Monthly Archive: April 2021

8

ಸಗಣಿಯಲ್ಲಿ ಅದ್ದಿದ ನಿಂಬೆಹಣ್ಣು

Share Button

ಅಕ್ಕನ ಮನೆಯ ಲೆಕ್ಕದ ಪೂಜೆ ಒಂದು ಛತ್ರದಲ್ಲಿ ನಡೆಯಲಿತ್ತು ಅದಕ್ಕಾಗಿ ಹೊರಟಿದ್ದೆ. ಜೊತೆಯಲ್ಲಿ ಪುಟ್ಟ ಮೊಮ್ಮಗನೂ ಇದ್ದ. ಅದಾಗಲೇ ತಡವಾಗಿತ್ತು. ಬೇಗ ಬೇಗ ನಡೆದುಕೊಂಡೇ ಹೋಗುತ್ತಿದ್ದಾಗ, ಒಂದೆಡೆ ಪಾದ್ರಿಯೊಬ್ಬರು ಕಂಡರು. ಭಕ್ತಗಣವೂ ಇತ್ತು.  ಭಕ್ತರು  ಹಸಿಸೆಗಣಿಯಲ್ಲಿ ಅದ್ದಿದ ನಿಂಬೆಹಣ್ಣು ಬೀಸಾಕುತ್ತಿದ್ದರು.  ಒಂದು ನಿಂಬೆಹಣ್ಣು ನನ್ನ ತಲೆಗೆಬಿತ್ತು. ವಾಸನೆ ಬೇರೆ ಸಿಟ್ಟುಗೊಂಡು...

13

ಭಲೇ ಭಲೇ ಎಲೆ ಕಳ್ಳಿ! ಔಷಧಿಯ ಭಂಡಾರ ಈ ಮಳ್ಳಿ

Share Button

ಕಾಲೇಜಿನ ಕೈತೋಟದಲ್ಲಿ ಅರಳಿದ್ದ ಆ ಹೂವನ್ನು ಜೀವನದಲ್ಲಿ ಮೊದಲ ಬಾರಿಗೆ ಕಂಡಿದ್ದೆ. ಗಿಡಸಮೇತ ಹೂವಿನ ಚಿತ್ರವನ್ನು ಕೈಲಿದ್ದ ಮೊಬೈಲಿನಲ್ಲಿ ಸೆರೆ ಹಿಡಿದು, “ಹೂವಿನ ಚೆಲುವಿಗೆ ಮನಸೋತೆ” ಎಂಬ ಶೀರ್ಷಿಕೆಯೊಂದಿಗೆ ಹಾಕಿದ ವಾಟ್ಸಾಪ್ ಸ್ಟೇಟಸ್ ನೋಡಿ “ಇದು ಯಾವ ಹೂವು?” ಎಂದು ಕೇಳಿದವರ ಪ್ರಶ್ನೆಗೆ  ಉತ್ತರ ಹುಡುಕಲು ಅಂತರ್ಜಾಲ...

8

ಅಕ್ಕಾ ಕೇಳವ್ವಾ…ಚರಣ 3-ಆರು ಹಿತವರು?

Share Button

  ಬದುಕಿನಲ್ಲಿ ಬೇವು ಬೆಲ್ಲವನ್ನು ಸವಿದು, ಏಳು ಬೀಳುಗಳನ್ನು ಕಂಡಿದ್ದೆ. ಹಾಲಾಹಲವನ್ನೇ ಕಂಠದಲ್ಲಿ ಧರಿಸಿದ ನೀಲಕಂಠನ ನೆನೆದು ಹೆಜ್ಜೆಯಿಡುತ್ತಿದ್ದೆ. ನನಗಾಗಿ ಶಿಕ್ಷಕ ವೃತ್ತಿ ಆಯ್ಕೆ ಮಾಡಿದ್ದ ಅಪ್ಪಾಜಿಗೆ ನಮೊ ನಮೋ. ತರಗತಿಗಳಲ್ಲಿ ಪಠ್ಯದ ಜೊತೆಜೊತೆಗೇ ಬದುಕಿನ ಅರ್ಥ, ಮಾನವೀಯ ಮೌಲ್ಯಗಳು, ವಿದ್ಯೆಯಿಂದ ಅಳವಡಿಸಿಕೊಳ್ಳಬೇಕಾದ ಸಂಸ್ಕಾರ-ಎಲ್ಲವನ್ನೂ ಹದಿಹರೆಯದ ವಿಧ್ಯಾರ್ಥಿಗಳಿಗೆ...

8

ಹೊಸಭಾವ

Share Button

ಹಚ್ಚಿಟ್ಟ ಹಣತೆಯಿಂದ ಬೆಳಗಿದ ಬೆಳಕಿನ ಕಿರಣಕೆ ಅಂಧಕಾರವು ಮರೆಯಾಗಿ ಅಲೆಅಲೆಯಾಗಿ ಬಿಡುತ್ತಿತ್ತು ಚೈತ್ರ ಮಾಸದ ಸುವಾಸನೆ ನೀರಿನ ಒಳ ಗರ್ಭದಿಂದ ಮೇಲೇರಿತು ಸುಂದರವಾದ ಅರಳಿದ ತಾವರೆ ಹೂ ಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿ ರಂಗು ರಂಗಿನ ಹೊಂಬಣ್ಣದ ಸೂರ್ಯನ ನವ ಕಿರಣಗಳು ನನ್ನ ಮೈ ಸೋಕಿತು ಮೆಲ್ಲನೆ ಮುತ್ತಿನಂತೆ...

3

ಕೆ ಎಸ್‌ ನ ಕವಿನೆನಪು 40: ಸಹೋದ್ಯೋಗಿಗಳ ಸ್ನೇಹಾಭಿಮಾನ-ಬಾಡಿಗೆ ಮನೆ ಪ್ರಸಂಗ

Share Button

  ನಮ್ಮ ತಂದೆ ಕರ್ನಾಟಕ ಗೃಹಮಂಡಳಿಯಲ್ಲಿ ಸುಪರಿಂಟೆಂಡೆಂಟ್ ಆಗಿ 1970 ರಲ್ಲಿ ನಿವೃತ್ತರಾದರು. ತಮ್ಮ ಸೇವೆಯ ಅವಧಿಯಲ್ಲಿ ಬಹುಪಾಲು ಸಹೋದ್ಯೋಗಿಗಳ ಸ್ನೇಹಾಭಿಮಾನಗಳನ್ನೂ ಸಂಪಾದಿಸಿದ್ದರು. ಅವರಲ್ಲಿ ಒಬ್ಬರು ನಾರಾಯಣ ಐಯ್ಯಂಗಾರ್ ನಮ್ಮ ನೆರೆಮನೆಯವರೇ ಆಗಿದ್ದು, ನಮ್ಮ ಹಾಗೂ ಅವರ ಕುಟುಂಬದವರ ನಡುವೆ  ಒಂದು ಸೌಹಾರ್ದಯುತ ಬಾಂಧವ್ಯವಿತ್ತು. ಶ್ರೀನಾಥ್,ದಶರಥರಾಮಯ್ಯ,ಮುಂತಾದವರ ಹೆಸರುಗಳನ್ನು ಆಗಾಗ್ಗೆ...

6

‘ನೆಮ್ಮದಿಯ ನೆಲೆ’-ಎಸಳು 14

Share Button

(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಯ ಸರಳ ವಿವಾಹ, ಅಚ್ಚುಮೆಚ್ಚಿನ ಸೊಸೆಯಾಗಿ, ಆರತಿಗೊಂದು, ಕೀರುತಿಗೊಂದು ಮಕ್ಕಳಾಗಿ, ಆಧುನಿಕ ಮನೋಭಾವನೆಯೊಂದಿಗೆ ತಮ್ಮ ವಿವಾಹದ ವ್ಯವಸ್ಥೆ ತಾವೇ ಮಾಡಿಕೊಳ್ಳುವುದು ಬಿಸಿತುಪ್ಪದಂತಾಗುತ್ತದೆ. ಮಗ ತಮ್ಮ ಅಗತ್ಯಕ್ಕಾಗಿ ಅಮೇರಿಕಾಕ್ಕೆ ಕರೆಯಿಸಿಕೊಳ್ಳುತ್ತಾನೆ, ಬರಬರುತ್ತಾ ಸೊಸೆಯ ಅನಾದರ ಗಮನಕ್ಕೆ ಬರುತ್ತದೆ…ಈ...

7

ಹೆರಿಗೆ

Share Button

ಒಮ್ಮೊಮ್ಮೆ ಮನಸ್ಸಿನ ಗರ್ಭದೊಳಗೆ ಭಾವಗಳ ಭ್ರೂಣ ತಿಣುಕಾಡಿ ತಿಣುಕಾಡಿ ಕಂಗೆಡುಸುತ್ತಿದೆ ಒಳಗೆ ಉಳಿಯಲಾರದೆ ಹೊರಗೆ ಬರಲಾರದೆ ಒಂಬತ್ತು ತಿಂಗಳು ಒಂಬತ್ತು ದಿನ ತುಂಬಿದರು ಹೆರಿಗೆಯಾಗದೆ ಕಂಗೆಟ್ಟು ಕಾಯುವ ಬಸುರಿ ಹೆಂಗಸಿನಂತೆ ನನ್ನ ಪಾಡಾಗುತ್ತದೆ ಕೊನೆಗೊಂದು ದಿನ ಅಮೃತ ಮುಹೂರ್ತದ ಕ್ಷಣ ಭಾವ ಬೇನೆ ಹೆಚ್ಚಾಗಿ ಇನ್ನು ಇರಲಾರೆ...

8

ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 3

Share Button

(ಈ) ಕ್ರಿಸ್ತಶಕೆಯ ವಿಶಿಷ್ಟ ಸ್ತ್ರೀಯರು ವಿದುಷಿಯರು, ಕವಯಿತ್ರಿಯರು: ಸಂಗೀತ, ನೃತ್ಯ, ಗೃಹಾಲಂಕರಣ, ವರ್ಣಚಿತ್ರಕಲೆ, ತೋಟಗಾರಿಕೆ, ಆಟದ ಸಾಮಾನುಗಳ ತಯಾರಿಕೆಯಲ್ಲಿ ಸ್ತ್ರೀಯರು ನಿರತರಾಗಬೇಕೆಂದು ಧರ್ಮಶಾಸ್ತ್ರಕಾರರು ನಿರ್ದೇಶಿಸಿದ್ದರೂ ದೂರದ ಗುರುಕುಲಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದ ಹುಡುಗರೊಂದಿಗೆ ಹುಡುಗಿಯರೂ ಇರುತ್ತಿದ್ದರು. ಅವರು ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದರು, ಕಾವ್ಯ, ಛಂದಸ್ಸು ಮತ್ತು ವಿವಿಧ...

7

ಸುಜಯನೊಂದಿಗೆ ಬೆಳಗಿನ ಸುತ್ತಾಟ

Share Button

ನನ್ನ ತಮ್ಮನ ಮೊಮ್ಮಗ ಅಂದರೆ ನನ್ನ ಮೊಮ್ಮಗನೇ- ನಮ್ಮ ಸೌಜನ್ಯಳ ನಾಲ್ಕು ವರ್ಷದ ಪೋರ ಸುಜಯ -ಇವತ್ತು ಬೆಳಗ್ಗೆ ಕಾಫಿ ತಿಂಡಿಮುಗಿಸಿದ ಬಳಿಕ ಓಡೋಡುತ್ತ ಬಂದು ಹೇಳಿದ- ‘ ಅಲ್ಲಿ ಪಕ್ಕದ ಕಾಡಿನಿಂದ ಹಕ್ಕಿಗಳು ಮತ್ತು ಚಿಟ್ಟೆಗಳು ಫೋನ್ ಮಾಡುತ್ತಿವೆ. ಯಾಕೆ ವಾಕಿಂಗ್ ಬರಲಿಲ್ಲ ಎಷ್ಟು ದಿನ...

8

ಬಾಲ್ಯದ, ಅಜ್ಜಿಮನೆಯ ಸವಿ ಸವಿ ನೆನಪುಗಳು.

Share Button

ಅಬ್ಬಾ! ಅಜ್ಜಿ ಮನೆ ಎಂದೊಡನೆ ನಿಜಕ್ಕೂ ಸವಿ ಸವಿ ನೆನಪುಗಳ ಚಿತ್ತಾರ ಮನದಲ್ಲಿ ಮೂಡುತ್ತದೆ. ಬಾಲ್ಯದ ಅಜ್ಜಿ ಮನೆಯ ನೆನಪು ನನಗೆ ಇನ್ನೂ ಹಸಿ ಹಸಿಯಾಗಿದೆ. ಅದು ಒಂದು ರೀತಿಯಲ್ಲಿ ನನ್ನ ಪಾಲಿಗೆ ಅಕ್ಷಯಪಾತ್ರೆ ಇದ್ದಂತೆ!. ಬರಿ ನೆನಪುಗಳು ನೆನಪುಗಳು ನೆನಪುಗಳು!. ವರ್ಣರಂಜಿತವಾಗಿದ್ದ ಕಾಲ. ನನ್ನ ಮನದಾಳದ ಅನಿಸಿಕೆಗಳನ್ನು...

Follow

Get every new post on this blog delivered to your Inbox.

Join other followers: