ಪ್ರೀತಿಯ ಪಿಸುಮಾತು
ಹೇಳಿಬಿಡಲೇನು ಮನದ ಇಂಗಿತವ
ಸುತ್ತು ಬಳಸುವುದೇನು ನಿನ್ನೊಡನೆ
ಬೆನ್ನಿಗಾತು ಕುಳಿತು ಪಿಸುಗುಟ್ಟುವ
ಚಡಪಡಿಕೆ , ಬಚ್ಚಿಟ್ಟ ಮಾತುಗಳಿವು
ಉಳಿದ ಕಾರಣವೇನೋ ತಿಳಿದಿಲ್ಲ
ಕೊಪ್ಪರಿಗೆಯಷ್ಟು ಕನವರಿಕೆಗಳಿವೆ
ನಿನ್ನ ಪ್ರೀತಿಯಲ್ಲಿ ಬಂಧಿ ನಾನು
ಖುಷಿಯ ಕಬಳಿಸಲೆಂದೇ ನಿರುಕಿಸುತ್ತಿರುವೆ
ಹೃದಯಾಂತರಾಳದಲ್ಲಿ ಖೈದಿಯಾಗಿರುವೆನು
ಖುಲಾಸೆಯ ಗೊಡವೆ ಎನಗಿಲ್ಲ
ದೂರದಿ ಮುಗುಳುನಗೆ ಹೊತ್ತ
ರಜನೀಶನೂ ಮತ್ಸರದಿ ಇಣುಕುತಿಹನು
ನಮ್ಮೊಲವಿನ ಗಾಢತೆಗೆ ಸಾಕ್ಷಿಯಾಗಿ
ಮನದಿಚ್ಚೆಯ ಮನ್ನಿಸೊಮ್ಮೆ ನನ್ನಿನಿಯ
ಮನಸಿನ ಜಪವೂ ನಿನ್ನದೇ ಸದಾ
ಗಮನಿಸದೆ ದೂರ ಸರಿಯುವ ಇರಾದೆ ಏಕೆ?
ನಿನ್ನ ಪ್ರೇಮ ಸಾನಿಧ್ಯದ ಹೊರತು
ಬೇರೆ ಬಿಡಾರವೇನಿದೆ ನನಗೆ
ಹೇಳಿಬಿಡಲೇನು ಮನದ ಇಂಗಿತವ
ಸುತ್ತು ಬಳಸುವುದೇನು ನಿನ್ನೊಡನೆ
ಅನುಗಾಲಕೂ ಒಲವ ಸಿಂಚನದ
ಬಯಕೆಯೊಂದೇ ನನ್ನ ಮನಕೆ
-ಸರಿತಾ ಮಧು , ನಾಗೇನಹಳ್ಳಿ
ಕೊಪ್ಪರಿಗೆಯ ಕನವರಿಕೆಗಳ ನಿಧಿ ನನಸಾಗಲಿ.ಒಂದೊಳ್ಳೆ ಕವನ.
ಮನದ ಮಾತು ಪಿಸು ಮಾತಾಗಿ ಹೇಳಲೇಬೇಕು.ಸುಂದರ ಕವನ ಸಹೋದರಿ
ಅರ್ಥಪೂರ್ಣ ಕವನ ಧನ್ಯವಾದಗಳು ಮೇಡಂ
ಸುಂದರ ಕವನ ಮನದಮಾತು ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಗೆಳತಿ.
ತುಂಬಾ ಚೆನ್ನಾಗಿದೆ ಕವನ.
ಮನದಾಳದ ಮಾತುಗಳೆಲ್ಲ ಸುಂದರ ಕಾವ್ಯವಾಗಿದೆ
ಸೊಗಸಾದ ಭಾವಪೂರ್ಣ ಕವನ.
ಕವನ ಸೂಪರ್
ನಮಸ್ಕಾರ, ಮನದಾಳದ ಭಾವಲಹರಿ ಮಧುರವಾಗಿದೆ
ಸುಂದರ ,ಸುಮಧುರ ಕವನ
ಸುಂದರವಾದ ಕವನ