Author: Prabhakar T, prabhakar_tamragouri@yahoo.co.in
ಮೌನ ಮೆರವಣಿಗೆ ನಡೆದಿದೆ ರಥೋತ್ಸವದಲ್ಲಿ ರಂಗುರಂಗಿನ ಕನಸುಗಳ ಹೊತ್ತು ನೆನಪುಗಳ ಅನಾವರಣ ಕಹಿ ಮರೆವಿನ ಪಲಾಯನ ! ಉಳಿದು ಹೋಗಿದೆ ನೆನಪುಗಳು ಎಂದೆಂದಿಗೂ ಕರಗದಂತೆ ” ತಿಮ್ಮಪ್ಪನ ” ಐಶ್ವರ್ಯದಂತೆ ಬಳಸಿದಷ್ಟೊ …… ಕರಗಿಸಿದಷ್ಟೊ …… ಎಂದೆಂದಿಗೂ ಮುಗಿಯದಂತೆ….. ನೆನಪಿನ ಹನಿಗಳು ಜಾರುತಿದೆ ಬಿಸಿಬಿಸಿಯಾಗಿ...
ದಟ್ಟ ಹಸಿರಿನ ಮರದ ಕೆಳಗೆ ತೊಟ್ಟಿಕ್ಕುವ ಇಬ್ಬನಿ ಸೋನೆ ಹೋರಾಟ ಸೂರ್ಯನ ಕಿರಣಕ್ಕೆ ವಿರಮಿಸಲು ನಿನ್ನ ಜೊತೆ ಯಾರಿದ್ದಾರೆ …….? ಕೋಗಿಲೆಯ ಇಂಪಾದ ಕುಹೂ ….ಕುಹೂ …. ಆಲಿಸುವವರು ಯಾರು …..? ಇಲ್ಲಿ ನಿಮಗೆ ವೈರಿಗಳಿಲ್ಲ ಇಲ್ಲಿ ನಿಮಗೆ ಸಿಗುವುದು ಚಳಿಗಾಲದ ಬೆಚ್ಚನೆಯ ಹವೆಯು!...
ಮಟ ಮಟ ಮಧ್ಯಾಹ್ನ ಕಾದ ಕಡಲ ತೀರದಿ ಮಳಲ ಹಾಸಿನ ಮೇಲೆ ಮೂಡಿದ ಹೆಜ್ಜೆ ಗುರುತುಗಳು ಅಲೆಯ ರಭಸಕ್ಕೆ ಅಳಿಸಿಹೋಯಿತು ಬೆಸ್ತರ ಬಲೆಯ ಜಾಲದ ಕುಣಿಕೆಗೆ ಸಿಲುಕಿ ಜೀವ ತೆತ್ತ ಅಮಾಯಕ ಮೀನಿನ ಹಾಗೆ !! . ಪಶ್ಚಿಮ ದಿಗಂತದಲ್ಲಿ ಇಂಚಿಂಚಾಗಿ ಕರಗುವ ಕೆಂಪು...
ಹಚ್ಚಿಟ್ಟ ಹಣತೆಯಿಂದ ಬೆಳಗಿದ ಬೆಳಕಿನ ಕಿರಣಕೆ ಅಂಧಕಾರವು ಮರೆಯಾಗಿ ಅಲೆಅಲೆಯಾಗಿ ಬಿಡುತ್ತಿತ್ತು ಚೈತ್ರ ಮಾಸದ ಸುವಾಸನೆ ನೀರಿನ ಒಳ ಗರ್ಭದಿಂದ ಮೇಲೇರಿತು ಸುಂದರವಾದ ಅರಳಿದ ತಾವರೆ ಹೂ ಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿ ರಂಗು ರಂಗಿನ ಹೊಂಬಣ್ಣದ ಸೂರ್ಯನ ನವ ಕಿರಣಗಳು ನನ್ನ ಮೈ ಸೋಕಿತು ಮೆಲ್ಲನೆ ಮುತ್ತಿನಂತೆ...
ನೀರು ನೀರೆಂದು ನಲ್ಲಿಯ ಮುಂದೆ ಕೂತರೆ ನೀರು ಬಂದೀತೇ ..? ಇಲ್ಲ , ಬರಲಿಲ್ಲ ಬದಲು ಬಂದೀತು ಒಂದಿಷ್ಟು ಕಣ್ಣೀರು ! ಎಷ್ಟು ದಿನ ಕಾಯಬಹುದು ನೀರ ಹನಿಗಾಗಿ..? ಬಾಯಾರಿ ಗಂಟಲು ಒಣಗುತಿದೆ ಕಣ್ಣೀರು ಬತ್ತಿದೆ ಒಡಲೊಳಗೆ ಹಸಿವಿನ ಲಾವಾರಸ ತಳಮಳಿಸುತ್ತಿದೆ ಹಿಮ ಕರಗಿ ನೀರಾಗುವುದನ್ನು….. ನಮ್ಮ...
ಬದುಕೆಲ್ಲ ಇರುಳಾಗಿರಲು ನಿನ್ನ ನೆನಪು ಬೆಳಕಾಗಿ ಬಂತು ಬದುಕೆಲ್ಲ ಬರಡಾಗಿರಲು ನಿನ್ನ ನೆನಪು ಮಳೆಯಾಗಿ ಬಂತು ಮರ ಚಿಗುರಿ ತಾ ಹಸಿರಾಗಿ ನಿಂತಂತೆ ಮನದಾಸೆ ಹಸಿರಾಯ್ತು ನಿನ್ನ ನೆನಪು ಬಂದು ಬಾಡಿದ ಈ ಬಾಳಿನ ಬತ್ತಿದ ಮನದಲಿ ಪ್ರೀತಿಸೆಲೆ ಉಕ್ಕಿತು ನಿನ್ನ ನೆನಪು ಬಂದು ಸತ್ತ ಬಯಕೆಗಳಾಗಸದಲಿ...
ಶುಭ ಯೋಗವ ಹೊತ್ತು ಬಂತು ಸಂಕ್ರಾಂತಿಯು ಇಳೆಗೆ ನವಯುಗವ ಆರಂಭಿಸುವ ಹಬ್ಬವಾಗಿ ಕಾಣುತಿದೆ ಭಾವವೆಂಬ ಭಕ್ತಿ ತುಂಬಿ ಬೆಳಕನ್ನು ಹರಿಸುತಿದೆ ಕಾಣದಂತಹ ಶಕ್ತಿಯನ್ನು ಹುಡುಕುತ ಬರುತಿದೆ ಭಯದ ಕರಿಯ ನೆರಳು ಸರಿದು ಅಭಯ ಕಿರಣ ಮೂಡಲಿ ಮನೆ ಮನೆಗಳ ಬಾಗಿಲಿಗೆ ನಗೆ ತೋರಣ ಕಟ್ಟಲಿ...
. ಗೋಡೆಗಳ ಒಳಗೆ ಗೋಡೆಗಳಾಚೆ ಹೊರಗೆ ಕೈ,ಕಣ್ಣುಗಳಿಗೆ ತೆರೆದು ಬಿದ್ದಿದೆ ಬಯಲು ಆಗಸ! ಎಷ್ಟೊಂದು ಪದಗಳು ಒಳ ಹೊರಗೆ ತುಂಬಿಕೊಳ್ಳಲು ಮನಸು ಕೈಗೆಟುಕುವುದು ಕಂಗಳಿಗೆ ಬೇಡ ಕಣ್ಣುಗಳಿಗೆ ಕಂಡಿದ್ದು ಕೈಗೆ ನಿಲುಕದು ಅತ್ತಿತ್ತ ಹುಡುಕುವ ಕೈ ಕಣ್ಣುಗಳಿಗೆ ಹೃದಯ ಕದ ತೆರೆಯದು ಅದರ ಬಡಿತವೇ ಬೇರೆ! ಬಳ್ಳಿ...
ನೀ , ಕೊಟ್ಟಿದ್ದನ್ನೇ ನಾ ನಿನಗೆ ಹೇಗೆ ಕೊಡಲಿ ….? ಅಂತಲೇ ಪ್ರೀತಿ ಕೊಡಲಿಲ್ಲ ….. ಹೃದಯದ ಬಾಗಿಲು ತೆರೆದು ಇಟ್ಟಿದ್ದಿಯಂತೆ ನೀನು ಒಳಗೆ ಕರೆಯದಿದ್ದರೂ ಪರವಾಗಿಲ್ಲ ಹೊರಗೆ ಬೆಳದಿಂಗಳಿದೆ ರಂಗೋಲಿ ಹಾಕಲು ಹೇಳಲಾರದೆ ಹಾಗೇ ಉಳಿದ ನೂರಾರು ಮಾತುಗಳಿವೆ ಅಲ್ಲಿ ಸ್ಪೋಟವಾಗುವ ಮೊದಲು...
ಹಸಿರುಟ್ಟ ಮರದ ತುಂಬಾ ನಿಗಿ ನಿಗಿ ಕೆಂಡಗಳು ಅರಳಿ ಹೂವಾದಂತೆ ಮುಗಿಲು ಮುಖ ಗುಲ್ಮೊಹರು ಕೆಂಪು ಕೆಂಪು ……. ಹೂ ಹಣ್ಣುಗಳ ಭಾರಕ್ಕೆ ತೂಗಿ ತೊನೆಯುತ್ತಿದೆ ಈಗಷ್ಟೇ ಬಿದ್ದ ಹನಿ ಮಳೆಗೆ ತೊಯ್ದು ಮಣ್ಣರಳಿ ಕಮ್ಮನೆಯ ಕಂಪು ತಂಪು ….. ಚಿಗುರು ಪಾದದ ತುಳಿತಕ್ಕೆ ಮೈ ಅರಳಿಸಿದೆ...
ನಿಮ್ಮ ಅನಿಸಿಕೆಗಳು…