ಗುರುವಂದನಾ..
ಅರಿವ ಹಣತೆಯ ಹಚ್ಚಿ ನಮ್ಮೆಲ್ಲ ಬದುಕಿನಲಿ ಹೆಜ್ಜೆ ಹೆಜ್ಜೆಯ ಇಡಲು ದಾರಿ ಬೇಕು… ಇರುವ ಸಾವಿರದಾರಿಯೊಳಗೆನ್ನ ಕೈಹಿಡಿದು ಗುರಿಯ ತೋರಲು ಒಬ್ಬ ಗುರುವು ಬೇಕು ತಂದೆ ತಾಯಿಯೆ ಮೊದಲ ಗುರುವೆಮ್ಮ ಬದುಕಿನಲಿ ಅರುಹೇ ಹೊಸ ವಿಷಯ ಯಾರ್ ಅವರು ಗುರುವೇ .. ಗೆಳೆಯಗೆಳತಿ, ಪತಿ ಪತ್ನಿ, ಅಣ್ತಮ್ಮರಲು...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಅರಿವ ಹಣತೆಯ ಹಚ್ಚಿ ನಮ್ಮೆಲ್ಲ ಬದುಕಿನಲಿ ಹೆಜ್ಜೆ ಹೆಜ್ಜೆಯ ಇಡಲು ದಾರಿ ಬೇಕು… ಇರುವ ಸಾವಿರದಾರಿಯೊಳಗೆನ್ನ ಕೈಹಿಡಿದು ಗುರಿಯ ತೋರಲು ಒಬ್ಬ ಗುರುವು ಬೇಕು ತಂದೆ ತಾಯಿಯೆ ಮೊದಲ ಗುರುವೆಮ್ಮ ಬದುಕಿನಲಿ ಅರುಹೇ ಹೊಸ ವಿಷಯ ಯಾರ್ ಅವರು ಗುರುವೇ .. ಗೆಳೆಯಗೆಳತಿ, ಪತಿ ಪತ್ನಿ, ಅಣ್ತಮ್ಮರಲು...
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”– ಎಂದು ಪುರಂದರದಾಸರು ಹೇಳಿದ್ದಾರೆ. ಈ ಮಾತು ಎಂದೆಂದಿಗೂ ಸಹ ಸತ್ಯ. ಜೊತೆಗೆ ಎಂದಿಗೂ ಕೂಡ ಜನಜನಿತ ಮಾತು ಇದಾಗಿದೆ. ಗುರು- ಗುರಿ ಎರಡು ಇದ್ದರೆ ನಾವು ಹಾಕಿಕೊಂಡ ಮಾರ್ಗದಲ್ಲಿ ಸುಲಲಿತವಾಗಿ ಸೇರಿ ಯಶಸ್ಸು ಪಡೆಯಬಹುದಾಗಿದೆ. ಸಂಸ್ಕೃತದಲ್ಲಿ ಎಂದರೆ “ಗು” ಎಂದರೆ ಅಂಧಕಾರ…...
ಇದ್ದರೆ ಇರಬೇಕು ನಮ್ಮ ಮೇಷ್ಟ್ರ ಹಾಗೆ ಆಕಾರದಲ್ಲಿ ವಾಮನ, ಬುದ್ಧಿಯಲ್ಲಿ ತ್ರಿವಿಕ್ರಮ. ಅವರು ಕಲಿಸಿಕೊಟ್ಟ ಅಕ್ಷರ ಈಗಲೂ ಬಾಯಲ್ಲಿ ಬರುತ್ತಿವೆ ಸರಬರ, ಹಾಕಿಕೊಟ್ಟರು ಲೆಕ್ಕ ಭದ್ರವಾಗಿ ಕುಳಿತಿದೆ ಅಕ್ಕಪಕ್ಕ. ಬಿತ್ತಿದರು ಮನದಲ್ಲಿ ವಿಜ್ಞಾನ ಬತ್ತದೇ ನಿಂತಿದೆ ಅದರ ಜ್ಞಾನ. ಬೋಧಿಸಿದರು ಚರಿತ್ರೆಯನ್ನು ಸದಾ ಮೆಲುಕು ಹಾಕುವಂತಿವೆ ಆ...
ಸಹಜವಾಗಿ ನಡೆಯುತ್ತಿದ್ದ ಪ್ರಪಂಚದ ಚಟುವಟಿಕೆಗಳೆಲ್ಲಾ ಭೀಕರ ಅಂಟುಜಾಡ್ಯ ಕೊರೋನದಿಂದಾಗಿ ಒಂದು ರೀತಿಯಲ್ಲಿ ಸ್ತಬ್ಧವಾಗಿದೆ ಎನ್ನಬಹುದು. ಆದರೂ ಕಾಲಚಕ್ರವೇನೂ ನಿಲ್ಲಲಾರದಲ್ಲವೇ? ಎಲ್ಲಾ ಮುಖ್ಯ ದಿನಗಳಂತೆ ಬಂದೇ ಬಿಟ್ಟಿದೆ; ಎಲ್ಲರಿಗೂ ಅತ್ಯಂತ ಪ್ರೀತಿಯ ದಿನ.. ಶಿಕ್ಷಕರ ದಿನ..ನಮ್ಮೆಲ್ಲಾ ಗುರುಗಳಿಗೆ ವಂದಿಸುವ ದಿನ. ಇಂದಿನ ಮಕ್ಕಳೇ ಮುಂದಿನ ಜನಾಂಗವೇನೋ ನಿಜ. ಆದರೆ...
ಇತ್ತೀಚೆಗೆ ನಮ್ಮ ಬಂಧುಗಳ ಮನೆಯಲ್ಲೊಂದು ಮದುವೆ ಸಮಾರಂಭವಿತ್ತು. ಈ ಸಮಯದಲ್ಲಿ ಮಗಳನ್ನು ಕರೆದುಕೊಂಡು ಹೋಗುವುದು ಸೂಕ್ತವಲ್ಲ ಅನಿಸಿದ್ದರಿಂದ ಎರಡು ದಿನಗಳ ಮುಂಚಿತವಾಗಿ ನನ್ನವಳನ್ನು ಬಂಧುಗಳ ಮನೆಗೆ ಬಿಟ್ಟುಬಂದು, ನಾನು ಮಗಳೊಂದಿಗೆ ಮನೆಯಲ್ಲಿಯೇ ಉಳಿದೆ. ಆ ಸಮಯದಲ್ಲಿ ನನ್ನ ದಿನಚರಿ ಪುಸ್ತಕದಲ್ಲಿ ಬರೆದ ಈ ಕವಿತೆಯ ಕುರಿತು ಹೆಚ್ಚೇನು...
ಖಾಲಿ ಕೂತ ಘಳಿಗೆಗಳಲಿ ದುಬಾರಿ ವಸ್ತುಗಳು ಅಲುಗಾಡದಂತೆ ಕಾಯುವ ಬೆಂಡಿನ ತುಂಡಿನಂತೆ ಕೆಲಸವಾದಾಕ್ಷಣ ಬಿಸುಟರೆ ತಿಪ್ಪೆರಾಶಿಯಲಿ ತುಂಬ ದೂರದಿಂದಲೂ ಕಾಣಬಹುದಾದ ಕಸದಂತೆ ಈ ಬದುಕು ಯೋಚನೆ,ಯಾತನೆಗಳಿಲ್ಲದೆಯೂ ಮೂಲೆಯೊಂದರಲಿ ಕಣ್ಣುಮಿಟುಕಿಸುತ್ತಲೇ ಸುಸ್ತಾಗುವ ದೇಹ ಖರ್ಚಾಗುವ ಬ್ಯಾಟರಿ ಕಾಫಿ, ನೀರು, ಚಹಾಗಳು ಒಂದು ಕರೆ ಒಂದೇ ಕಿರಣ ಒಂದು ಆಸೆಕಿಡಿ...
ಕನ್ನಡದ ಬಹುಮುಖ ಪ್ರತಿಭಾವಂತ ಕವಿ, ಸಾಹಿತಿ, ವಿಮರ್ಶಕ, ಚಲನಚಿತ್ರ ಕರ್ಮಿ ಡಾ. ಎಚ್ ಎಸ್ ವೆಂಕಟೇಶಮೂರ್ತಿಯವರೊಡನೆ ನಮ್ಮ ತಂದೆಯವರು ಒಂದು ಮಧುರವಾದ ಬಾಂಧವ್ಯವನ್ನು ಹೊಂದಿದ್ದರು. ತಮ್ಮ ವೃತ್ತಿಜೀವನ ಹಾಗೂ ಚಟುವಟಿಕೆಗಳ ನಡುವೆ ಬಿಡುವು ಮಾಡಿಕೊಂಡು ಮನೆಗೆ ಬಂದು ಹೋಗುತ್ತಿದ್ದರು. ಹಲವೊಮ್ಮೆ ತಮ್ಮೊಡನೆ ಉದಯೋನ್ಮುಖ ಪ್ರತಿಭಾವಂತರನ್ನು ಜತೆಗೆ ಕರೆತಂದು ನಮ್ಮ...
ವಿದ್ಯೆ ನೀಡಿದ ಗುರುಗಳಿಗೆ ವಿದ್ಯಾರ್ಥಿ ಅನಂತಕಾಲ ಶರಣಾಗಿರಬೇಕು. ಅಷ್ಟು ಮಾತ್ರವಲ್ಲ ತಾನು ವಿದ್ಯಾಭ್ಯಾಸ ಮುಗಿಸಿ ಹಿಂತಿರುಗುವಾಗ ತನ್ನ ಕೈಲಾದ ಕಾಣಿಕೆ ನೀಡಬೇಕು ಎಂಬುದು ಶಾಸ್ತ್ರ ವಿದಿತ. ಗುರುದಕ್ಷಿಣೆ ಇಲ್ಲದೆ; ಕಲಿತ ವಿದ್ಯೆ ಸಿದ್ಧಿಸಲಾರದು. ಇಂತಹ ಗುರುದಕ್ಷಿಣೆಯನ್ನು ಯಾವರೂಪದಿಂದಲೂ ನೀಡುತ್ತಿದ್ದರು. ಈ ನಿಟ್ಟಿನಲ್ಲಿ ಅರಸರು ಹಾಗೂ ಅಸುರರು, ಧನ,...
ನುಡಿಕಲಿಸಿ ನಗಿಸಿ ತಾಳ್ಮೆಯಿಂದಲಿ ತಿದ್ದಿತೀಡಿದ ಅಕ್ಕರೆಯ ಅಮ್ಮ ನೀನೆನ್ನ ಗುರುವು ಎಡರು ತೊಡರುಗಳ ದಾಟಿ ಚಿಂತನ ಮಂಥನ ಮಾಡಿ ಚಲಿಸುವ ನಡಿಗೆ ಕಲಿಸಿದ ಅಪ್ಪ ನೀನೆನ್ನ ಗುರುವು ಶಿಕ್ಷಣದ ಶಕ್ತಿಯಿಂದಲಿ ಅಕ್ಷರಗಳ ಅರ್ಥಕಲಿಸಿ ಜ್ಞಾನ ದೀವಿಗೆಯ ಜ್ಯೋತಿ ಹಚ್ಚಿ ಬುದ್ದಿ ಬೆಳಕನಿತ್ತು ವಿದ್ಯೆ ಕಲಿಸಿದವರು ನೀವೆನ್ನ ಗುರುವು...
ಕೊರೋನಾಗೆ ಹೆದರಿ ತಾಯಿಯ ಮಡಿಲಲ್ಲಿ ಬಚ್ಚಿಟ್ಟುಕೊಂಡು, ಮೈಚಳಿಬಿಟ್ಟು ಹೊರಗೆಲ್ಲೂ ಹೋಗದೆ. ಮನೆಯೊಳಗೇ ಬಂಧಿಯಾದಂತ ಅನುಭವದಲ್ಲಿರುವ ಮಕ್ಕಳಿಗೆ, ವಿದ್ಯಾಗಮ ಶಾಲೆಯೊಂದು ಮನಸೆಳೆದು ಸಂತಸ ನೀಡಿತು. ಪ್ರತಿಯೊಬ್ಬ ಶಿಕ್ಷಕರು ಕೊರೋನಾ ಬಗ್ಗೆ ಭಯವಿದ್ದರೂ, ತೋರ್ಪಡಿಸದೆ ಎಚ್ಚರಿಕೆಯಿಂದ ಮಕ್ಕಳ ಮನೆ ಮನೆ ಭೇಟಿ ಮಾಡಿ, ವಿದ್ಯಾಗಮ ಶಾಲೆಗೆ ಸಜ್ಜುಗೊಳಿಸಿದರು. ಮಕ್ಕಳಿರುವಲ್ಲೇ ಒಂದು...
ನಿಮ್ಮ ಅನಿಸಿಕೆಗಳು…