ನಿನ್ನ ನೆನಪು
ಬದುಕೆಲ್ಲ ಇರುಳಾಗಿರಲು
ನಿನ್ನ ನೆನಪು ಬೆಳಕಾಗಿ ಬಂತು
ಬದುಕೆಲ್ಲ ಬರಡಾಗಿರಲು
ನಿನ್ನ ನೆನಪು ಮಳೆಯಾಗಿ ಬಂತು
ಮರ ಚಿಗುರಿ ತಾ
ಹಸಿರಾಗಿ ನಿಂತಂತೆ
ಮನದಾಸೆ ಹಸಿರಾಯ್ತು
ನಿನ್ನ ನೆನಪು ಬಂದು
ಬಾಡಿದ ಈ ಬಾಳಿನ
ಬತ್ತಿದ ಮನದಲಿ
ಪ್ರೀತಿಸೆಲೆ ಉಕ್ಕಿತು
ನಿನ್ನ ನೆನಪು ಬಂದು
ಸತ್ತ ಬಯಕೆಗಳಾಗಸದಲಿ
ಆಸೆ ಕಾಣದ ಕತ್ತಲಲಿ
ಮಿಂಚೊಂದು ಹೊಳೆಯಿತು
ನಿನ್ನ ನೆನಪು ಬಂದು
ಬದುಕೆಲ್ಲ ಇರುಳಾಗಿರಲು
ನಿನ್ನ ನೆನಪು ಬೆಳಕಾಗಿ ಬಂತು
ಬದುಕೆಲ್ಲ ಬರಡಾಗಿರಲು
ನಿನ್ನ ನೆನಪು ಮಳೆಯಾಗಿ ಬಂತು.
-ಪ್ರಭಾಕರ ತಾಮ್ರಗೌರಿ
ನೆನಪು ಶಕ್ತಿ ಹಾಗೆ ಇದೆ ಸರ್. ಕವನ ಚೆನ್ನಾಗಿದೆ.
ಧನ್ಯವಾದಗಳು ಸರ್
ಬಾಳ ಪಯಣದಲ್ಲಿ ನಿರಾಯಾಸವಾಗಿ ಸಾಗಲು ಸುಂದರ ನೆನಪುಗಳೇ ಆಸರೆ, ಪ್ರೇರಣೆ. ಚೆನ್ನಾಗಿದೆ ಕವನ
Thank u madam
ಚಂದದ ಕವನ
ತುಂಬಾ ಧನ್ಯವಾದಗಳು ಮೇಡಂ
ವಾವ್
Thank you madam
ಸುಂದರ ನೆನಪುಗಳ ಕವನ ಚೆನ್ನಾಗಿದೆ
,ತುಂಬಾ ಧನ್ಯವಾದಗಳು ಮೇಡಂ