Monthly Archive: March 2023
ಡಾ. ಎಚ್ ಎಸ್. ಅನುಪಮಾ ವಿರಚಿತ ಮಹಾದೇವಿಯಕ್ಕನ ಕುರಿತ ಕಾದಂಬರಿ – ‘ಬೆಳಗಿನೊಳಗು’ ಓದಲು ಕೈಗೆತ್ತಿಕೊಂಡೆ. ಪುಸ್ತಕದ ಗಾತ್ರ ತುಸು ಹಿರಿದೇ. ನನ್ನ ಬಿಡುವಿಲ್ಲದ ದಿನಚರಿಯ ನಡುವೆ ಈ ಪುಸ್ತಕವನ್ನು ಓದಲು ಆದೀತೆ ಎಂಬ ಆತಂಕ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯಳಾಗಿರುವ ಗೆಳತಿ ಮಂಜುಳಾ ನೀಡಿದ್ದ ಪುಸ್ತಕವಾದ್ದರಿಂದ,...
ನನ್ನ ಒಂದು ಕವನದಲ್ಲಿ ಪ್ಲಾಸ್ಟಿಕ್ಕನ್ನು ‘‘ಬಿಟ್ಟೇನೆಂದರೆ ಬಿಡದೀ ಬ್ರಹ್ಮೇತಿ’‘ ಎಂದು ವಿವರಿಸಿದ್ದೇನೆ. ಇಂದಿನ ದಿನ ಮಾನದಲ್ಲಿ ಮನೆಯ ಬಳಿಯ ಪುಟ್ಟ ಅಂಗಡಿಯಿಂದ ದೊಡ್ಡ ದೊಡ್ಡ ಅಂಗಡಿಗಳು, ಮಾಲ್‌ಗಳಲ್ಲಿ, ವಿವಿಧ ರೂಪ ತಳೆದ, ಪ್ಲಾಸ್ಟಿಕ್ ಕಸ, ನಮ್ಮ ಮನೆ ಪ್ರತಿನಿತ್ಯ ಹೊಕ್ಕುತ್ತದೆ. ಪ್ರತೀದಿನ ಪೌರಕಾರ್ಮಿಕರು, ಮನೆಮನೆಗಳಿಂದ, ಬೀದಿ ಬೀದಿಗಳಿಂದ...
ಇದು ಸುಮಾರು 1968-69 ನೇ ಸಾಲಿನಲ್ಲಿ ನಡೆದ ಒಂದು ಘಟನೆ. ಪೇಟೆ ಬೀದಿಯಲ್ಲಿರುವ ಸರ್ಕಾರೀ ಅನುದಾನಿತ ವಿದ್ಯಾಸಂಸ್ಥೆಯೊಂದರ ವಿಶಾಲವಾದ ಅಂಗಳದಲ್ಲಿ ಮೂರು ವಾರಗಳ ಕಾಲ ಆಗ ಪ್ರಖ್ಯಾತರಾಗಿದ್ದ ಜನಾಕರ್ಷಕರಾಗಿದ್ದ, ದೇಶ ವಿದೇಶಗಳಲ್ಲಿ ಉತೃಷ್ಟ ರೀತಿಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಜನಕ್ಕೂ ಮನ ಮುಟ್ಟುವಂತೆ ಉಪನ್ಯಾಸ ಮಾಲಿಕೆಗಳನ್ನು ನೀಡುತ್ತಿದ್ದ ಶ್ರೀಯುತ...
ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದ ಒಬ್ಬ ಮುದುಕಿ ”ಅಯ್ಯಾ ಚಂದದ ಹೂಗಳಿವೆ. ಮನೆಯವರಿಗಾಗಿ, ದೇವರ ಪೂಜೆಗಾಗಿ ಹೂ ಕೊಂಡುಕೊಳ್ಳಿರಿ” ಎಂದು ಗ್ರಾಹಕರನ್ನು ಆಕರ್ಷಿಸುತ್ತಿದ್ದಳು. ಯುವಕನೊಬ್ಬನಿಗೆ ಅವಳನ್ನು ಕಂಡು ಏಕೋ ಕನಿಕರ ಉಂಟಾಯಿತು. ಸಾಕಷ್ಟು ವಯಸ್ಸಾಗಿದ್ದರೂ ಆಕೆ ವ್ಯಾಪಾರ ಮಾಡಿ ಹಣ ಸಂಪಾದನೆ ಮಾಡುವ ಅಗತ್ಯವಿದೆಯೇ? ಎಂದು ತಿಳಿದುಕೊಳ್ಳುವ...
ವಿದ್ಯುನ್ಮಾನ ತ್ಯಾಜ್ಯಗಳ ವಿಶ್ಲೇಷಣೆಗೆ ಮೊದಲು ಇವುಗಳ ಮೂಲದ ಬಗ್ಗೆ ತಿಳಿಯುವುದು ಅವಶ್ಯಕ. ಈ ತ್ಯಾಜ್ಯಗಳು ಪ್ರಧಾನವಾಗಿ ಶೀತಲ ಪೆಟ್ಟಿಗೆ, ಗಣಕಯಂತ್ರ, ದೂರಸಂಪರ್ಕ ಸಾಧನಗಳು, ಗ್ರಾಹಕ ವಿದ್ಯುನ್ಮಾನ ಉಪಕರಣಗಳು, (ಇವುಗಳಲ್ಲಿ ಮೊಬೈಲ್, ಸೋಲಾರ್ ಪರಿಕರಗಳು, ಇಯರ್‌ಫೋನ್, ಟೆಲಿಫೋನ್, ಟೆಲಿವಿಷನ್ ಇತ್ಯಾದಿ), ಎಲ್.ಇ.ಡಿ. ದೀಪಗಳು, ವೆಂಡಿಗ್ ಯಂತ್ರಗಳು ಮೊದಲಾದವು. ಇವುಗಳ...
ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ ಲೋಕವ ಶೃಂಗರಿಸಿ ಚೆಲುವಿನಲಿ ನಲಿಯುತ/ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ಪ್ರಪಂಚವ ಅಲಂಕರಿಸಿ ಗೆಲುವಿನಲಿ ಕುಣಿಯುತ/ ಬಂದಿದೆ ಯುಗ ಯುಗಾದಿ…… ಮರಗಿಡಗಳ ಹಸಿರಿನಲಿ ಅರಳಿದ ಕುಸುಮಗಳಲಿ ಹೊಸ ಜೀವ ಹರಿಸಿದೆ/ಕೋಗಿಲೆಯ ಸಿರಿಕಂಠದಲಿ ಹರಿಯುವ ತೊರೆಗಳಲಿ ನವಚೇತನ ಹೊಮ್ಮಿಸಿದೆ/ಬೀಸುವ ತಂಗಾಳಿಯಲಿ...
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಪ್ಯಾಂಗೋಂಗ್ ಸರೋವರ -‘ತ್ರೀ ಈಡಿಯಟ್ಸ್’ ಸಂಜೆ ಪ್ಯಾಂಗೋಂಗ್ ಸರೋವರದ ದಡ ತಲಪಿದೆವು. ಸಮುದ್ರ ಮಟ್ಟದಿಂದ 12930 ಅಡಿ ಎತ್ತರದಲ್ಲಿರುವ ಇದು ಇದು ಪ್ರಪಂಚದಲ್ಲಿ ಅತಿ ಎತ್ತರದಲ್ಲಿರುವ ‘ಉಪ್ಪು ನೀರಿನ ಸರೋವರ’ . ಅಂದಾಜು 160 ಕಿ.ಮೀ ಉದ್ದವಿರುವ ಹಾಗು ಒಂದು ಕಿ,ಮೀ...
ಸಂಕ್ರಾಂತಿ ಹಬ್ಬ ಬಂತು, ಸಜ್ಜೆ ರೊಟ್ಟಿ, ಕುಂಬಳಕಾಯಿ, ಬದನೇಕಾಯಿ ಎಣ್ಣೆಗಾಯಿ, ಗಡಸೊಪ್ಪು ಮಾಡಬೇಕಲ್ಲ. ಜೊತೆಗೆ ಎಳ್ಳು ಸಕ್ಕರೆ ಅಚ್ಚು ರೆಡಿಮಾಡಬೇಕು. ಒಂದು ವಾರದಿಂದಲೇ ಸಿದ್ದತೆ ಆರಂಭ. ಒಂದು ದೊಡ್ಡ ಪಟ್ಟಿ ತಯಾರಿಸಿ, ದಿನಸಿ ಅಂಗಡಿಗೆ ಹೊರಟೆ. ವೈದ್ಯಳಾಗಿದ್ದ ಮಗಳು ಹಬ್ಬ ಬಂದ ತಕ್ಷಣ ಯಾವುದಾದರೂ ಪ್ರೇಕ್ಷಣ ಯ...
ಜಗತ್ತಿನ ಹಲವಾರು ಕಡೆ ಅನೇಕ ವಿಸ್ಮಯಗಳು, ಪವಾಡಗಳು ನಡೆಯುತ್ತಿರುತ್ತವೆ. ಆದರೆ ವಿಜ್ಞಾನ ಇವುಗಳಿಗೆ ಸೂಕ್ತ ಕಾರಣಗಳನ್ನಾಗಲೀ, ವಿವರಣೆಗಳನ್ನಾಗಲೀ ನೀಡಲು ವಿಫಲವಾಗಿವೆ ಎಂದೇ ಹೇಳಬೇಕು. ಈ ವಿಸ್ಮಯಗಳಿಗೆ ಪುರಿಜಗನ್ನಾಥನ ದೇಗುಲ ಹೊರತಲ್ಲ. ಪುರಿ ನಗರ ಒರಿಸ್ಸದ ಭುವನೇಶ್ವರದಿಂದ 60 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಜಗನ್ನಾಥನ ದೇವಾಲಯಕ್ಕೆ ಶತಶತಮಾನಗಳ ಇತಿಹಾಸವಿದೆ....
ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ. ಬದುಕಿನುದ್ದಕ್ಕೂ ಕಲಿತ ಅನುಭವ ಪಾಠ ಮರೆತಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಕಂಡ ಕನಸುಗಳೆಲ್ಲ ನುಚ್ಚು ನೂರಾಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ. ಕೈಗೆ...
ನಿಮ್ಮ ಅನಿಸಿಕೆಗಳು…