Monthly Archive: July 2021
ಹಿಟಾಚಿ ಸೀ ಸೈಡ್ ಪಾರ್ಕ್18-04-2019 ಗುರುವಾರ ಟೋಕಿಯೋದಲ್ಲಿ ಇಂದು ಇದ್ದ ಶುಭ್ರ ಮುಂಜಾನೆ ನಮ್ಮನ್ನು ಎಚ್ಚರಿಸಿತು. ಸ್ನಾನಾದಿಗಳನ್ನು ಮುಗಿಸಿ ಎಂಟೂವರೆಗೆ ಗೋವಿಂದಕ್ಕೆ ಹೊರಟೆವು. ಅಲ್ಲಿ ಬಿಸಿ ತಿಂಡಿ ನಮ್ಮನ್ನು ಸ್ವಾಗತಿಸಿತ್ತು. ಪೂರಿ, ಉಪ್ಪಿಟ್ಟು ಅಂದಿನ ಮೆನು. ಎಲ್ಲರೂ ಉಪಾಹಾರ ಮುಗಿಸಿ ಅಂದಿನ ಪ್ರೇಕ್ಷಣೀಯ ಸ್ಥಳವಾದ ‘ಹಿಟಾಚಿ ಸೀ...
ಹೊಳಲ್ಕೆರೆ ತಾಲ್ಲೂಕಿನವರ ಧಾರ್ಮಿಕ ಜಾಗೃತಿಯನ್ನು ಕುರಿತ ಒಂದು ಅಧ್ಯಯನ ಮಾಡುವ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಾಗ ಕ್ಷೇತ್ರಕಾರ್ಯ ಮಾಡಬೇಕಾಯಿತು. ಅದು ಪ್ರಶ್ನಾವಳಿಗೆ ಉತ್ತರವನ್ನು ಆಯ್ದ ವ್ಯಕ್ತಿಗಳಿಂದ ಪಡೆಯುವುದರ ಜೊತೆಗೆ ಪ್ರಬಂಧದ ಭಾಗವಾದ ದೈವಾರಾಧನೆಯ ಸ್ವರೂಪ, ದೈವಕೇಂದ್ರಿತ ಆಚರಣೆಗಳ ವೈಶಿಷ್ಟ್ಯ, ಧಾರ್ಮಿಕ ಒಳನೋಟವುಳ್ಳ ಐತಿಹ್ಯ, ಐತಿಹಾಸಿಕ ಮಹತ್ವವುಳ್ಳ ಸ್ಥಳಗಳ ಅಧ್ಯಯನವನ್ನೂ ಒಳಗೊಂಡಿತ್ತು....
ಆಫೀಸಿನ ಫೈಲಿನಲ್ಲಿ ತಲೆ ಹುದುಕಿಸಿಕೊಂಡು ಕೆಲಸದಲ್ಲಿ ಮಗ್ನನಾಗಿದ್ದ ರಾಮನಿಗೆ ಯಾರದೋ ನೆರಳು ತನ್ನ ಬಳಿ ಬಿದ್ದಂತಾಗಿ ತಲೆಯೆತ್ತಿದ. ಅಟೆಂಡರ್ ಲಿಂಗಪ್ಪ ”ಸಾರ್,.. ಎಲ್ಲರೂ ಮನೆಗೆ ಹೋದರು. ನೀವಿನ್ನೂ … ಅದೇನೇ ಇದ್ದರೂ ನಾಳೆ ಮಡುವಿರಂತೆ. ಈಗ ಹೊರಡಿ ಸಾರ್. ಇವತ್ತು ನಾನೂ ಒಸಿ ಬೇಗ ಮನೆಗೆ ಹೋಗಬೇಕಿತ್ತು....
ತುಂಬಾ ದಿನಗಳಿಂದ, ಮಣಿಪಾಲದಲ್ಲಿರುವ ನಮ್ಮ ಕುಟುಂಬ ಸ್ನೇಹಿತರ ಮನೆಗೆ ಹೋಗಲು ಮನಸ್ಸು ಮಾಡಿದ್ದರೂ, ದಿನ ಮುಂದೋಡುತ್ತಲೇ ಇತ್ತು. ಅಷ್ಟು ದೂರ ಹೋದ ಮೇಲೆ ಅಲ್ಲಿಯೇ ಅಕ್ಕ ಪಕ್ಕದಲ್ಲಿರುವ ಯಾವುದಾದರೂ ವಿಶೇಷ ಸ್ಥಳವನ್ನೂ ಕಾಣುವ ಅವಕಾಶವಿದ್ದರೆ ಚೆನ್ನಾಗಿತ್ತೆಂಬ ಅನಿಸಿಕೆ ನಮ್ಮದಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ತರಂಗ ವಾರಪತ್ರಿಕೆಯಲ್ಲಿ ಬಂದ...
ನನ್ನ ಬಾಲ್ಯದ ನೆನಪಿನ ಉಪ್ಪಿನಕಾಯಿಯ ಭರಣಿಯನ್ನು ನಿಮ್ಮ ಮುಂದೆ ತಂದಿದ್ದೇನೆ. 1980-85 ಕಾಲ ಅದು. ಕೇರಳದ ಕರಾವಳಿಯ ಕಾಸರಗೋಡಿನ ಕುಂಬಳೆ ಎಂಬ ಹಳ್ಳಿಯ ಗ್ರಾಮೀಣ ಬದುಕಿನ ಚಿತ್ರಣವಿದು. ಪಶ್ಚಿಮ ಕರಾವಳಿಯ ಗಾಳಿಗೆ ತಲೆದೂಗುವ ತೆಂಗು-ಕಂಗು ಬೆಳೆಗಳ ತೋಟ ಹಾಗೂ ಗುಡ್ಡ ಬೆಟ್ಟಗಳ ನಡುವೆ ಅಲ್ಲಲ್ಲಿ ಕಾಣಿಸುವ, ಮಂಗಳೂರು...
ಈ ಜಗತ್ತಿನಲ್ಲಿ ಉತ್ತಮರು, ಮಧ್ಯಮರು, ಅಧಮರು (ರಾಕ್ಷಸ ಪ್ರವೃತ್ತಿಯವರು) ಹೀಗೆ ಮಾನವರು ಆವರವರ ಗುಣಧರ್ಮಕ್ಕನುಸಾರ ಆಗಿ ಹೋಗಿದ್ದಾರೆ. ಯಾವುದೋ ಸನ್ನಿವೇಶದಿಂದ ಒಳ್ಳೆಯವರು ಕೆಟ್ಟವರಾಗಬಹುದು ಕೆಟ್ಟವರು ಒಳ್ಳೆಯವರಾಗಬಹುದು. ಹಾಗೆಯೇ ಒಳ್ಳೆಯವರ ಹೊಟ್ಟೆಯಲ್ಲಿ ಕೆಟ್ಟವರು ಹುಟ್ಟಬಹುದು. ಕೆಟ್ಟವರಿಂದ ಒಳ್ಳೆಯವರ ಜನನವೂ ಆದ ದೃಷ್ಟಾಂತಗಳಿವೆ. ತಮ್ಮ ಒಳ್ಳೆಯತನದಿಂದ ಕೆಟ್ಟವರನ್ನು ಒಳ್ಳೆಯವರನ್ನಾಗಿಯೂ ಮಾಡಬಹುದು....
ಜಪಾನ್ ಮುಟ್ಟಿದಾಗ ಮಧ್ಯಾಹ್ನ 3.45 ಗಂಟೆ ಆಗಿತ್ತು. ಇದು ಅಲ್ಲಿಯ ಸಮಯ. ಭಾರತಕ್ಕಿಂತ ಜಪಾನ್ ಸಮಯ ಮೂರು ಗಂಟೆಗಳ ಕಾಲ ಮುಂದೆ ಇರುತ್ತದೆ. ಉದಾಹರಣೆಗೆ ನಮ್ಮಲ್ಲಿ ಮಧ್ಯಾಹ್ನ ಎರಡು ಗಂಟೆ ಆಗಿದ್ದರೆ ಜಪಾನಿನಲ್ಲಿ ಸಂಜೆ ಐದು ಗಂಟೆ ಸಮಯ. ನರಿಟದಲ್ಲಿ ಇಳಿದಾಗ ಅಷ್ಟಾಗಿ ಜನಜಂಗುಳಿ ನಮಗೆ ಕಾಣಿಸಲಿಲ್ಲ....
ನಮ್ಮ ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ಹುಟ್ಟು ಮತ್ತು ಸಾವು ನಮ್ಮ ಕೈಯಲ್ಲಿಲ್ಲ. ನಾವು ಬದುಕಿದ್ದೇವೆ ಅನ್ನುವುದು ನಿಜ ಆದರೆ ಯಾವಾಗ ಸಾಯುತ್ತೇವೆ ಅನ್ನುವುದು ಯಾರಿಗೂ ಗೊತ್ತಿಲ್ಲ. ಆದರೂ ಒಳ್ಳೆಯ ಆರೋಗ್ಯದಿಂದ ದೀರ್ಘ ಕಾಲ ಬಾಳಬೇಕೆಂಬುದು ಹೆಚ್ಚಿನವರ ಅಪೇಕ್ಷೆ ಆಗಿರುತ್ತದೆ. ನಮ್ಮ ಜೀವಿತಾವಧಿಯಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತೇವೆ....
ಮೌನ ಮೆರವಣಿಗೆ ನಡೆದಿದೆ ರಥೋತ್ಸವದಲ್ಲಿ ರಂಗುರಂಗಿನ ಕನಸುಗಳ ಹೊತ್ತು ನೆನಪುಗಳ ಅನಾವರಣ ಕಹಿ ಮರೆವಿನ ಪಲಾಯನ ! ಉಳಿದು ಹೋಗಿದೆ ನೆನಪುಗಳು ಎಂದೆಂದಿಗೂ ಕರಗದಂತೆ ” ತಿಮ್ಮಪ್ಪನ ” ಐಶ್ವರ್ಯದಂತೆ ಬಳಸಿದಷ್ಟೊ …… ಕರಗಿಸಿದಷ್ಟೊ …… ಎಂದೆಂದಿಗೂ ಮುಗಿಯದಂತೆ….. ನೆನಪಿನ ಹನಿಗಳು ಜಾರುತಿದೆ ಬಿಸಿಬಿಸಿಯಾಗಿ...
ಕೌಶಿಕನ ತ್ಯಜಿಸಿ ದಿಗಂಬರೆಯಾಗಿ ಕಲ್ಯಾಣದತ್ತ ಹೆಜ್ಜೆಹಾಕಿದೆ. ನಿನ್ನಲ್ಲಿ ಆ ಆತ್ಮಸೈರ್ಯ, ಧೃಢ ಮನಸ್ಸು, ಆಧ್ಯಾತ್ಮಿಕ ಶಕ್ತಿ ಎಲ್ಲಿಂದ ಬಂತವ್ವ? ಕಲ್ಯಾಣದಲ್ಲಿ ಶರಣರ ಸಂಗದಲ್ಲಿ ಮುಗಿಲೆತ್ತರ ಬೆಳೆದೆ. ವಚನ ಸಾಹಿತ್ಯ ಲೋಕದಲ್ಲಿ ಧೃವತಾರೆಯಂತೆ ಮಿನುಗಿದೆ. ನಿನ್ನೊಲುಮೆಯ ಚನ್ನಮಲ್ಲಿಕಾರ್ಜುನನ ಅರಸುತ್ತಾ ಅಲ್ಲಿಂದ ಶ್ರೀಶೈಲದೆಡೆಗೆ ಸಾಗಿದೆ. ಅಕ್ಕಾ, ನಿನ್ನಂತೆಯೇ ಈ ಲೋಕದ...
ನಿಮ್ಮ ಅನಿಸಿಕೆಗಳು…