ನೆಟ್ಟ ಹೂಗಿಡ
ಅಂಗಳದ ಅಂಚಲ್ಲಿ
ನೆಟ್ಟ ಹೂಗಿಡ
ಈಗ ಚಿಗುರಿ ನಗುತಿದೆ
ಬೀಸಿದಾ ಗಾಳಿಗೆ
ಹಸಿರ ತಂಪ ಸುರಿಸಿ
ಊರೆಲ್ಲಾ ಕಳಿಸಿದೆ
ಬಿಟ್ಟ ಹೂ ಚೆಲುವು
ಒಲವಿನ ಗೆರೆ ಹಾಕಿ
ಕವಿತೆಯ ಉಸಿರಿವೆ
ಒಂದು ಗಿಡದಿ
ನೂರು ಹೂವಿನ ಗುರುತು
ಜೀವ ಭಾವ ತುಂಬಿವೆ
ಎಷ್ಟೋ ಕನಸು
ಹೂವ ಮೇಲೆ
ಎಳೆ ಎಳೆಯಲೂ ಹೆಸರು
ನೀರು ಜೀವ ಬೇರು ಭಾವ
ಒರತೆ ಜಗದ ಉಸಿರು
ತುಂಬಿ ನಿಲ್ಲಲಿ ಹಸಿರು
-ನಾಗರಾಜ ಬಿ ನಾಯ್ಕ, ಕುಮಟಾ
ಚಂದದ ಕವನ
ಧನ್ಯವಾದಗಳು……
ಸರಳ ಸುಂದರ ಕವನ..ಚೆನ್ನಾಗಿದೆ..
ಧನ್ಯವಾದಗಳು
ನೀರು ಜೀವ ಬೇರು ಭಾವ
ಒರತೆ ಜಗದ ಉಸಿರು
ತುಂಬಿ ನಿಲ್ಲಲಿ ಹಸಿರು….
ಅರ್ಥವತ್ತಾದ ಸಾಲುಗಳು ಮನಮುಟ್ಟುವಂತಿವೆ.
ಧನ್ಯವಾದಗಳು
ಚಂದದ ಕವನ
ಧನ್ಯವಾದಗಳು
ಹೂವಿನ ನವಿರಾದ ಪರಿಮಳದಂತೆಯೋ ಮೂಡಿ ಬಂದಿರುವ ಚಂದದ ಕವನ.