ಹುಲಿ ಕಾಣಲಿಲ್ಲ
ಹೋಗಿದ್ದೆವು ಸ್ನೇಹಿತರೆಲ್ಲ ಸೇರಿ
ಬಂಡೀಪುರಕ್ಕೆ
ಹುಲಿ ಸಂರಕ್ಷಿತ ಪ್ರದೇಶಕ್ಕೆ
ಸಫಾರಿ ಬಸ್ ಏರಿ..
ಮಾರ್ಗ ಮಧ್ಯದಲ್ಲಿ
ಸಾರಂಗಗಳು ಮುಗುಳುನಗುತ್ತಾ ಬಂದು ಗೌರವ ಸೂಚಿಸಿದವು
ಜಿಂಕೆಗಳು ಜಿಗಿಯುತ್ತ ಬಂದು ಸಂತಸ ವ್ಯಕ್ತಪಡಿಸಿದವು
ಸುಂದರ ನವಿಲೊಂದು ಬಂದು ಗರಿಗೆದರಿ ನರ್ತಿಸಿತು
ಆದರೆ ಹುಲಿ ಯಾಕೋ ಬರಲಿಲ್ಲ
ಸ್ನೇಹಿತರು ಧೈರ್ಯ ಮಾಡಿ ಅದರ ಫೋಟೋ ಕ್ಲಿಕ್ಕಿಸಲು ಸಜ್ಜಾಗಿದ್ದರು
ನಾನು ಧೈರ್ಯ ಮಾಡಿ ಅದರ ಬಗ್ಗೆ ಬರೆದ ಕವಿತೆಯನ್ನು ಅದರೆದುರು ವಾಚಿಸಲು ಸಿದ್ಧನಾಗಿದ್ದೆ
ಹುಲಿ ಬರಲಿಲ್ಲ ನಮಗೆ ಕಾಣಲೇ ಇಲ್ಲ..
ಬಸ್ ನಲ್ಲಿ ಒಂದು ಕಡೆ ಬರೆದಿದ್ದರು ಹುಲಿ ಕಂಡರೆ ನಿಮ್ಮ ಅದೃಷ್ಟ ಎಂದು
ಆದರೆ ಹುಲಿಗೆ ಇರಲಿಲ್ಲ
ನಮ್ಮನು ಕಾಣುವ
ನನ್ನ ಕವಿತೆ ಕೇಳುವ
ಅದೃಷ್ಟ!…
ಆದರೆ ಅಂದು ಬಂಡೀಪುರದಲ್ಲಿ ಕಾಣದ ಹುಲಿ
ಇಂದು ಹುಲಿ ದಿನದ ಕಾರಣ..
ಎಲ್ಲಾ ಪತ್ರಿಕೆಯಲ್ಲೂ ಕಾಣುತ್ತಿವೆ.
-ಮಾಲತೇಶ್ ಹುಬ್ಬಳ್ಳಿ
ನಮ್ಮ ಕಾಡುಗಳೇ ಅಳಿವಿನ ಅಂಚಿನಲ್ಲಿ ಇವೆ, ಇನ್ನು ಹುಲಿಗಳು ಎಲ್ಲಿಂದ ಕಾಣ ಸಿಗುತ್ತವೆ ಸರ್..? ಚೆನ್ನಾಗಿದೆ ಕವನ.
Thanks..,
ಹುಲಿಗಳಿರಲಿ…ಹುಲ್ಲು ಸಿಗುತ್ತದೆ ಯೇ..ನೋಡಿ.. ಮೊಗದಲ್ಲಿ ನಗೆ ಮೂಡಿಸಿದ ಕವನ ಸಾರ್.
Thanks..
ನಾವು ನೋಡಬೇಕೆಂದಾಗ ಸಿಗುವುದು ಬಹಳ ಕಷ್ಟ
ಹುಲಿಗಳನ್ನು ಸಫಾರಿಗಳಲ್ಲಿ ನೋಡಬೇಕಷ್ಟೆ
ಚಂದದ ಕವಿತೆ
ಹುಲಿಯ ಕುರಿತ ವಿಡಂಬನಾತ್ಮಕ ಕವನ ಚೆನ್ನಾಗಿದೆ.
ಕೊನೆಯ ಪಂಚ್ ಚೆನ್ನಾಗಿದೆ