Monthly Archive: November 2024
ಅಂಗಳದ ಅಂಚಲ್ಲಿನೆಟ್ಟ ಹೂಗಿಡಈಗ ಚಿಗುರಿ ನಗುತಿದೆ ಬೀಸಿದಾ ಗಾಳಿಗೆಹಸಿರ ತಂಪ ಸುರಿಸಿಊರೆಲ್ಲಾ ಕಳಿಸಿದೆ ಬಿಟ್ಟ ಹೂ ಚೆಲುವುಒಲವಿನ ಗೆರೆ ಹಾಕಿಕವಿತೆಯ ಉಸಿರಿವೆ ಒಂದು ಗಿಡದಿನೂರು ಹೂವಿನ ಗುರುತುಜೀವ ಭಾವ ತುಂಬಿವೆ ಎಷ್ಟೋ ಕನಸುಹೂವ ಮೇಲೆಎಳೆ ಎಳೆಯಲೂ ಹೆಸರು ನೀರು ಜೀವ ಬೇರು ಭಾವಒರತೆ ಜಗದ ಉಸಿರುತುಂಬಿ ನಿಲ್ಲಲಿ...
ಮೈಸೂರಿನಲ್ಲಿರುವ ಖ್ಯಾತ ಸಾಹಿತಿ ಶ್ರೀಮತಿ ಸಿ.ಎನ್.ಮುಕ್ತಾ ಅವರ ಕಾದಂಬರಿ ‘ತಾಯಿ’… ನಿಮ್ಮ ಓದಿಗಾಗಿ. ಮಗ-ಸೊಸೆ ತಮ್ಮ ಕೆಲಸಗಳಿಗೆ ಹೋದ ನಂತರ ರಾಜಲಕ್ಷ್ಮಿ ತಮ್ಮ ಕೋಣೆಯ ಕಿಟಕಿ ಪಕ್ಕ ಕುಳಿತು ಹೊರಗಡೆಗೆ ಇಣುಕಿದರು. ಅವರು ಬೆಂಗಳೂರಿಗೆ ಬಂದು ಒಂದು ತಿಂಗಳಾಗಿತ್ತು. ಅವರ ಪತಿ ಶಂಕರಮೂರ್ತಿ ಇರುವವರೆಗೂ ಅವರ ನಂಜನಗೂಡಿನಲ್ಲೇ...
ಗಾಢ ನಿದ್ರೆಯಲ್ಲಿದ್ದ ಶಾರದಮ್ಮನವರಿಗೆ ಯಾರದ್ದೋ ಹೆಜ್ಜೆಗಳ ಸಪ್ಪಳ ಇವರ ಸಮೀಪಕ್ಕೆ ಬಂದು ನಿಂತಂತಾಯಿತು. ಜೊತೆಗೆ ಬಿರುಸಾದ ಉಸಿರಾಟದ ಸದ್ದು ಕೂಡ ಕೇಳಿದಂತಾಯಿತು. ಕನಸಿರಬೇಕೆಂದು, ಯಾವುದೋ ಭ್ರಮೆಯೆಂದು ಮಗ್ಗುಲು ಬದಲಾಯಿಸಿ ಮಲಗಲು ಪ್ರಯತ್ನಿಸಿದರು. ಇಲ್ಲ ಮತ್ತೆಮತ್ತೆ ಬಿರುಸಾದ ಉಸಿರಾಟದ ಸದ್ದು ! ಗಾಭರಿಯಾಗಿ ಥಟ್ಟನೆ ಎಚ್ಚರವಾಯಿತು. ಹಾಗೇ ನಿಧಾನವಾಗಿ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಹೋ ಚಿ ಮಿನ್ಹ್ ಸ್ಮಾರಕ ( Ho Chi Minh Mausoleum) ‘ಹೋ ಚಿ ಮಿನ್ಹ್ ‘ ಅವರು ಆಧುನಿಕ ವಿಯೆಟ್ನಾಂನ ನಿರ್ಮಾತೃ ಎನ್ನಬಹುದಾದ ಯಶಸ್ವಿ ನಾಯಕ. ಇವರನ್ನು ವಿಯೆಟ್ನಾಂನ ರಾಷ್ಟ್ರಪಿತ ಎಂದೂ ಕರೆಯುತ್ತಾರೆ. ಬಡತನದ ಬಾಲ್ಯ, ಹಡಗಿನಲ್ಲಿ ಅಡುಗೆಯ ಸಹಾಯಕರಾಗಿ ಕೆಲಸ, ವಿವಿಧ...
ಕೆಲವೊಮ್ಮೆ ಕೆಲವು ವಿಷಯಗಳು ಸಂಭವಿಸುತ್ತವೆ. ಯಾವ ಕಾರಣದಿಂದ ಆ ವಿಷಯ ಸಂಭವಿಸಿತು ಅನ್ನುವುದಕ್ಕೆ ಕಾರಣಗಳು ಗೊತ್ತಾಗುವುದೇ ಇಲ್ಲ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಬೇರೇನೋ ನಡೆದುಬಿಡುತ್ತದೆ. ಎಲ್ಲವೂ ಇದ್ದು ಇಲ್ಲದಂತೆ, ಎಲ್ಲರೂ ಇದ್ದೂ ಇಲ್ಲದಂತೆ ಆಗುವುದುಂಟು. ಗುರುತು ಪರಿಚಯ ಇರದವರು ಕೂಡಾ ನಮ್ಮ ನೆರವಿಗೆ ಧಾವಿಸುವುದು ಕಂಡಾಗ ಎಲ್ಲೋ...
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..ಟ್ರಾನ್ ಕ್ವೋಕ್ ಪಗೋಡ ‘ಟ್ರಾನ್ ಕ್ವೋಕ್ ಪಗೋಡ (Tran Quoc Pagoda) ‘ ಎಂಬುದು ವಿಯೆಟ್ನಾಂನ ಹನೋಯ್ ನಗರದಲ್ಲಿರುವ ಪ್ರಾಚೀನವಾದ, ಬಹಳ ಸುಂದರವಾದ ಬೌದ್ಧರ ಆರಾಧನಾ ಮಂದಿರ. ನಮ್ಮ ಮಾರ್ಗದರ್ಶಿ ತಿಳಿಸಿದ ಪ್ರಕಾರ, ಈ ಪಗೋಡಾದ ಮೂಲ ವಾಸ್ತುಶಿಲ್ಪವು ಫ್ರೆಂಚ್ ಶೈಲಿಯಲ್ಲಿದೆ. ಟ್ರಾನ್ ಕ್ವೋಕ್...
‘ಅನುಭವವೇ ಗಾದೆಮಾತು’. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಮುಂತಾದವು ಗಾದೆಗಳ ಕುರಿತಾಗಿ ಪ್ರಚಲಿತವಾಗಿರುವ ಗಾದೆಗಳು. ಅಂತಹುದೇ ಮತ್ತೊಂದು ಜನಪ್ರಿಯ ಗಾದೆ “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ”. ಇದೇನಿದು? ಕಾಲಗರ್ಭದ ಮೊದಲ ಓದುಗಳ ಅಭಿಪ್ರಾಯವೇನೋ ತಿಳಿಯೋಣ ಎಂಬ ಕುತೂಹಲದಿಂದ ಓದಲು ಹೊರಟರೆ ಗಾದೆ ಮಾತುಗಳ ಕುರಿತಾದ...
ಇಂದ್ರಿಯಾಣಾಂ ಹಿ ಚರತಾಮ್ಯನ್ಮನೋಽನು ವಿಧೀಯತೇ Iತದಸ್ಯ ಹರತಿ ಪ್ರಜ್ಞಾಮ್ವಾಯುರ್ನಾವಮಿವಾಂಭಸಿ II 2-67|| ನೀರಿನಲ್ಲಿ ಚಲಿಸುವ ನಾವೆಯನ್ನು ಗಾಳಿಯು ಹೇಗೆ ದಿಕ್ಕು ತಪ್ಪಿಸಿ ಅಪಹರಿಸುವುದೋ ಹಾಗೆಯೇ ವಿಷಯಗಳಲ್ಲಿ ಚಲಿಸುತ್ತಿರುವ ಇಂದ್ರಿಯಗಳಲ್ಲಿ ಮನಸ್ಸು ಯಾವ ಇಂದ್ರಿಯದ ಜೊತೆಯಲ್ಲಿ ಇರುತ್ತದೆಯೋ ಆ ಒಂದೇ ಇಂದ್ರಿಯವು ಅಯುಕ್ತ ಪುರುಷನ ಬುದ್ಧಿಯನ್ನು ಅಪಹರಿಸುತ್ತದೆ. ಇಲ್ಲಿ...
ಗಡಿನಾಡಿನ ಕನ್ನಡದ ಹಿರಿಯ ಕವಿ ದಿವಂಗತ ಕಯ್ಯಾರ ಕಿಞ್ಷಣ್ಣ ರೈ ರಚಿಸಿದ ‘ನೀ ನನಗಿದ್ದರೆ ನಾ ನಿನಗೆ’ ಎಂಬ ಚೆಂದದ ಮಕ್ಕಳ ಪದ್ಯದೊಂದಿಗೆ ಈ ಚಿಂತನವನ್ನು ಆರಂಭಿಸೋಣ. – “ಸಂತೆಗೆ ಹೋದನು ಭೀಮಣ್ಣ, ಹಿಂಡಿಯ ಕೊಂಡನು ಹತ್ತು ಮಣಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜೊತೆಯಲಿ ಸಾಗಿಸಿದ” ಕತ್ತೆಯು...
ಆತ್ಮೀಯ ಓದುಗರೇ, ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನನ್ನ ಪತ್ನಿ ಹಾಗೂ ಮಕ್ಕಳ ಪರಿಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ. 70ನೇ ವಯಸ್ಸಿನಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲೆದೆ ಸದಾ ಚುರುಕಾಗಿ ಒಡಾಡಿಕೊಂಡಿದ್ದ ನಾನು ಹೃದಯಾಘಾತದಿಂದ ಮೃತಪಟ್ಟದ್ದನ್ನು ಅರಗಿಸಿಕೊಳ್ಳುವುದು ಅವರಿಗೆ ಬಹಳ ಕಷ್ಟವಾಗಿತ್ತು. ಜೊತೆಗೆ ನಾನು ಕೆಲವು ವರ್ಷಗಳ...
ನಿಮ್ಮ ಅನಿಸಿಕೆಗಳು…