Monthly Archive: February 2024
ಒಳ್ಳೆಯ ಹಾಗೂ ತಮಾಷೆಯ ನೆನಪುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕಂದಿನ ನೆನಪುಗಳೇ ನಮ್ಮ ಜೋಳಿಗೆಯೊಳಗೆ ತುಂಬಿರುವುದು ಹೆಚ್ಚು. ಆ ಮುಗ್ಧ ಮನಸ್ಸಿನಲ್ಲಿ ನೆಲೆ ನಿಂತ ನೆನಪುಗಳು ಸದಾ ಹಸಿರು.. ಅಷ್ಟೇ ಆಪ್ತ. ಅವುಗಳನ್ನು ಮೆಲುಕು ಹಾಕುವುದೆಂದರೆ ಬೆಲ್ಲ ತಿಂದಷ್ಟು ರುಚಿ. ಹಾಗೆಯೇ ಕೆಲವೊಮ್ಮೆ ಕೆಟ್ಟ ನೆನಪುಗಳೂ ಕಾಡದೆ...
1.ಉರಿಮೂತ್ರಕ್ಕೆ:– ಒಂದು ಸ್ಪೂನ್ ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಪ್ರಥಮವಾಗಿ ಜಗಿದು ನುಂಗಬೇಕು. 2. ರಕ್ತಾತಿಸಾರಕ್ಕೆ:- (1) ಕೂವೆ ಹುಡಿ 2 ಸ್ಪೂನು(ಮರಗೆಣಸು ಪುಡಿ ಮಿಶ್ರ ನಿಷಿದ್ಧ) ಯನ್ನು ಪ್ರಾತಃಕಾಲ ಎದ್ದ ಕ್ಷಣ ಕಾಸಿ ಆರಿದ ದನದ ಹಾಲಿನಲ್ಲಿ ಬೆರೆಸಿ ಕುಡಿಯಬೇಕು.(2) ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ ತುಪ್ಪ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ರಾಮೇಶ್ವರಂ-5 ಶಿವಲಿಂಗಗಳ ದರ್ಶನ ಬದುಕಿರುವಾಗ ಒಮ್ಮೆಯಾದರೂ ಕಾಶಿ-ರಾಮೇಶ್ವರಕ್ಕೆ ಭೇಟಿ ಕೊಟ್ಟು, ರಾಮೇಶ್ವರದ ಸಮುದ್ರದ ಮರಳನ್ನು ಕಾಶಿಯಲ್ಲಿರುವ ಗಂಗಾನದಿಗೆ ಹಾಗೂ ಗಂಗಾಜಲವನ್ನು ರಾಮೇಶ್ವರದ ಸಮುದ್ರದಲ್ಲಿ ವಿಲೀನಗೊಳಿಸಿದರೆ ಜೀವನ ಪಾವನವಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಉತ್ತರದ ಬದರಿನಾಥ, ದಕ್ಷಿಣದ ರಾಮನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕನಾಥ...
ಮರಗಳ ಎಲೆಗಳ ಮರೆಕೋಗಿಲೆ ಕಾಣದು ಎಲ್ಲೂಯಾರೇ ಕೇಳಲಿ ಬಿಡಲಿಎದೆ ಆಳದಿಂದಲದರ ಕುಕಿಲು ಬಿಸಿಲಿನ ತಾಪಕೆ ಅದು ದೂರಿದೆಯೇಸಹಿಸಲಾರದೇ ಬೇಗೆ ?ನೆರಳಿನ ತಂಪ ಸವಿದು ಹೊಗಳಿದೆಯೇಪ್ರಕೃತಿ ಇತ್ತ ಸೊಗಕೆ ! ಹಕ್ಕಿಯೊರಲ ಒಡಲಲಿ ಇದೆಯೆಕರುಳ ಕತ್ತರಿಸಿ ಹಾರಿದಅಮ್ಮನ ಕಾಣುವ ಬಯಕೆ ಕೂಗುವ ಕಂಠದಿ ಕೇಳಿದೆಯೆತುತ್ತನಿತ್ತೂ ಹೊರಹಾಕಿದಸಾಕಿದ ತಾಯಿಯ ನೆನಕೆ...
ಕನ್ನಡ ಪ್ರೀತಿಯ ರಹದಾರಿಗಳು: ಮಲೆನಾಡಿನ ಕವಿ ಉಪ್ಪುಕಡಲಿನ ರವಿ ಎಂದು ಪ್ರಖ್ಯಾತರಾದ ಪ್ರೊ: ಎಸ್.ವಿ. ಪರಮೇಶ್ವರ ಭಟ್ಟರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರಿನವರು. ಕನ್ನಡದ ಪ್ರಾಚೀನ ಕಾವ್ಯ-ಪ್ರಕಾರ, ಛಂದೋ ಪ್ರಬೇಧಗಳಾದ ಸಾಂಗತ್ಯ, ತ್ರಿಪದಿ, ವಚನ, ಏಳೆಗಳನ್ನು ಹೊಸಗನ್ನಡ ಕಾವ್ಯರೂಪದಲ್ಲಿ ಪುನರುಜ್ಜೀವನಗೊಳಿಸಿದ ಪ್ರಯೋಗಶೀಲರು. ದೇಸಿಯ ಅನನ್ಯತೆಯನ್ನು ಉಳಿಸಿದ...
ಅವಳೊಬ್ಬಳೆ ಅವಳೊಬ್ಬಳೆ ಅವಳೊಬ್ಬಳೆ ಸರಯೂ….ನರ ಶ್ರೇಷ್ಠನ ನವ ನಿರ್ಮಿತ ಅರಮನೆಯ ಸುಳುಹು…ಶತಮಾನದ ಅಸಮಾನತೆ ಸಹಿಸುತ್ತಿರೋ ಕಡಲು …ಪ್ರತಿನಿಮಿಷವೂ ಕಣ್ಣೀರನೆ ಉಂಡಿರುವ ಒಡಲು… ಅವಳೊಬ್ಬಳೆ ಸರಯೂ…ಅವಳೊಬ್ಬಳೆ ಸರಯೂ… ಶ್ರೀರಾಮನ ಪ್ರತಿ ಕ್ಷಣ ಕ್ಷಣವು ಈಕೆಯ ತಟದಲ್ಲೇ..ಆ ಪಾದದ ಮೆದು ಕಮಲಕೆ ನೀರೆರೆದವಳಿವಳೇ..ಮೌನ ರಾಗದಲಿ… ನಿತ್ಯ ಹಾಡುವಳು ..ಭರತಾಗ್ರಜ ಶ್ರೀರಾಮನ...
ಕಾಸರಗೋಡಿನ ಕರಾವಳಿಯ ಗ್ರಾಮೀಣ ಪರಿಸರದಲ್ಲಿ ವಾಸಿಸುತ್ತಿರುವ ನಾನು ಈಗ ನಿವೃತ್ತ ಅಧ್ಯಾಪಕ. ನಮ್ಮ ಬಾಲ್ಯದಲ್ಲಿ ಮನೆಯ ಹತ್ತಿರದಲ್ಲಿ ಕ್ಲಿನಿಕ್ ಗಳಿದ್ದಿರಲಿಲ್ಲ. ಹಳ್ಳಿಯ ಜನರು ಸಾಮಾನ್ಯವಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸುತ್ತಲೇ ಇರಲಿಲ್ಲ. ಮನೆಯಲ್ಲಿಯೇ ಯಾವುದೋ ಸೂಕ್ತ ಸಸ್ಯೋತ್ಪನ್ನದ ತಂಬುಳಿ, ಕಷಾಯ ಮಾಡಿ ಕುಡಿಯುವುದು ಅಥವಾ ಯಾವುದೋ ಗಿಡಮೂಲಿಕೆಯ...
ನನ್ನ ನೆನಪಿನ ಕಥೆಗಳ ಗಂಟು ಬಿಚ್ಚುವಾಗಲೆಲ್ಲಾಪ್ರೀತಿಯ ಹಳೆಯ ಸ್ನೇಹಿತರ ನೆನಪಾಗುವುದಲ್ಲಾಕಳೆದ ಸಂತಸದ ಕ್ಷಣಗಳ ನೆನೆದಾಗಲೆಲ್ಲನಲ್ಮೆಯ ಮಿತ್ರರೇ ಸದಾ ನೆನಪಾಗುವರಲ್ಲ ಈಗ ಅವರೆಲ್ಲಿರುವರೋ ಹೇಗಿರುವರೋ ತಿಳಿಯದುತಮ್ಮದೇ ಲೋಕದಲಿ ವ್ಯಸ್ತ ಸಂತೃಪ್ತರಿರಬಹುದುನಟ್ಟಿರುಳ ರಾತ್ರಿಯಲಿ ಎಚ್ಚರವಾಗಿರುವಾಗೆಲ್ಲಪ್ರೀತಿಯ ಹಳೆಯ ಮಿತ್ರರ ನೆನಪಾಗುವುದಲ್ಲ ಕೆಲ ವಿಷಯಗಳೇ ಹಾಗೆˌ ಹೂಗಳ ಹಾಗೆನೆನೆದಾಗಲೆಲ್ಲಾ ಮನದ ತುಂಬಾ ಪರಿಮಳದ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಎಚ್ಚರಿಕೆಯ ಗಂಟೆ ಸದ್ದು….!! ಜುಲೈ 7, ಶನಿವಾರ…ಬೆಳಿಗ್ಗೆ ಒಂಭತ್ತೂವರೆ ಗಂಟೆಗೆ, ಹಿಂದಿನ ದಿನದ ಕ್ರೂಸ್ ಗಿಂತ ಸ್ವಲ್ಪ ದೊಡ್ಡದಾದ ಕ್ರೂಸ್ ನಲ್ಲಿ, ಸೆವಾರ್ಡ್ ಮಿನಿ ಬಂದರಿನಿಂದ ನಮ್ಮ ಜಲಪ್ರಯಾಣ ಆರಂಭವಾಯಿತು. ಸುಮಾರು ಅರ್ಧತಾಸಿನ ಪಯಣದ ಬಳಿಕ ನಾವು ಹಿಂದಿನ ದಿನ ವೀಕ್ಷಿಸಿದ ಹಿಮಪರ್ವತಕ್ಕಿಂತಲೂ ಬಹಳ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಧುರೈನಲ್ಲಿ ದೇವಾಲಯದ ದರ್ಶನ ಆದ ಮೇಲೆ ನಮ್ಮ ಚಪ್ಪಲಿ, ಮೊಬೈಲ್ ಇರಿಸಿದ್ದ ಅಂಗಡಿಗೆ ಬಂದೆವು. ಅದು ಸೀರೆಗಳ ಅಂಗಡಿ. ಮಧುರೈ ಹ್ಯಾಂಡ್ ಲೂಮ್ ಸಿಲ್ಕ್ ಅಂತ ಫಲಕ ಕಾಣಿಸಿತು. ಮಹಿಳೆಯರೇ ಜಾಸ್ತಿ ಇದ್ದ ನಮ್ಮ ತಂಡದ ಹಲವು ಮಂದಿ ಸೀರೆ ಖರೀದಿಸಲು ಆಸಕ್ತಿ...
ನಿಮ್ಮ ಅನಿಸಿಕೆಗಳು…