಬಹುದೇ…. ಡೀಸೆಲ್

Share Button

ಕೆಲವು ವಸ್ತುಗಳನ್ನು ಬಿಟ್ಟು ಬದುಕು ನಡೆಸುತ್ತೇವೆ ಎಂದರೆ ಅದು ಕನಸಿನ ಮಾತು. ನಾವು ನಡೆದಾಡುವ ರಸ್ತೆಯಲ್ಲಿ ಡರ್ ಬುರ್ ಎಂದು ಸದ್ದು ಮಾಡುವ ವಾಹನಗಳು ಇಲ್ಲದ ರಸ್ತೆಯ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.  ಹಾಗಾದರೆ ಆ ಜಗತ್ತಿಗೆ ಲಗ್ಗೆಯಿಟ್ಟ ಪೆಟ್ರೋಲ್,ಡೀಸಲ್ ಇಲ್ಲದ ಜಗತ್ತನ್ನೂ  ಊಹಿಸಲೂ ಸಾಧ್ಯವಿಲ್ಲ ಅಲ್ಲವೇ… ಅದಕ್ಕೆ...

18

‘ಹೂಗಳು’ ಸೃಷ್ಟಿಯ ಸುಂದರ ಚಿತ್ತಾರಗಳು.

Share Button

ಪ್ರಕೃತಿಯ ಸೃಷ್ಟಿಯಲ್ಲಿ ಒಂದು ಸುಂದರ ವೈಶಿಷ್ಟ್ಯವೆಂದರೆ ಬಣ್ಣಬಣ್ಣದ ಹೂಗಳು. ಅದಕ್ಕೇನೋ ಕನ್ನಡ ಚಲನಚಿತ್ರಗೀತೆಯೊಂದರಲ್ಲಿ ಮೊದಲ ಸಾಲುಗಳು ‘ಹೂವೂ ಚೆಲುವೆಲ್ಲಾ ನಂದೆಂದಿತು. ಹೆಣ್ಣೂ ಹೂವ ಮುಡಿದು ಚೆಲುವೇ ತಾನೆಂದಿತೂ’. ಹೂವಿನ ಸೌಂದರ್ಯಕ್ಕೆ ಮಾರುಹೋಗದವರಾರು. ಅದನ್ನು ಮುಡಿದು ಹೆಣ್ಣಿನ ಚೆಲುವು ಹೆಚ್ಚಾಗುವುದು. ಅಂದಿನಿಂದಲೇ ಹೂವು, ಹೆಣ್ಣಿನ ಸಂಬಂಧ ಪ್ರಾರಂಭವಿರಬೇಕು. ಶುಭ್ರ...

6

ಕಲ್ಲರಳಿ ಹೂವಾದ ನಾಗಾಲ್ಯಾಂಡ್‌ನಲ್ಲಿರುವ ಕಛಾರಿ ಕಂಬಗಳು

Share Button

ಎಲ್ಲಿ ನೋಡಿದರೂ ಗುಡ್ಡ ಗಾಡುಗಳು, ಒಂದೊಂದು ರಾಜ್ಯದಲ್ಲೂ ನಾಲ್ಕಾರು ಬುಡಕಟ್ಟು ಜನಾಂಗಗಳು, ಅವರ ಭಾಷೆ, ಧರ್ಮ, ಬದುಕುವ ರೀತಿ ನೀತಿಗಳೆಲ್ಲಾ ಬೇರೆ ಬೇರೆಯೇ. ಸದಾ ಒಬ್ಬರ ಮೇಲೊಬ್ಬರು ಆಕ್ರಮಣ ಮಾಡುತ್ತಾ ತಮ್ಮ ತಮ್ಮ ಪ್ರಾಂತ್ಯದ ಎಲ್ಲೆಯನ್ನು ವಿಸ್ತರಿಸಿಕೊಳ್ಳುತ್ತಾ ಬದುಕುತ್ತಿದ್ದ ಇವರ ಮಧ್ಯೆ ‘ತಲೆಬೇಟೆಯ ನಾಗಾಗಳೆಂಬ’ ಹೆಸರು ಹೊಂದಿದ್ದ...

Follow

Get every new post on this blog delivered to your Inbox.

Join other followers: