ವಾಟ್ಸಾಪ್ ಕಥೆ 28 : ಶ್ರೇಷ್ಠತೆ.
ಒಂದು ಚಿಕ್ಕದಾದ ನೌಕೆಯಲ್ಲಿ ನಾಲ್ಕು ಜನ ಪ್ರಯಾಣ ಮಾಡುತ್ತಿದ್ದರು. ಒಬ್ಬನು ವಿದ್ಯಾವಂತ, ಮತ್ತೊಬ್ಬ ಶಕ್ತಿವಂತ. ಮೂರನೆಯವನು ರೂಪವಂತ ಮತ್ತು ನಾಲ್ಕನೆಯವನು ಸಿರಿವಂತ. ಅವರಿಗೆ ತಮ್ಮಲ್ಲಿರುವ ವಿಶೇಷತೆಗಳ ಬಗ್ಗೆ ತುಂಬ ಹೆಮ್ಮೆಯಿತ್ತು. ಇದರಿಂದಾಗಿ ಪ್ರತಿಯೊಬ್ಬರೂ ಇತರರನ್ನು ಹೀಗಳೆಯುತ್ತ ತಾನೆ ಶ್ರೇಷ್ಠವಾದವನು ಎಂದು ಜಂಭ ಕೊಚ್ಚಿಕೊಳ್ಲುತ್ತಿದ್ದರು. ನೌಕೆಯು ಸಮುದ್ರದ ಮಧ್ಯಭಾಗದಲ್ಲಿ ಪ್ರಯಾಣಿಸುತ್ತಿತ್ತು. ಇದ್ದಕ್ಕಿದ್ದಂತೆ ಬಿರುಗಾಳಿ ಬೀಸತೊಡಗಿತು. ನೌಕೆ ಅಲೆಗಳ ಹೊಡೆತಕ್ಕೆ ಭಯಂಕರವಾಗಿ ತೊನೆದಾಡುತ್ತಿತ್ತು. ಅದು ಎಲ್ಲಿ ಬುಡಮೇಲಾಗಿಬಿಡುತ್ತದೋ, ಎಲ್ಲಿ ನಾವೆಲ್ಲರೂ ಜಲಸಮಾಧಿಯಾಗಿ ಬಿಡುತ್ತೇವೆಯೋ ಎಂದು ಆತಂಕಕ್ಕೊಳಗಾದರು. ಪ್ರತೊಯೊಬ್ಬರೂ ಭಕ್ತಿಯಿಂದ ಸಮುದ್ರ ದೇವತೆಯನ್ನು ಕುರಿತು ತಮ್ಮನ್ನು ಕಾಪಾಡಬೇಕೆಂದು ಪ್ರಾರ್ಥಿಸಿದರು.
ಸಮುದ್ರ ದೇವತೆ ಇವರ ಪ್ರಾರ್ಥನೆಗೆ ಒಲಿದು ಕಾಣಿಸಿಕೊಂಡಳು. ನಾಲ್ಕೂ ಜನರು ಅವಳಿಗೆ ವಂದಿಸಿ ‘ತಾಯೀ, ಕರುಣೆ ತೋರಿಸಿ ನಮ್ಮ ಪ್ರಾಣವನ್ನು ಉಳಿಸು ಎಂದು ಗೋಳಾಡಿದರು. ಆಕೆ ಕನಿಕರದಿಂದ ನೋಡಿ ನೀವು ನಾಲ್ಕು ಜನರಿದ್ದೀರಿ. ನಿಮಗೆ ನೀವೇ ಶ್ರೇಷ್ಠ ವ್ಯಕಿಗಳೆಂಬ ಹೆಮ್ಮೆಯಿಂದ ಬೀಗುತ್ತಿದ್ದೀರಿ. ನಾನು ನಿಮಗೊಂದು ಆಯ್ಕೆ ನೀಡುತ್ತೇನೆ. ನಿಮ್ಮಲ್ಲಿ ಎಲ್ಲರಿಗಿಂತ ಶ್ರೇಷ್ಠರು ಯಾರೋ ಅವರು ಇತರರನ್ನು ಕಾಪಾಡುವಂತಹ ಶಕ್ತಿ ಕೊಡುತ್ತೇನೆ” ಎಂದಳು.
ಆಗ ಅವರು ನಾಲ್ವರೂ ”ತಾಯೀ ನಮ್ಮದು ತಪ್ಪಾಯಿತು. ನಮ್ಮ ಒಣಜಂಭ ನಾಶವಾಯಿತು. ಕಣ್ಣು ತೆರೆಯಿತು. ನಮ್ಮಲ್ಲಿ ಯಾರೂ ಇತರರಿಗಿಂತ ಶ್ರೇಷ್ಠರಲ್ಲ. ನೀನೇ ಸರ್ವಶಕ್ತಳು. ನೀನು ಅನುಗ್ರಹ ಮಾಡಿ ನಮ್ಮ ಪ್ರಾಣಗಳನ್ನು ಉಳಿಸಿಕೊಡು” ಎಂದು ಗೋಗರೆದರು.
ಸಮದ್ರದೇವಿ ”ಹೌದೇ, ಹಾಗಾದರೆ ನೀವು ಇನ್ನೊಬ್ಬರನ್ನು ಕೀಳೆಂದು ನೋಡದೆ ಸಮಾನವಾಗಿ ಕಾಣುತ್ತಾ ಪರಸ್ಪರ ಪ್ರೀತಿಯಿಂದ ಇರಿ” ಎಂದು ಮಾಯವಾದಳು. ಬಿರುಗಾಳಿ ನಿಂತು ಸಮುದ್ರ ಶಾಂತವಾಯಿತು. ನಾಲ್ಕೂಜನರು ಸುರಕ್ಷಿತವಾಗಿ ಪ್ರಯಾಣಿಸಿ ತಮ್ಮ ಊರನ್ನು ತಲುಪಿದರು. ಇನ್ನೆಂದೂ ತಾವೇ ಶ್ರೇಷ್ಠರು, ಮತ್ತೊಬ್ಬರು ಕೀಳು ಎಂದು ಹೊಗಳಿಕೊಳ್ಳುವುದನ್ನು ಬಿಟ್ಟರು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಮಾಲಾ
Very nice
ಧನ್ಯವಾದಗಳು ನಯನಮೇಡಂ
ಸೊಗಸಾದ ಕತೆ
ಧನ್ಯವಾದಗಳು ಗೆಳತಿ ವೀಣಾ
ಚಂದದ ಕಥೆ.
ಧನ್ಯವಾದಗಳು ಸಾಹಿತ್ಯ ಅಭಿಮಾನಿಗೆ.
ಕಥೆಗೆ ತಕ್ಕ ರೇಖಾಚಿತ್ರ ಕೂಡಾ ಚೆನ್ನಾಗಿ ಬಂದಿದೆ
ಧನ್ಯವಾದಗಳು.. ಸಾಹಿತ್ಯ ಸಹೃದಯಿಗರಿಗೆ
ಇಂದಿನ ಕಾಲಕ್ಕೆ ಅತ್ಯಂತ ಸೂಕ್ತವಾದ ಸಂದೇಶವುಳ್ಳ ಕಥೆ
ಉತ್ತಮ ಸಂದೇಶ ಹೊತ್ತ ಪುಟ್ಟ ಕಥೆಯೊಂದಿಗಿನ ಚಂದದ ಸೂಕ್ತ ರೇಖಾಚಿತ್ರ ಮನತುಂಬಿತು.. ನಾಗರತ್ನ ಮೇಡಂ.
ಧನ್ಯವಾದಗಳು ಶಂಕರಿ ಮೇಡಂ
ಧನ್ಯವಾದಗಳು ಗಾಯತ್ರಿ ಮೇಡಂ
ಕಥೆಯ ಹೆಣಿಗೆ ಚೆನ್ನಾಗಿದೆ
ಧನ್ಯವಾದಗಳು ಪದ್ಮಿನಿ ಮೇಡಂ