ಮಾನವ
ಅರಿತುಕೊಂಡು ಬಾಳಬೇಕು ಮಾನವ
ಆಡಂಬರವನು ಬಿಡಬೇಕು ಮಾನವ
ಇರುವುದರಲ್ಲಿ ತೃಪ್ತಿಪಡಬೇಕು ಮಾನವ
ಈಶ್ವರನನೆಂದಿಗೂ ನಂಬಬೇಕು ಮಾನವ.
ಉಪಕಾರಿ ನೀನಾಗಬೇಕು ಮಾನವ
ಊರಿಗೆ ಮಗನಾಗಬೇಕು ಮಾನವ
ಋಣತ್ರಯಗಳ ತೀರಿಸಬೇಕು ಮಾನವ
ಎಷ್ಟೆತ್ತರ ಬೆಳೆದರು ಬಾಗಬೇಕು ಮಾನವ.
ಏನಿದ್ದರೂ ಹಂಚಿ ತಿನ್ನಬೇಕು ಮಾನವ
ಐದಿಂದ್ರೀಯ ನಿಗ್ರಹಿಸಬೇಕು ಮಾನವ
ಒಲವೇ ಬಾಳಿನುಸಿರಾಗಬೇಕು ಮಾನವ
ಓದು ಬರಹವ ಕಲಿಯಬೇಕು ಮಾನವ.
ಔದಾರ್ಯವನು ತೋರಬೇಕು ಮಾನವ
ಅಂ ತರಂಗದಿ ಶುದ್ಧಿಯಿರಬೇಕು ಮಾನವ
ಅಃ ಈ ತತ್ತ್ವಗಳನು ಪಾಲಿಸಬೇಕು ಮಾನವ
ಅನುಭವದೀ ನುಡಿಗಳ ಸಾರಬೇಕು ಮಾನವ.
-ಶಿವಮೂರ್ತಿ.ಹೆಚ್. ದಾವಣಗೆರೆ.
ಹಿತಕರವಾಗಿವೆ ನಿಮ್ಮ ಕವನದ ಸಾಲುಗಳು.ಧನ್ಯವಾದಗಳು
ಧನ್ಯವಾದಗಳು ಗುರುಗಳೇ
ವಾಹ್, ಸೊಗಸಾಗಿದೆ. ಅಕ್ಷರಮಾಲೆಯಲ್ಲಿ ಅವಿತಿರುವ ಬದುಕಿನ ಪಾಠ.
ಧನ್ಯವಾದಗಳು ಮೇಡಂ.
ಅಕ್ಷರದಲ್ಲಿ ಪಡಿಮೂಡಿಸಿರುವ ಬದುಕಿನ ಅನಾವರಣ ಆರೋಗ್ಯ ಖಾರವಾಗಿ ಮೂಡಿ ಬಂದಿದೆ ಸಾರ್.ಅಭಿನಂದನೆಗಳು.
ಧನ್ಯವಾದಗಳು ಮೇಡಂ
ಅಕ್ಷರಮಾಲೆಯಲ್ಲಿ ಬದುಕಿನ ನೀತಿ ಪಾಠ ಹೇಳುವ ಸಾಲುಗಳು
ಧನ್ಯವಾದಗಳು ಮೇಡಂ
ಸೂಪರ್ ಸರ್
ಧನ್ಯವಾದಗಳು
ಅಕ್ಷರ ಮಾಲೆಯ ನೀತಿಪಾಠ ಬಲು ಸೊಗಸಾಗಿದೆ
ಧನ್ಯವಾದಗಳು ಮೇಡಂ
ಕವನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು