ಥೀಮ್ ಬರಹ: ಮನೆ ಔಷಧಿಗಳು
1.ಉರಿಮೂತ್ರಕ್ಕೆ:– ಒಂದು ಸ್ಪೂನ್ ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಪ್ರಥಮವಾಗಿ ಜಗಿದು ನುಂಗಬೇಕು.
2. ರಕ್ತಾತಿಸಾರಕ್ಕೆ:-
(1) ಕೂವೆ ಹುಡಿ 2 ಸ್ಪೂನು(ಮರಗೆಣಸು ಪುಡಿ ಮಿಶ್ರ ನಿಷಿದ್ಧ) ಯನ್ನು ಪ್ರಾತಃಕಾಲ ಎದ್ದ ಕ್ಷಣ ಕಾಸಿ ಆರಿದ ದನದ ಹಾಲಿನಲ್ಲಿ ಬೆರೆಸಿ ಕುಡಿಯಬೇಕು.
(2) ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ ತುಪ್ಪ ಹಾಕಿ ಹುರಿದು ಸೇವನೆ.
(3) ಗುಡ್ಡೆ ಕಿಸ್ಕಾರವನ್ನು ಕೊಯಿದು ತಂದು ಅರಳಿದ ಹೂವನ್ನು ಆಯ್ದು ಅದರ ಮಧ್ಯದಲ್ಲಿರುವ ಕೇಸರ ತೆಗೆದು ಬಿಸಾಡಿ ಅಂದಂದು ಮಾಡಿದ ಮಜ್ಜಿಗೆಯಲ್ಲಿ ಕದಡಿ ದಿನಕ್ಕೆರಡು ಬಾರಿ ಕುಡಿಯುವುದು, ಅಥವಾ ತುಪ್ಪದಲ್ಲಿ ಹುರಿದು ಜಗಿದು ತಿನ್ನುವುದು.
3. ಆಮಾತಿಸಾರಕ್ಕೆ ನೆಲ್ಲಿ ಚಟ್ಟನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.ದಿನಕ್ಕೆರಡು ಬಾರಿ ಮೂರುದಿನ.
4.ಮುಟ್ಟಿನ ಹೊಟ್ಟೆನೋವಿಗೆ: ಒಂದು ಚಿಟಿಕೆ ಇಂಗನ್ನು ತುಪ್ಪದಲ್ಲಿ ಹುರಿದು ಹುಡಿಮಾಡಿ ಅಷ್ಟೇ ಬೆಲ್ಲದಲ್ಲಿ ಕಲಸಿ ತಿನ್ನುವುದು ದಿನಕ್ಕೆರಡು ಬಾರಿ.
5.ಸಣ್ಣ ಮಕ್ಕಳು ಮಾತನಾಡಲು ತಡವರಿಸುತ್ತಾ ಇದ್ದರೆ ಒಂದೆಲಗ(ತಿಮರೆ) ಒಂದಿಷ್ಟು ತಂದು ತೊಳೆದು ಕಾದಾರಿದ ಹಾಲಿನಲ್ಲಿ ಅರೆದು ಕುಡಿಸುವುದು ದಿನಕ್ಕೊಂದು ಬಾರಿ ಕೆಲವು ದಿನ. ಈ ಔಷಧಿ ನೆನಪು ಉಳಿಯದ ಮಕ್ಕಳಿಗೆ ಕೊಡುವುದು. ಈ ಔಷಧಿಯಿಂದ ಪ್ರಯೋಜನ ಹೊರತು ದೋಷವಿಲ್ಲ.
6.ಮಕ್ಕಳ ತುರಿ ಕಜ್ಜಿಗೆ:- ಹಣ್ಣಡಕೆಯ ಮೇಲಿನ ಸಿಪ್ಪೆಯನ್ನು ಗುದ್ದಿ ಅದರ ರಸ ಹಚ್ಚುವುದು ದಿನಕ್ಕೊಂದು ಬಾರಿ.
7. ಗಾಯವಾದರೆ : ವೀಳ್ಯದೆಲೆಯನ್ನೂ ಅರಸಿನ ಪುಡಿಯನ್ನೂ ಸಮಭಾಗ ಸೇರಿಸಿ ನುಣ್ಣಗೆ ಅರೆದು ಅದಕ್ಕೆ ಸ್ವಲ್ಪ ದನದ ತುಪ್ಪ ಸೇರಿಸಿ ತುಸು ಬಿಸಿಮಾಡಿ ಗಾಯಕ್ಕೆ ಹಚ್ಚುವುದು.
8.ಮಕ್ಕಳ ಹುಣ್ಣಿಗೆ : ಕುಂಕುಮಕ್ಕೆ ಕೊಬ್ಬರಿ ಎಣ್ಣೆಯನ್ನು ಸೇರಿಸಿ,ಕಾಯಿಸಿ ಹಚ್ಚುತ್ತಿರುವುದು.
9. ಹುಣ್ಣು ಬೇಗ ಮಾಯಲು : ನನ್ನಾಲಿ ಬೇರನ್ನು ಕಷಾಯಮಾಡಿ ಅದಕ್ಕೆ ಸಕ್ಕರೆ+ ಹಾಲು ಸೇರಿಸಿ ಒಂದು ವಾರ ದಿನಾ ಎರಡು ಸಲ ಕುಡಿಯುವುದು.
10. ಮಧುಮೇಹ ಪ್ರಥಮ ಸ್ಟೇಜಿನಲ್ಲಿದ್ದರೆ ಕಹಿಬೇವಿನ ಕಷಾಯವನ್ನು ದಿನಕ್ಕೆರಡು ಬಾರಿ ಆಹಾರದ ನಂತರ ಎರಡು ಚಮಚದಷ್ಟು ಕುಡಿಯುವುದು.
–ವಿಜಯಾಸುಬ್ರಹ್ಮಣ್ಯ ಕುಂಬಳೆ.
ಉಪಯುಕ್ತ ಮಾಹಿತಿ
ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.
ವಿಜಯಾ ಮೇಡಂ ಸರಳ ವಾದ ಉಪಯುಕ್ತ ವಾದ ಮನೆ ಮದ್ದು.. ಧನ್ಯವಾದಗಳು
ಸುಲಭವಾಗಿ ಉಪಯೋಗಿಸಬಲ್ಲ ಮನೆ ಮದ್ದುಗಳು ಯಾವಾಗಲೂ ಬಹಳ ಪ್ರಯೋಜನಕಾರಿ. ಧನ್ಯವಾದಗಳು ವಿಜಯಕ್ಕ.
ಅಡ್ಮಿನ್
ಹೇಮಮಾಲಾ ಹಾಗೂ ಓದುಗ ಬಳಗಕ್ಕೆ ಧನ್ಯವಾದಗಳು.