Author: Vidya Venkatesh

8

ಮನೆಗೊಬ್ಬ ಕವಯತ್ರಿ…

Share Button

ಸತ್ಯವಾಗಿಯೂಸಹಜವಾಗಿಯೂಪ್ರತಿ ಹೆಣ್ಣುಒಬ್ಬ ಕವಯತ್ರಿಯೇ,,,, ಒಬ್ಬಳು ಬಗೆಬಗೆಯಅಡುಗೆಯ ಸ್ವಾದಗಳಲ್ಲಿತನ್ನ ಭಾವ ಬೆರೆಸುತ್ತಾರುಚಿಗಳ ಮೂಲಕ ಕವನಗಳ ಬರೆಯತ್ತಾಳೆ, ಮತ್ತೊಬ್ಬಳುಬಣ್ಣಬಣ್ಣಗಳ ದಾರಮಣಿಗಳಲ್ಲಿ ಭಾವಗಳ ಬೆರೆಸುತ್ತಾಕಸೂತಿಯ ಕಲೆಗಳ ಚಿತ್ತಾರದಿಕವನಗಳ ಬಿಡಿಸುತ್ತಾಳೆ, ಇನ್ನೂಬ್ಬಳುಮಣ್ಣನ್ನು ಹದಗೊಳಿಸಿಭಾವಗಳ ಬೀಜ ಬಿತ್ತಿಪುಷ್ಷಗಳ ಚೆಲ್ವಿಕೆಯಲ್ಲಿಕವನಗಳ ಅರಳಿಸುತ್ತಾಳೆ, ಮನೆ ಮನೆಯ ಮುಂದೆಬಿಟ್ಟಿರುವ ಚುಕ್ಕಿಗಳಲ್ಲಿಸೇರಿಸಿ ಎಳೆದಿರುವ ಗೆರೆಗಳಲ್ಲಿಕವನಗಳು ಬಣ್ಣ ತುಂಬಿಕೊಂಡುರಂಗು ರಂಗಿನ ರಂಗೋಲಿಗಳಾಗಿರುತ್ತವೆ, ಕವಿಗಳೆಂದು...

5

”ಆಟ”

Share Button

ಹಾವು ಏಣಿಆಟದ್ಹಾಂಗೆ ಈ ಬದುಕು ಕನಸುಗಳ ಏಣಿಯಆಸೆಯಿಂದ ಹತ್ತುತ್ತೇವೆಕಾದಿರುತ್ತದೆ ಅಲ್ಲಿ ವಿಧಿಹಾವಿನ ರೂಪದಲ್ಲಿನಿರಾಸೆಯಿಂದ ಪಾತಾಳಕ್ಕೆಬಿದ್ದಿರುತ್ತೇವೆ,,, ಮೋಹವೋಆಶಾವಾದವೋಮತ್ತೆ ದಾಳ ಉರುಳಿಸಿಸಿಕ್ಕಿದ ಏಣಿ ಹತ್ತುತ್ತೇವೆ,,, ನಾನು ಬರಲೆಂದೆಕಾದು ಕುಳಿತ್ತಿತ್ತುವಿಧಿ ಮತ್ತೆ ಹಾವಾಗಿ,ಮತ್ತೆ ,,,ಕೆಳಗೆ ಉರುಳಿದೆ, ಗುರಿ ಮುಟ್ಟುವವರೆಗೂಬಿಡುವುದಿಲ್ಲ ನಾನು ಎಂದುನಾಳೆಗಳೆಂಬ ಏಣಿಯಪುನಃ ಹತ್ತುತ್ತೇನೆ,ಬಿದ್ದರೂ ,,, ವಿಧಿಗೆ ಹೇಳಿದ್ದೇನೆನೀನಾ,,,ನಾನಾ,,,ಎಂದು,,,ನೋಡೆಬಿಡೋಣವೆಂದು,,, ಎಷ್ಟು ಸಾರಿ...

6

”ಲಕ್ಷ್ಮಣ ರೇಖೆ”

Share Button

ಸೀತೆಗೆಂದು ಎಳೆದನುಲಕ್ಷ್ಮಣನೊಂದು ರೇಖೆರಕ್ಷಣೆಗೆಂದು….ಮರೆತು ದಾಟಿದತಪ್ಪಿಗೆ …ಆಯಿತುರಾಮಾಯಣ….. ಇಂದುನಾವೇ ಹಾಕಿಕೊಳ್ಳಬೇಕುನಮ್ಮೊಳಗೊಂದು ರೇಖೆ,ನಮ್ಮನ್ನಾಳುವ  ಅಹಂಕಾರಕ್ಕೆಗೆರೆ ಹಾಕಿ…..ಹೊರ ಬರದಂತೆ…ರೇಖೆ ದಾಟದಂತೆ… ನಮ್ಮ ಸಂತೋಷಗಳ ಶತೃಅಸೂಯೆ ಅತೃಪ್ತಿ ದುರಾಸೆಗೆನಾವೇ ಹಾಕಬೇಕು ರೇಖೆಯೊಂದನುಒಳಗೆ ಇರುವಂತೆ…ಹೊರಬಂದು….ಕಲಕಿ ರಾಡಿಗೊಳಿಸದಿರಲೆಂದು… ನಮ್ಮೊಳಗೆ ನಾವೇಹಾಕಿಕೊಳ್ಳಬೇಕು“ಲಕ್ಷ್ಮಣ ರೇಖೆ”ಒಳಿತು ಕೆಡಕುಗಳ ನಡುವೆ….. -ವಿದ್ಯಾ ವೆಂಕಟೇಶ್. ಮೈಸೂರು +9

11

“ಡಿಗ್ರಿ”

Share Button

ದೊಡ್ಡ ದೊಡ್ಡಕಾಲೇಜು ಕಟ್ಟಡಗಳಮೆಟ್ಟಿಲು ಹತ್ತಿ ಇಳಿದವಳಲ್ಲ-ಆದರೆಜೀವನದ ನಿಜ ಸಂತೆಯಲಿಬರಿಗಾಲಲ್ಲಿ ಓಡಾಡಿದಣಿದು ಪಡೆದಿಹೆಡಿಗ್ರಿಗಳ ಸರಮಾಲೆಯಲ್ಲ,ಬದುಕಿನ,,,,ಸತ್ಯಧನುಭವಗಳ ವರಮಾಲೆಯನ್ನ,,, ಚುಚ್ಚಿದ ಮುಳ್ಳುಗಳೆಷ್ಷೋಒತ್ತಿದ ಕಲ್ಲುಗಳೆಷ್ಷೋಎಲ್ಲವೂ ಬರೆಸಿದವುಕವನಗಳ ಸಾವಿರಾರು, ಗಟ್ಟಿಯಾಗಿಸಿದವು,ಬಂಡೆಯಾಗಿಸಿದವು,ಚುಚ್ಚಿದವರ ಮುಂದೆಕಣ್ಣೀರು ಹಾಕದಂತೆ ಕಲಿಸಿದವುಕುಗ್ಗಿದರು ಬಗ್ಗಿದರುಎದೆಸೆಟೆಸಿ ಎತ್ತರಕ್ಕೆ ಬೆಳೆಸಿದವು –ವಿದ್ಯಾ ವೆಂಕಟೇಶ್. ಮೈಸೂರು +32

10

“ಗುರುತು”

Share Button

ಮನೆಯ ಮಹಾಲಕ್ಷ್ಮಿ ನೀನುಎನ್ನುತ್ತಾನೆ ಗಂಡಪಾಪ ಮರತೇ ಬಿಡುತ್ತಾಳೆಮನೆಯ ಕಸ ಗುಡಿಸುವುದರಲ್ಲೇಬದುಕು ಕಳೆದಿದ್ದು,,, ಮನದ ಮಹಾರಾಣಿ ನೀನುಎನ್ನುತ್ತಾನೆ ಗಂಡಪಾಪಾ ನೆನಪಾಗುವುದಿಲ್ಲ ಅವಳಿಗೆಸಂಸಾರ ಸಾಗರದಲ್ಲಿಮುಳುಗಿದವಳಿಗೆವಯಸ್ಸು ಕಳೆದಿದ್ದು… ನೆನಪಾದಾಗ,,ಕನ್ನಡಿಯಲ್ಲಿನೋಡಿಕೊಂಡಾಗಅವಳ ಗುರುತುಅವಳಿಗೇ ಹತ್ತಲಿಲ್ಲ…. *ವಿದ್ಯಾ ವೆಂಕಟೇಶ್. ಮೈಸೂರು +13

7

ತಲೆಮಾರು

Share Button

ಹೊಸ ತಲೆಮಾರಿನಲಿನಮ್ಮ ಮಕ್ಕಳೇನಮಗೆ ಅಪರಚಿತರಾದರೇಕೊ ಕಾಣೆ, ಮಕ್ಕಳುಕಷ್ಟಕ್ಕೆ- ಭಾವಕ್ಕೆಹೆಗಲು ಕೊಡದ ಮೇಲೆಕರುಳಿನ ಚೂರುಗಳಲ್ಲ ಅವರು, ಕಳೆದ ಜನುಮದಸಾಲದ ಬಾಕಿಯವಸೂಲಿಗಾರರು, ಹೃದಯ ಹೆತ್ತಿದಕ್ಕೆಧನ್ಯತೆ ಅನುಭವಿಸದ ಮೇಲೆನಾವು ಮಾಡಿದ ಪಾಪದಪ್ರತಿರೂಪಗಳು, ಸಂಸಾರ ಸಾಗರದಲ್ಲಿಮುಳುಗುವಾಗ ದೋಣಿಯಾಗಿಮಕ್ಕಳು ಬರದ ಮೇಲೆ ಮಕ್ಕಳಲ್ಲ ಅವರುಗಳುದೃಷ್ಟಿಯಿರದ ಕಣ್ಣುಗಳು -ವಿದ್ಯಾ ವೆಂಕಟೇಶ್. ಮೈಸೂರು +8

10

ಸಾವಿನ ಮನೆಯಲಿ….

Share Button

ಬದುಕಿದ್ದಾಗ ಬಡಿದಾಡುವರುಸತ್ತಾಗ ಸುತ್ತ ನೆರೆವರು,ತೆಗಳಿದವನು ಹೊಗಳುವನು ಅಂದು,ಕತ್ತಿ ಮಸೆದವನೆ ನಿಲ್ಲುವನು ಬಂದುಹಾರದೊಡನೆ ಎಲ್ಲರಿಗಿಂತಲೂ ಮುಂದು,ಕಷ್ಟ ಸುಖದಲಿ ತಿರುಗಿಯೂ ನೋಡದವರುಹತ್ತಿರದ ಸಂಬಂಧಿಗಳೆಂದು ಹೇಳುವರುಜೊತೆಗೆ ಮಡಿಯ ಮಾಡುವರು,ಸಿಕ್ಕಾಗ ಎದುರಿಗೆಮಾತಾಡದೆ ಮುಖ ತಿರುಗಿಸಿದವನುಸತ್ತಾಗ ಬಂದುಆ ನಿರ್ಜೀವಕೆ ಅಂಟಿಕೊಂಡುಹೀಗಾಗಬಾರದಿತ್ತೆನ್ನುತ್ತಾ ನಿಲ್ಲುವನು. ಕಷ್ಟದಿ ಹೆಗಲ ಕೊಡದ ಮಗಮಡಿಕೆಯ ಹೊರಲು ಬರುವನಾಗ,,,ನಿಜದ ಅನುತಾಪವಿದ್ದವರುಸುಳ್ಳು ಸಂತಾಪವಿದ್ದವರು,ಬೆರತು ಹೋಗುವರುಕಲೆತು...

8

ಮರೆಯದಿರಿ

Share Button

ಮರೆಯದಿರಿಹಣದಿಂದ ಗಳಿಸಲಾಗದ್ದುಇಹುದು ನೂರಾರು; ಹಣದ ಸದ್ದು ಕೇಳಿಸಿಕೋಗಿಲೆಗಳ ಹಾಡಿಸಬಲ್ಲಿರಾ?ದುಡ್ಡಿನ ಸೂಜಿಯಿಂದಮುರಿದ ಮನಸುಗಳ ಹೊಲಿಯಬಲ್ಲಿರಾ? ನಿಮ್ಮ ಹಣದಿಂದ ಕೊಳ್ಳಲಾಗದುಕೋಗಿಲೆಯ ಹಾಡಹಣದಿಂದ ಸುರಿಸಲಾಗದುಮೋಡದಿಂದ ಮಳೆಯನಿಮ್ಮ ಹಣದಿಂದ ಕಟ್ಟಲಾಗದುಹೃದಯದಗಳ ನಡುವೆ ಸೇತುವೆಯಾನಮ್ಮ ಹಣದಿಂದ ಪಡೆಯಲಾಗದುನಿಸ್ವಾರ್ಥ ನೈಜ ಪ್ರೀತಿಯಾ ಮರೆಯದಿರಿನಮ್ಮ ಹಿಂದೆ ಹಣವಿರಬೇಕುಹಣದ ಹಿಂದೆ ನಾವಿರಬಾರದು -ವಿದ್ಯಾ ವೆಂಕಟೇಶ, ಮೈಸೂರು +4

7

“ಆಶಾಕಿರಣ”

Share Button

ದೊಡ್ಡ ಪ್ರಪಂಚಪುಟ್ಟ ಗುಡಿಸಲುಮುಗ್ಧ ಹುಡುಗಿಯಆಗಾಧ ಭಾವದಾಗಸ, ಮಿರಮಿರ ಮಿನುಗುವಕನಸಿನ ಮನಸುಮುಳ್ಳುಗಳ ನಡುವೆಯುಮಂದಾರದ ಸೊಗಸು, ಹೂಗಳು ಅರಳುತ್ತಿದ್ದವುದಳಕ್ಕೆ ಮುಳ್ಳುಗಳುತಾಕಿ ರಕ್ತ ತೊಟ್ಟಿಕ್ಕುತ್ತಿತ್ತು ಪುಟ್ಟ ಹುಡುಗಿಯದುದೊಡ್ಡ ಹೃದಯರಕ್ತ ಬಿದ್ದಲ್ಲೆಲ್ಲಾಮತ್ತೊಂದು ಮತ್ತೊಂದು ಮೊಗ್ಗು ನಾ ನಗುವೆನಾ ಬಾಳುವೆಎಂದು ಅರಳಿತು –ವಿದ್ಯಾ ವೆಂಕಟೇಶ. ಮೈಸೂರು +12

15

ಹೋರಾಟ

Share Button

ಮಲೆನಾಡ ಹಸಿರ ಬೆಟ್ಟಗಳ ನಡುವೆ ಕುಳಿತು ಬರೆಯಲಿಲ್ಲ ಈ ಕವನಗಳ….. ಬಯಲು ಸೀಮೆಯ ಬರಡು ಭೂಮಿಯ ನಡುವೆಯೇ ಎದೆಯ ನೆಲದೊಳಗೆ ಹಸಿರು ಹಾಸಿಕೊಂಡು ಅಡುಗೆ ಮನೆಯ ಒಗ್ಗರಣೆಗಳ ಘಾಟಿನ ನಡುವೆ ಮಲ್ಲಿಗೆ ಸಂಪಿಗೆಯ ಘಮ ಘಮ ಸುವಾಸನೆಯ ಊಹಿಸಿಕೊಂಡು ಹೃದಯದ ನಾಳಗಳ ಕತ್ತರಿಸುವ ಒರಟು ಮಾತುಗಳ ನಡುವೆ...

Follow

Get every new post on this blog delivered to your Inbox.

Join other followers: