ಸಾಕಪ್ಪಾ ಸಾಕು
ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ
ನನ್ನ ಮನಸ್ಥಿತಿಗೆ ಹೊಂದುವಂತೆ
ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇ
ನನ್ನದೊಂದು ತರಹ ಮನೆಯೊಳಗಣ ಆಕ್ರೋಶ
ಇದನ್ನು ನಾ ಕಲಿತೆ ಅಮ್ಮನಿಂದ
ಅದಕ್ಕೆ ಮುಂಚೆ ಅವಳು ಕಲಿತಿರಬಹುದು ಅವಳಮ್ಮನಿಂದ
ಹೀಗೇ………
ಗ್ರೀಕರು ಇದಕ್ಕೆ ಒಂದು ಹೆಸರಿಟ್ಟಿರಬಹುದು
ಈಗ ಜರ್ಮನರೂ ಸಹ
ಹೆಚ್ಚು ಹೆಚ್ಚು ಅದರ ಬಗೆ ತಿಳಿಯುತ್ತಾ ಹೋದಷ್ಟು
ಅವಳಂತರಂಗದೊಳಗಿನ ತುಮುಲಗಳ ಚರ್ಚಿಸಿದಷ್ಟೂ
ದೂರದಿಂದಲೇ ಅವಳದನ್ನು ಅರ್ಥಮಾಡಿಕೊಳ್ಳಬಹುದು
ನನಗೆ ಗೊತ್ತಿರುವ ಎಲ್ಲ ಊರುಗಳ ಹೆಸರು ಹೇಳಿಬಿಡುತ್ತೇನೆ
ಮೂಲೆಯಿಂದ ಖದೀಮ ಇರುವೆಯ ನೆರಳು
ಆವರಿಸುವುದ ಗಮನಿಸುತ್ತೇನೆ
ನಮಗೆ ದಯಪಾಲಿಸಿದ ಜೀವನವನ್ನೇ ಪ್ರೀತಿಸಬೇಕೆ?
ಜೀವನದಿ ಕೊಟ್ಟ ಪಾತ್ರವನ್ನು ಮಾತ್ರ ನಿರ್ವಹಿಸಬೇಕೆ?
ಗಾಳಿ ಬೆಳಕು ಬೆಂಕಿ ಕಾಲ …..
ದೂರದಲ್ಲೆಲ್ಲೋ ರೈಲು ಕೂಗುವ ಶಬ್ದ ….
ಒಂದಲ್ಲ ಒಂದು ದಿನ ನಾ ಅದನೇರಿಯೇ ಸಿದ್ಧ
ಇಂಗ್ಲಿಷ್ ಮೂಲ : ‘Enough’ by Suzane Buffam
ಭಾವಾನುವಾದ : ಸುಜಾತಾ ರವೀಶ್
Nice
ಭಾವಾನುವಾದದ ಕವನ ಚೆನ್ನಾಗಿ ದೆ ಸೋದರಿ
ಆಂಗ್ಲ ಮೂಲ ಕವಿತೆಯ ಭಾವಾನುವಾದ ಬಹಳ ಚೆನ್ನಾಗಿ ಮೂಡಿಬಂದಿದೆ.