Daily Archive: March 16, 2023

8

ಜೂನ್ ನಲ್ಲಿ ಜೂಲೇ : ಹನಿ 17

Share Button

(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಪ್ಯಾಂಗೋಂಗ್ ಸರೋವರ -‘ತ್ರೀ ಈಡಿಯಟ್ಸ್’ ಸಂಜೆ ಪ್ಯಾಂಗೋಂಗ್ ಸರೋವರದ ದಡ ತಲಪಿದೆವು. ಸಮುದ್ರ ಮಟ್ಟದಿಂದ 12930 ಅಡಿ ಎತ್ತರದಲ್ಲಿರುವ ಇದು  ಇದು ಪ್ರಪಂಚದಲ್ಲಿ  ಅತಿ ಎತ್ತರದಲ್ಲಿರುವ ‘ಉಪ್ಪು ನೀರಿನ ಸರೋವರ’ . ಅಂದಾಜು 160 ಕಿ.ಮೀ ಉದ್ದವಿರುವ ಹಾಗು ಒಂದು ಕಿ,ಮೀ...

7

ಸಂಕ್ರಮಣ ಕಾಲ

Share Button

ಸಂಕ್ರಾಂತಿ ಹಬ್ಬ ಬಂತು, ಸಜ್ಜೆ ರೊಟ್ಟಿ, ಕುಂಬಳಕಾಯಿ, ಬದನೇಕಾಯಿ ಎಣ್ಣೆಗಾಯಿ, ಗಡಸೊಪ್ಪು ಮಾಡಬೇಕಲ್ಲ. ಜೊತೆಗೆ ಎಳ್ಳು ಸಕ್ಕರೆ ಅಚ್ಚು ರೆಡಿಮಾಡಬೇಕು. ಒಂದು ವಾರದಿಂದಲೇ ಸಿದ್ದತೆ ಆರಂಭ. ಒಂದು ದೊಡ್ಡ ಪಟ್ಟಿ ತಯಾರಿಸಿ, ದಿನಸಿ ಅಂಗಡಿಗೆ ಹೊರಟೆ. ವೈದ್ಯಳಾಗಿದ್ದ ಮಗಳು ಹಬ್ಬ ಬಂದ ತಕ್ಷಣ ಯಾವುದಾದರೂ ಪ್ರೇಕ್ಷಣ ಯ...

9

ಪುರಿ ಜಗನ್ನಾಥನ ವಿಸ್ಮಯದ ಸುತ್ತ

Share Button

ಜಗತ್ತಿನ ಹಲವಾರು ಕಡೆ ಅನೇಕ ವಿಸ್ಮಯಗಳು, ಪವಾಡಗಳು ನಡೆಯುತ್ತಿರುತ್ತವೆ. ಆದರೆ ವಿಜ್ಞಾನ ಇವುಗಳಿಗೆ ಸೂಕ್ತ ಕಾರಣಗಳನ್ನಾಗಲೀ, ವಿವರಣೆಗಳನ್ನಾಗಲೀ ನೀಡಲು ವಿಫಲವಾಗಿವೆ ಎಂದೇ ಹೇಳಬೇಕು. ಈ ವಿಸ್ಮಯಗಳಿಗೆ ಪುರಿಜಗನ್ನಾಥನ ದೇಗುಲ ಹೊರತಲ್ಲ. ಪುರಿ ನಗರ ಒರಿಸ್ಸದ ಭುವನೇಶ್ವರದಿಂದ 60 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಜಗನ್ನಾಥನ ದೇವಾಲಯಕ್ಕೆ ಶತಶತಮಾನಗಳ ಇತಿಹಾಸವಿದೆ....

15

ಗಜಲ್

Share Button

ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ. ಬದುಕಿನುದ್ದಕ್ಕೂ ಕಲಿತ ಅನುಭವ ಪಾಠ ಮರೆತಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಕಂಡ ಕನಸುಗಳೆಲ್ಲ ನುಚ್ಚು ನೂರಾಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲ. ಕೈಗೆ...

12

ಪರೀಕ್ಷೆಯೆಂಬ ಪೆಡಂಭೂತ.

Share Button

ಮಧ್ಯಮ ವರ್ಗದ ಕುಟುಂಬಗಳಲ್ಲಿ ತಂದೆತಾಯಿಗಳು ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಲಿ ಎಂದು ಬಯಸುವುದು ಸಹಜ. ಅವರಿಗೆ ಮುಂದೆ ಮಕ್ಕಳಿಗೆ ಜೀವನದಲ್ಲಿ ಒಂದು ಭದ್ರತೆ ಇದರಿಂದಾಗಿ ಸಿಗುತ್ತದೆ ಎಂಬ ಆಲೋಚನೆ. ಹೆಣ್ಣುಮಕ್ಕಳಿಗೆ ವಿದ್ಯಾವಂತ ವರ ದೊರಕಬಹುದೆಂಬ ಆಸೆ. ಆದರೆ ಮನೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅವರನ್ನೆಲ್ಲ ವಿದ್ಯಾಭ್ಯಾಸ ಮಾಡಿಸಲು...

20

ಅಂತರ್ಜಲಕ್ಕಾಗಿ ಭೂಮಿಯ ಒಳಕ್ಕೆ ಚಾಚಿದ ಹಸ್ತ.

Share Button

ಬಾವಿ ಎಂದಕೂಡಲೇ ಕಣ್ಣಮುಂದೆ ತರಹೇವಾರಿ ಬಾವಿಗಳ ಚಿತ್ರ ಮೂಡುತ್ತದೆ. ಸೇದುವ ಬಾವಿ, ಏತದ ಬಾವಿ, ಕಪಿಲೆ ಬಾವಿ, ಪಂಪ್‌ಸೆಟ್ ಬಾವಿ. ಕೊಳವೆ ಬಾವಿ ಇತ್ಯಾದಿ. ಇವುಗಳಿಂದ ಕುಡಿಯಲು ಮನೆಬಳಕೆಗೆ ನೀರು, ವ್ಯವಸಾಯಕ್ಕೆ ನೀರು ದೊರೆಯುತ್ತದೆ. ಇಷ್ಟೆಲ್ಲ ಉಪಯೋಗಗಳು ಇರುವ ಬಾವಿಯ ಪರಿಕಲ್ಪನೆ ಮನುಷ್ಯನಿಗೆ ಆದಿಯಲ್ಲಿ ಹೇಗೆ ಬಂದಿರಬಹುದು?...

7

ತ್ರಿಮೂರ್ತಿ ರೂಪ ದತ್ತಾತ್ರೇಯ

Share Button

ಅಧಿಕಾರ ಮತ್ತು ಸದವಕಾಶಗಳು ಸಿಕ್ಕಿದಾಗ ಹೆಣ್ಣು ಮಕ್ಕಳನ್ನು ಸತ್ವ ಪರೀಕ್ಷೆಗೊಡ್ಡುವುದು, ಪಾತಿವ್ರತ್ಯ ಪರೀಕ್ಷಿಸುವುದು ಮೊದಲಾದ ದೃಷ್ಟಾಂತಗಳು ನಮ್ಮ ಪುರಾಣದಲ್ಲಿ ಸಾಕಷ್ಟು ಸಿಗುತ್ತದೆ. ಈ ನಿಟ್ಟಿನಲ್ಲಿ ಅಗ್ನಿಪರೀಕ್ಷೆಗೊಳಗಾದವರಲ್ಲಿ  ಸೀತೆ ಮೊದಲಿನವಳಾದರೆ; ಅತ್ರಿ ಮುನಿಯ ಪತ್ನಿ ಅನಸೂಯಾ, ಹರಿಶ್ಚಂದ್ರನ ಹೆಂಡತಿ ಚಂದ್ರಮತಿ ಮೊದಲಾದವರು ನೆನಪಿಗೆ ಬರುತ್ತಾರೆ. ಕೆಲವೊಮ್ಮೆ ಹೀಗೆ ಪರೀಕ್ಷೆ...

17

ಇಂದು – ಅಂದು

Share Button

ಮಾರ್ಚ್‌ ತಿಂಗಳು ಬಂದಿತೆಂದರೆ ಎಲ್ಲೆಲ್ಲೂ ಪರೀಕ್ಷೆಗಳ ವಿಚಾರಗಳೇ ಹರಿದಾಡುತ್ತಿರುತ್ತವೆ.  ಮೊನ್ನೆ ನಮ್ಮವರು ಬೆಳಗಿನ ವಾಯು ವಿಹಾರ ಮುಗಿಸಿ ಬಂದಾಗ, ಜೊತೆಗೊಬ್ಬ ವ್ಯಕ್ತಿಯನ್ನೂ ಕರೆತಂದು, ತಾವು ಬಾಲ್ಯದಲ್ಲಿ ವಾಸಿಸುತ್ತಿದ್ದಾಗ ನೆರೆಮನೆಯವರಾಗಿದ್ದ ನಾರಾಯಣ್‌ ಅಂಕಲ್‌ ಅವರ ಮಗ, ನರಹರಿ ಎಂದೂ, ಈಗ ಈ ಊರಿನಲ್ಲೇ ಇದ್ದಾರೆಂದೂ, ಸಿಟಿಯಲ್ಲಿರುವ ಬ್ಯಾಂಕಿನ ಶಾಖೆಯಲ್ಲಿ...

20

ತಿಂಡಿಯೊಂದು, ಘಮ ಹಲವು!

Share Button

ಮಾನವ ಬದುಕಬೇಕಾದರೆ ತುತ್ತಿನ ಚೀಲ ತುಂಬಿಸುವುದು ಅನಿವಾರ್ಯ. ತುತ್ತಿನ ಚೀಲ ತುಂಬಿಸುವಾಗ ನಾಲಗೆಯ ರಸಗ್ರಂಥಿಗಳಿಗೂ ತೃಪ್ತಿಯಾಯಿತೆಂದರೆ ಮನಸ್ಸಿಗೇನೋ ಖುಷಿ.  ಅದರಲ್ಲೂ ಮನೆಯಲ್ಲೇ ತಯಾರಿಸಿದ ಊಟ, ತಿಂಡಿ ತಿನಸುಗಳ ಸೇವನೆ ಹೊಟ್ಟೆಗೂ ಹಿತ, ದೇಹಕ್ಕೂ ಒಳ್ಳೆಯದು. ಆರೋಗ್ಯವನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಸಹಾಯಕಾರಿಯೂ ಹೌದು. ಶುಚಿ, ರುಚಿ, ಬಣ್ಣ, ಘಮ...

Follow

Get every new post on this blog delivered to your Inbox.

Join other followers: