ಬಿತ್ತಿದಂತೆ ಬೆಳೆ
ಮಾಯಾಲೋಕದೊಳು ಬಾಳುವುದು ಹೇಗೆಂದು
ನಾನಾ ಚಿಂತೆಯನು ಮಾಡುವುದು ನೀತೊರೆದು
ಪರಿಪಕ್ವದಲ್ಲಿಂದು ಮನಸನ್ನು ಹೊಂದು
ತಿಳಿಗೊಡದ ನೀರಂತೆ ಸಿಗುವುದದಕೆ ಉತ್ತರ
ಪರಿಶುದ್ಧತೆಯ ಮನಸ್ಸನ್ನು ನೀ ಹೊಂದಿದಾಗ
ಸ್ನೇಹ ಸೌಹಾರ್ದತೆಗೆ ಮನಕರಗಿದಾಗ
ಬಿತ್ತಿದಂತೆ ಫಲವನ್ನು ಬೆಳೆಯುತ್ತಿರುವಾಗ
ಮೇರು ಶಿಖರತಂತೆ ಬೆಳೆಯುವೆ ನೀ ಎತ್ತರ
ಭವರೋಗ ಕಳೆದು ಮಾನವೀಯತೆ ಹೊಂದಿ
ಮಾತುಗಾರಿಕೆಯ ತೂಕ ಹೆಚ್ಚುಗಾರಿಕೆ ಹೊಂದಿ
ಏಕತೆಯ ಮನೋಭಾವ ದ್ವಿಗುಣತೆ ಹೊಂದಿ
ಮನುಜನ ಗುಣವಾಗ ಬಹು ಎತ್ತರ
ನಮ್ಮಲ್ಲಿ ಲೋಪದೋಷಗಳ ತ್ಯಜಿಸಿ
ನೋವನ್ನು ಇರಿದು ನೋವಿಸುವದನು ನಿಲಿಸಿ
ಕಷ್ಟದಲಿ ಪರಿಹಾರ ನೀವಲ್ಲಿ ಕೊಡಿಸಿ
ಉಪಕಾರ ಮಾಡಿದ ತೃಪ್ತಿಯೆ ಮಹದೆತ್ತರ
-ಮಧುಮತಿ ರಮೇಶ್ ಪಾಟೀಲ್
ಕವನ ಅರ್ಥಪೂರ್ಣವಾಗಿದೆ. ಧನ್ಯವಾದಗಳು
ಬದುಕಿನ ಸರಳ, ಸುಂದರ ಸೂತ್ರ, ಪ್ರತಿಯೊಂದು ನಡೆಯನ್ನು ಅರಿತು ಹಿತಮಿತವಾಗಿ ಎಲ್ಲರೊಡನೆ ಬೆರೆತು ಬಾಳುವ ಮಂತ್ರ. ಚೆನ್ನಾಗಿದೆ ಕವನ.
ಚಂದದ ಕವನ
ಚಂದದ ಕವನ
ಬಿತ್ತಿದಂತೆ ಬೆಳೆ ಸುಂದರವಾಗಿದೆ