Monthly Archive: June 2021

15

ಕಿರು ಕಾದಂಬರಿ: ಭಾವ ಸಂಬಂಧ- ಎಳೆ 8

Share Button

ಮುಂದಿನ ಒಂದು ತಿಂಗಳು,  ಸೀತಮ್ಮನವರು ತಾವು ಯುದ್ದಕ್ಕೆ ತಯಾರಿ ಮಾಡಿಕೊಂಡಂತೆ, ಒಂದೊಂದು ಪೈಸೆಯನ್ನೂ ಕೂಡಿಡತೊಡಗಿದರು.  ಪಾತ್ರೆಗೆ ಅಳೆದು ಹಾಕಿದ ಅಕ್ಕಿ, ಬೇಳೆಗಳಿಂದ ಒಂದೊಂದು ಮುಷ್ಟಿ ಮತ್ತೆ ತೆಗೆದು ಹಿಂದೆ ಡಬ್ಬಕ್ಕೆ ಹಾಕುತ್ತಿದ್ದರು.  ಬಾಣಲೆಗೆ ಹಾಕಿದ ಎಣ್ಣೆಯಿಂದ ಎರಡು ಚಮಚ ಎಣ್ಣೆ ತೆಗೆದು ಹಿಂದಕ್ಕೆ ಹಾಕುತ್ತಿದ್ದರು.  ಎಲ್ಲದ್ದಕ್ಕಿಂತ ಅಗ್ಗದ...

11

‘ಕಾಡು’

Share Button

ನನ್ನ ಮಗುವಿನ ಕಲ್ಪನೆಯ ಕಾಡಲ್ಲಿ ಬರಿಯ ನಗುವಿನ ಮರಗಳು ಗಟ್ಟಿಯಾಗಿ ಎತ್ತರಕೆ ಬೆಳೆದು… ಅವುಗಳ ಬುಡದಲಿ ನೇಹದ ಸಸಿಗಳು ನಳನಳಿಸಿ; ನಂಬುಗೆ ಹೂವರಳಿ, ವಿಶ್ವಾಸದ ಫಲ ಬಿಟ್ಟು ತೊನೆದಾಡುತ್ತಾ ದಟ್ಟವಾಗಿದೆ ಕಾಡು. ನನ್ನ ಕಲ್ಪನೆಯಲೂ ಒಂದು ಕಾಡು ಅಭದ್ರ ಬೇರುಗಳಲಿ ನಿಂತ, ಕತ್ತಲೆ ತೂರಿಕೊಂಡು ಬೆಳಕಿಗೆ ನಿಷೇಧ...

10

ಮಳೆ…ಮಳೆ…ಮಳೆ

Share Button

ಮಳೆಯೆಂಬುದು ಇಳೆಗೆ ಹಳೆಯ ಗೆಳೆಯನೇ ಆದರೂ ದೂರದಲ್ಲದೊ ಬರುತ್ತಾನೆಂದು ಸುದ್ದಿ ಸಿಕ್ಕಿದರು ಸಾಕು ಚಾಮರ ಬೀಸಿ ಧೂಳೆಬ್ಬಿಸಿ ಸಡಗರವೋ ಸಡಗರ! ಋತುಸ್ನಾತೆಯ ಎದೆಯ ಅಂಗಳದಲ್ಲಿ ಡವಡವದ ರವ |1| ಹೀಗೊಂದು ಕಣ್ಣು ಮುಚ್ಚಾಲೆ ಆಡಿದರೆ ಆ ಮಳೆರಾಯ ತಾಳಬೇಕಲ್ಲವೇ ಮಕ್ಕಳೊಂದಿಗಳು ಎಷ್ಟೆಂದರೂ ಇಳೆಯಮ್ಮ ಕಿವಿಯೆಲ್ಲ ಮಳೆರಾಯನ ವೈಹಾಳಿಯ...

7

ಅಪ್ಪನಿಗೆರಡು ಸಾಲು

Share Button

ಅಪ್ಪನಲ್ಲವೆ ಅಕ್ಕರೆಯ ತುಪ್ಪದ ಸವಿ ತೋರಿದವನು ತನ್ನ ದುಡಿಮೆಯಲೆಮಗೆ ಉಣಿಸಿ ಉಡಿಸಿದವನು ಅಪ್ಪನಿಲ್ಲದ ಜೀವನ ಉಪ್ಪಿಲ್ಲದ ಸಪ್ಪೆ ಕೂಳು ಅಪ್ಪನಿರೆ ತಾನೇ ನಿತ್ಯ ಸಂತಸದ ಬಾಳು ಅಪ್ಪನಲ್ಲವೆ ತಾ ಸಿಪಾಯಿ ಮನೆಗೆ ಕಾವಲು ಅಪ್ಪನ ಹಣೆಯ ಬೆವರ ಸಾಲು ಬೆಳಗುವುದೆಮ್ಮ ಬಾಳು ಅಮ್ಮನಿಗೂ ಜೊತೆಗಾರ ಮನೆಯ ಸಲಹೆಗಾರ...

20

ಹೀಗೊಂದು ಬಾಲ್ಯದ ಆಟ

Share Button

ಬೆಳಿಗ್ಗೆ ಏಳುತ್ತಿದ್ದ ಹಾಗೆಯೇ ಬಾಲ್ಯದಲ್ಲಿ ನಾವಾಡುತ್ತಿದ್ದ ಒಂದು ಆಟದ ನೆನಪಾಯಿತು. ಮೊಬೈಲ್, ದೂರದರ್ಶನ ಇಲ್ಲದ ಕಾಲ. ಪಾಠದ ಜೊತೆ ಆಟಗಳಿಗೇನು ಕಡಿಮೆ ಇರಲಿಲ್ಲ. ಒಟ್ಟಿನಲ್ಲಿ ಸಮೃದ್ಧ ಬಾಲ್ಯ ಕಳೆದ ಅದೃಷ್ಟವಂತರು ನಾವೆಂದು ಎದೆ ತಟ್ಟಿ ಹೇಳಬಹುದು. ಇದ್ದುದರಲ್ಲಿಯೇ ತೃಪ್ತಿಪಟ್ಟುಕೊಂಡು, ಅದಕ್ಕೆ ತಕ್ಕುದಾದ ಹಲವು ಆಟಗಳು. ಕಲ್ಲಾಟ, ಪಲ್ಲೆಯಾಟ,...

14

ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ? ಪುಟ 6

Share Button

ವಿಕ್ಟೋರಿಯ ಜಲಪಾತ ಗಂಗೆಯ ರುದ್ರನರ್ತನವನ್ನು ಕಂಡು ಬೆರಗಾದ ಲಿವಿಂಗ್ ಸ್ಟೊನ್ ಈ ಜಲಪಾತವನ್ನು ತನ್ನ ಸಾಮ್ರಾಜ್ಞಿಯ ಹೆಸರಿನಿಂದ ಕರೆದನು. ಅಕಾಶದಲ್ಲಿ ಸಂಚರಿಸುತ್ತಿದ್ದ ದೇವತೆಗಳು ಈ ದೃಶ್ಯ ವೈಭವ ನೋಡಿ ಮೋಹಿತರಾಗಿ ಅಲ್ಲೇ ನಿಂತುಬಿಟ್ಟರಂತೆ. ಹಾಗಾಗಿ ಇದಕ್ಕೆ ‘ಏಂಜಲ್ ಫಾಲ್ಸ್’ ಎಂಬ ಅನ್ವರ್ಥನಾಮವೂ ಇದೆ. ಸ್ಥಳೀಯರು ಈ ಜಲಪಾತವನ್ನು...

20

ಕವಿಗಳು

Share Button

ಕವಿಗಳು ಸಾರ್ ಕವಿಗಳು ಕಂಡದ್ದು ಕಾಣದೆಲ್ಲ ಬರೆಯುವವರು ಬರೆಯದಿದ್ದರೆ ತಿಂದನ್ನ ಜೀರ್ಣವಾಗದವರು ಬರೆದು ಬರೆದು ಬೇಕಿದ್ದವರಿಗೂ ಬೇಡವಾದವರಿಗೂ ಕೇಳಿಸುವವರು ಜನ ಆಕಳಿಸಿದರೂ ತೂಕಡಿಸಿದರೂ ಕವಿ ಗೋಷ್ಠಿಗಳಲ್ಲಿ ಕವನ ವಾಚಿಸುವವರು ಹೆತ್ತವರಿಗೆ ಹೆಗ್ಗಣ ಮುದ್ದಂತೆ ಬರೆದಿದ್ದೆನ್ನೆಲ್ಲಾ ಅಮೋಘವೆಂದು ಭಾವಿಸಿಕೊಳ್ಳುವವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಹೆಮ್ಮೆಯಿಂದ ಬೀಗುವರು ಬುದ್ಧಿಯನ್ನೆಲ್ಲಾ...

19

ಹರಟೆ: ಮರೆವು

Share Button

ಬೆಳಿಗ್ಗೆ ಅರ್ಜೆಂಟ್ ಅರ್ಜೆಂಟಾಗಿ ಶಾವ್ಗೆ ಬಾತ್ ಮಾಡ್ತಾ ಇದ್ದೆ, ಯಜಮಾನ್ರು ಆಫೀಸಿಗೆ ಹೋಗಬೇಕಲ್ಲ ಅಂತ. ಅದೇ ಟೈಮಿಗೆ ನಮ್ಮನೆಲಿರೋ ನಾಲ್ಕುಕಾಲಿನ ಇಬ್ಬರು ಹೆಣ್ಣು ಮಕ್ಕಳು(🐶🐕) ಜೋರಾಗಿ ಶರಂಪರ ಜಗಳ ಶುರು ಮಾಡ್ಕೊಂಡ್ರು. ಅದೇನು ಅಂತ ನೋಡಿ ಇಬ್ಬರಿಗೂ ಗದರಿ ಬೇರೆ ಬೇರೆ ರೂಮುಗಳಲ್ಲಿ ಬಿಟ್ಟು ವಾಪಸ್ ಅಡ್ಗೆಮನೆಗೆ ಬರುವ ವೇಳೆಗೆ...

15

ನ್ಯಾನೋ ಕಥೆಗಳು

Share Button

ತಬ್ಬಲಿ ರೈಲಿನಲ್ಲಿ ಮಲಗಿದ್ದ ರಾಮು ಹಿಂದಿನ ದಿನಗಳನ್ನು ನೆನಪಿಸಿಕೊಂಡ. ತಬ್ಬಲಿಯಾದ ತನ್ನನ್ನು, ಅಜ್ಜಿ ಕಷ್ಟಪಟ್ಟು ಸಾಕಿದ್ದಳು. ಹಣ ಸಂಪಾದಿಸಿ ಬೇಗ ಬರುವೆನೆಂದು ಹೋದವನು ಯಾರದೋ ಕೈವಾಡದಿಂದ ಜೈಲು ಸೇರಿದ್ದ! “ಎರಡು ವರ್ಷಗಳೇ ಕಳೆದು ಹೋದವಲ್ಲಾ, ಅಜ್ಜಿ ಏನ್ಮಾಡ್ತಿದ್ದಾರೋ” ಎಂದುಕೊಂಡು ನಿಲ್ದಾಣದಲ್ಲಿಳಿದು ಮನೆಗೆ ಹೋದರೆ ಅಲ್ಲೇನಿದೆ?ಅಂಗಳದಲ್ಲಿ ಬಿದ್ದಿತ್ತು ಅವನಜ್ಜಿಯ...

20

ಸಾಕ್ಷಾತ್ಕಾರ

Share Button

ಎಲ್ಲವೂ ಇದ್ದು ಎನೂ ಇಲ್ಲದ ಸಂದರ್ಭದಲಿ ಸಾಗುತ್ತಿದೆ ನನ್ನ ವಯಸ್ಸು. ಸಮತೋಲನ ತಪ್ಪಿರಬಹುದೆಂಬ ಶಂಕೆಯಲಿ ಸಿಲುಕಿದೆ ನನ್ನ ಮನಸ್ಸು. ಲೌಕಿಕ ವಿಚಾರಧಾರೆಗಳ ರಾಶಿಯಿಂದ ಮೂಡಿಸಿತ್ತು ನನ್ನಲ್ಲಿ ತಮಸ್ಸು. ಅದೇಕೋ ಕಾಣೆ, ಈ ದಿನಗಳಲ್ಲಿ ಮಾತು ಮೌನದತ್ತ ವಾಲಿದೆ, ಮಿದುಳು ಸ್ಪಬ್ಧವಾಗಿದೆ. ಕೃತಿ ಚುರುಕಾಗಿದೆ, ಹೃದಯ ಸ್ಪಂದಿಸಿದೆ. ನನ್ನ...

Follow

Get every new post on this blog delivered to your Inbox.

Join other followers: