ಅವಳೊಬ್ಬಳೆ ಸರಯೂ
ಅವಳೊಬ್ಬಳೆ ಅವಳೊಬ್ಬಳೆ ಅವಳೊಬ್ಬಳೆ ಸರಯೂ….
ನರ ಶ್ರೇಷ್ಠನ ನವ ನಿರ್ಮಿತ ಅರಮನೆಯ ಸುಳುಹು…
ಶತಮಾನದ ಅಸಮಾನತೆ ಸಹಿಸುತ್ತಿರೋ ಕಡಲು …
ಪ್ರತಿನಿಮಿಷವೂ ಕಣ್ಣೀರನೆ ಉಂಡಿರುವ ಒಡಲು…
ಅವಳೊಬ್ಬಳೆ ಸರಯೂ…ಅವಳೊಬ್ಬಳೆ ಸರಯೂ…
ಶ್ರೀರಾಮನ ಪ್ರತಿ ಕ್ಷಣ ಕ್ಷಣವು ಈಕೆಯ ತಟದಲ್ಲೇ..
ಆ ಪಾದದ ಮೆದು ಕಮಲಕೆ ನೀರೆರೆದವಳಿವಳೇ..
ಮೌನ ರಾಗದಲಿ… ನಿತ್ಯ ಹಾಡುವಳು ..
ಭರತಾಗ್ರಜ ಶ್ರೀರಾಮನ ಸುಳಿವಿನ ಅಳಲು…
ಅವಳೊಬ್ಬಳೆ ಸರಯೂ…ಅವಳೊಬ್ಬಳೆ ಸರಯೂ…
ರಘು ಸೂರ್ಯನ ಪುನರೋದಯಕೆ ಒಂಟಿ ಸಾಕ್ಷಿಯಿವಳೇ..
ಶತಮಾನದ ಮಡು ನೋವಲು ನಗರ ಕಾಯ್ದಳಿವಳೇ..
ಅಂದು ತ್ರೇತೆಯಲಿ… ಇಂದು ಕಲಿಯುಗದಿ..
ಶ್ರೀ ರಾಮನ ಪದ ಸ್ಪರ್ಶಕೆ ನಲಿ ನಲಿದವಳು…ಅಯೋಧ್ಯೆಯ ಕಡಲು…
ಅವಳೊಬ್ಬಳೆ ಸರಯೂ…ಅವಳೊಬ್ಬಳೆ ಸರಯೂ…
-ವಿದ್ಯಾಶ್ರೀ ಅಡೂರ್, ಮುಂಡಾಜೆ
ಸರಳ ಸುಂದರ ಕವನ..ಮೇಡಂ
ಚಂದದ ಕವನ
ಸರಯೂ ನದಿಯಿಂದ ಎದ್ದು ಬಂದ ಆತ್ಮಕಥನವು, ಕವನ ರೂಪದಲ್ಲಿ ಬಹಳ ಸುಂದರವಾಗಿ ಮೂಡಿಬಂದಿದೆ.