ಭಾರತ ದೇಶದ ಹರ್ ಘಾರ್ ಚಲ್ ಯೋಜನೆ….

Share Button

ಭಾರತ ದೇಶದ ಹರ್ ಘಾರ್ ಚಲ್ ಯೋಜನೆಯಿಂದ ಜನರ ಆರೋಗ್ಯ ಹಾಗೂ ಉಳಿತಾಯದ ಮೇಲಾದ ಪರಿಣಾಮಗಳು:ವಿಶ್ವ ಆರೋಗ್ಯ ಸಂಸ್ಥೆಯ ವರದಿ.

ಅತಿಸಾರ ಕಾಹಿಲೆಗಳಿಂದ ಸಾಯಬಹುದಿದ್ದ ಅಂಗವೈಕಲ್ಯದ 14 ದಶಲಕ್ಷ ಜೀವ ವರ್ಷಗಳ ಉಳಿಸುವಿಕೆಯಿಂದ, ಭಾರತ ದೇಶ 101 ಶತಕೋಟಿ ಡಾಲರ್‌ಗಳಷ್ಟು ಅಂದಾಜು ವೆಚ್ಚ ಉಳಿಸಿದೆ ಎಂದು WHO ವರದಿ ಮಾಡಿದೆ. ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕ ಉಳಿತಾಯದಲ್ಲಿ ಹರ್ ಘರ್ ಜಲ್ ಕಾರ್ಯಕ್ರಮ ಗಮನಾರ್ಹ ಪರಿಣಾಮ ಮಾಡಿದೆ. ಜೀವಗಳನ್ನು ಉಳಿಸಲು ಸುರಕ್ಷಿತ ಕುಡಿಯುವ ನೀರು, ಮಹಿಳೆಯರು ಹಾಗೂ ಬಾಲಕಿಯರ ಸಬಲೀಕರಣ, ನಿತ್ಯಜೀವನ ಸುಲಭ ಮಾಡುವಲ್ಲಿ ಇದರ ಪಾತ್ರ ಅದ್ಭುತ. ಜಲ ಜೀವನ್ ಆಂದೋಳನದಲ್ಲಿ ಭಾರತ ಸರಕಾರದ ತೊಡಗಿಸುವಿಕೆ, ಆರೋಗ್ಯದ ಮೇಲೆ ಅತಿಮುಖ್ಯ ಗುಣಾಕಾರದ ಪರಿಣಾಮ ಬೀರಿದೆ.
ಈ ಕಾರ್ಯಕ್ರಮದ ಮುಖ್ಯ ಲಾಭಗಳ ಬಗ್ಗೆ ಹೇಳುತ್ತ, 2-1-2015 ರಲ್ಲಿ ಸ್ಥಾಪಿಸಲಾದ NITI ಆಯೋಗ ಅಂದರೆ ನೀತಿ ಆಯೋಗ ಅಥವಾ National Institution for Transforming India ಇದರ ಸದಸ್ಯರಾದ ಡಾ. ಗಿ.ಏ ಪಾಲ್, ಈ ಕಾರ್ಯಕ್ರಮದ ವೇಗ ಹಾಗೂ ಪ್ರಯಾಣದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರದಿ ಹೇಳುವ ಪ್ರಕಾರ, ಪ್ರತಿ ಸೆಕೆಂಡಿಗೆ ಒಂದರಂತೆ ಹೊಸ ನಲ್ಲಿಯ ಸಂಪರ್ಕ ಕೊಡಲಾಗುತ್ತಿದ್ದು, ಇದು ದೇಶದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಪಾರ ಪರಿವರ್ತನೆ ತರುತ್ತಿದೆ. ವರದಿ ಹೇಳುವಂತೆ ಸುರಕ್ಷಿತವಾಗಿ ನಿರ್ವಹಣೆ ಮಾಡಿದ ಕುಡಿಯುವ ನೀರನ್ನು, ದೇಶದ ಎಲ್ಲ ಮನೆಗಳಿಗೂ ಪೂರೈಸುವಂತಾದರೆ, 400,000 ಅತಿಸಾರ ಕಾಹಿಲೆಯ ಮರಣಗಳನ್ನು ತಡೆಯಬಹುದು.

ಭಾರತದಲ್ಲಿರುವ ವ್ಯಕ್ತಿಗಳು ಹಾಗೂ ಕುಟುಂಬದ ಶಾರೀರಿಕ, ಮಾನಸಿಕ ಹಾಗೂ ಆರ್ಥಿಕ ಜೀವನದ ಮೇಲೆ, ಇಂಥ ನೇರ ಪರಿಣಾಮ ಬೀರಿ, ಜೀವನ ಮಟ್ಟ ಸುಧಾರಿಸುವ ಬೇರಾವುದೇ ಕಾರ್ಯಕ್ರಮವಿಲ್ಲ ಎಂದು ಡಾ.ಪಾಲ್ ಹೇಳಿದರು. ಹರ್ ಘರ್ ಜಲ್ ವರದಿಯು ಅತಿಸಾರ ಕಾಹಿಲೆಗಳ ಬಗ್ಗೆ ಕೇಂದ್ರೀಕರಿಸಲ್ಪಟ್ಟಿದ್ದು, ಅದು ನೀರು, ಸ್ವಚ್ಛತೆ ಹಾಗೂ ನೈರ್ಮಲ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಬಹು ಮುಖ್ಯ ಒಟ್ಟೂ ಕಾಹಿಲೆ ಭಾರ ಹೇರಲ್ಪಡುವುದನ್ನು ತಡೆದಿದೆ. ಈ ವಿಶ್ಲೇಷಣೆ, ಈ ಕಾಹಿಲೆಗಳ ಬಗ್ಗೆ ಗಮನಹರಿಸಲು ಅತ್ಯಂತ ತುರ್ತು ಅವಶ್ಯಕತೆ ಬಗ್ಗೆ ಒತ್ತಿ ಹೇಳುತ್ತದೆ. ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕವಾಗಿ ಚೆನ್ನಾಗಿರುವಿಕೆ ಬಗ್ಗೆ, ಗಮನಾರ್ಹ ಲಾಭಗಳನ್ನು ಈ ಕಾರ್ಯಕ್ರಮ ತರುತ್ತದೆ.

ಈ ಕಾರ್ಯಕ್ರಮಕ್ಕೆ ಮೊದಲು ಜನರು, ಎದುರಿಸಿದ್ದ ಸವಾಲುಗಳ ಬಗ್ಗೆ ಈ ವರದಿ ಹೇಳಿದೆ. 2019 ಕ್ಕೆ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆಯ ಸಂದರ್ಭ ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. 2018 ರಲ್ಲಿ 44 % ಗ್ರಾಮೀಣ ಜನಸಂಖ್ಯೆ ಸೇರಿದಂತೆ, ಭಾರತದ ಒಟ್ಟೂ ಜನಸಂಖ್ಯೆಯ 36 % ಅವರವರ ಮನೆ ಅಂಗಳದಲ್ಲೇ ಸುಧಾರಿಸಿದ ನೀರಿನ ಪೂರೈಕೆ ಸಿಗದ ಸ್ಥಿತಿಯಲ್ಲಿದ್ದರು. ಹರ್ ಘರ್ ಜಲ್ ಎನ್ನುವುದು ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಯೋಜನೆಯಾಗಿದ್ದು ಇದನ್ನು 2019 ರಲ್ಲಿ ಜಲಜೀವನ್ ಆಂದೋಳನವಾಗಿ ಕೈಗೆ ತೆಗೆದುಕೊಳ್ಳಲಾಗಿತ್ತು.ಕೇಂದ್ರ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮ್ ರವರು ಈ ಯೋಜನೆಯನ್ನು 2019 ರ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿದ್ದರು. 2022 ರ ಆಗಸ್ಟ್ ತಿಂಗಳಲ್ಲಿ ಗೋವಾ, ದಾದ್ರ ಮತ್ತು ನಗರ ಹವೇಲಿ, ದಮನ್ ಹಾಗೂ ದೀಯೂಗಳು ಹರ್ ಘರ್ ಜಲ್ ಪ್ರಮಾಣ ಪತ್ರ ಪಡೆದ 100 % ನಲ್ಲಿ ನೀರಿನ ಪೂರೈಕೆ ಇರುವ ಸ್ಥಳಗಳಾಗಿವೆ. 2023 ಜನವರಿಯಲ್ಲಿ ಗುಜರಾತ್, ಪಾಂಡಿಚೇರಿ, ಹಾಗೂ ತೆಲಂಗಾಣ ರಾಜ್ಯಗಳು ಸಹ 100 % ನಲ್ಲಿ ನೀರಿನ ಪೂರೈಕೆ ಇರುವ ರಾಜ್ಯಗಳಾಗಿವೆ.

ಈ ವರದಿಯ ಪ್ರಕಾರ ಅಸುರಕ್ಷಿತ ನೀರಿನ ನೇರ ಬಳಕೆಯಿಂದ, ತೀವ್ರ ಆರೋಗ್ಯ ಹಾಗೂ ಸಾಮಾಜಿಕ ಪರಿಣಾಮಗಳಾಗುತ್ತಿದ್ದವು. 2019 ರಲ್ಲಿ ಅಸುರಕ್ಷಿತ ಕುಡಿಯುವ ನೀರು ಹಾಗೂ ಸಾಕಷ್ಟು ಸ್ವಚ್ಛತೆ ಹಾಗೂ ನೈರ್ಮಲ್ಯ ಇರಲಿಲ್ಲವಾದ್ದರಿಂದ, ನಿತ್ಯ ವಿಶ್ವದಲ್ಲಿ 74 ದಶಲಕ್ಷ, ಭಾರತದಲ್ಲಿ 1.4 ದಶಲಕ್ಷ ಮರಣಗಳಾದವು.

ವಿವಿಧ ಸುಸ್ಥಿರ ಅಭಿವೃದ್ಧಿ ಗುರಿಗಳ ಹಿನ್ನೆಲೆಯಲ್ಲಿ, WHO ಎಲ್ಲವನ್ನೂ ಗಮನಿಸುತ್ತಿದೆ. ಸುರಕ್ಷಿತ ನಿರ್ವಹಣೆ ಮಾಡಿದ ನೀರು ಸೇವೆ ಬಳಸುವ ಜನರ ಸಂಖ್ಯೆ ಹಾಗೂ ನೀರು -ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಸಾವುಗಳ ಬಗ್ಗೆ WHO ಸತತ ಗಮನಿಸುತ್ತದೆ. WHO ಬಳಿ ಇರುವ ವಿಧಾನಗಳು, ಉಪಕರಣಗಳ ಸಹಾಯದಿಂದ, ಆರೋಗ್ಯ ಲಾಭಗಳ ಅಂದಾಜು ಮಾಡುತ್ತದೆ. ವಿಶೇಷವಾಗಿ ಅತಿಸಾರ ಕಾಹಿಲೆಗಳು ಹಾಗೂ ಸಂಬಂಧಿಸಿದ ಆರೋಗ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗಮನಿಸುತ್ತಿದೆ.
ಸ್ವಚ್ಛ ನಲ್ಲಿ ನೀರನ್ನು ಒದಗಿಸುವುದರಿಂದ ಮಹಿಳೆಯರು ಹಾಗೂ ಬಾಲಕಿಯರ ಅಪಾರ ಶ್ರಮ ಹಾಗೂ ಸಮಯ ಉಳಿತಾಯವಾಗುವುದನ್ನು ಈ ವರದಿ ಒತ್ತಿ ಹೇಳಿದೆ. 2018 ರಲ್ಲಿ ಭಾರತದ ಮಹಿಳೆಯರು ಮನೆ ಬಳಕೆಗಾಗಿ ಬೇಕಾದ ನೀರು ಸಂಗ್ರಹಿಸಲು, ಪ್ರತಿದಿನ ನಲವತ್ತೈದೂವರೆ ನಿಮಿಷಗಳನ್ನು ವೆಚ್ಚ ಮಾಡುತ್ತಿದ್ದರು. ತಮ್ಮ ಅಂಗಳದಲ್ಲಿ ನೀರು ಸಿಗದ ಹೆಚ್ಚು ಗ್ರಾಮೀಣ ಪ್ರದೇಶಗಳ ಮನೆಗಳು, ಪ್ರತಿದಿನ ನೀರು ಸಂಗ್ರಹಿಸಲು 66.6 ದಶಲಕ್ಷ ಗಂಟೆಗಳನ್ನು ವೆಚ್ಚ ಮಾಡಬೇಕಿತ್ತು. ಈಗ ನಲ್ಲಿ ನೀರಿನ ಸೌಕರ್ಯ ಸಾರ್ವಜನಿಕವಾಗಿರುವುದರಿಂದ, ಪ್ರತಿನಿತ್ಯ ನೀರು ಸಂಗ್ರಹಿಸುವ ಪ್ರಯತ್ನಗಳ ಆವಶ್ಯಕತೆ ದೂರವಾಗಿ, ಗಮನಾರ್ಹ ಶ್ರಮ ಹಾಗೂ ಕಾಲದ ಉಳಿತಾಯವಾಗುತ್ತಿದೆ.

-ಎನ್.ವ್ಹಿ ರಮೇಶ್ , ಮೈಸೂರು

6 Responses

  1. ಸುಚೇತಾ says:

    ಓದಿ ಖುಷಿಯಾಯಿತು.

  2. ನಯನ ಬಜಕೂಡ್ಲು says:

    Nice

  3. ವಿಷಯದ ಸ್ಪಷ್ಟತೆಗೆ..ಧನ್ಯವಾದಗಳು ಸಾರ್..

  4. ಶಂಕರಿ ಶರ್ಮ says:

    ಪೂರಕ ಮಾಹಿತಿಗಳಿಂದ ಕೂಡಿದ ಲೇಖನ ಇಷ್ಟವಾಯ್ತು ಸರ್.

  5. ಮಾಹಿತಿ ಪೂರ್ಣ ಲೇಖನ
    ಇಂದಿನ ಸರ್ಕಾರದ ಸಾಧನೆಗಳನ್ನು ತಿಳಿಸಿರುವುದಕ್ಕೆ ವಂದನೆಗಳು

  6. Padma Anand says:

    ಅತ್ಯಂತ ಮಾಹಿತಿಪೂರ್ಣ ಲೇಖನ ಇದಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: