ನಮ್ಮ ಮೇಷ್ಟ್ರು…
ಇದ್ದರೆ ಇರಬೇಕು ನಮ್ಮ ಮೇಷ್ಟ್ರ ಹಾಗೆ
ಆಕಾರದಲ್ಲಿ ವಾಮನ, ಬುದ್ಧಿಯಲ್ಲಿ ತ್ರಿವಿಕ್ರಮ.
ಅವರು ಕಲಿಸಿಕೊಟ್ಟ ಅಕ್ಷರ ಈಗಲೂ ಬಾಯಲ್ಲಿ
ಬರುತ್ತಿವೆ ಸರಬರ, ಹಾಕಿಕೊಟ್ಟರು ಲೆಕ್ಕ
ಭದ್ರವಾಗಿ ಕುಳಿತಿದೆ ಅಕ್ಕಪಕ್ಕ.
ಬಿತ್ತಿದರು ಮನದಲ್ಲಿ ವಿಜ್ಞಾನ
ಬತ್ತದೇ ನಿಂತಿದೆ ಅದರ ಜ್ಞಾನ.
ಬೋಧಿಸಿದರು ಚರಿತ್ರೆಯನ್ನು
ಸದಾ ಮೆಲುಕು ಹಾಕುವಂತಿವೆ
ಆ ಇತಿಹಾಸದ ಕಥೆಗಳ ಮಾಲೆ.
ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದ್ದರು
ಆಟ, ಓಟಗಳಲ್ಲೂ ನಮ್ಮ ಮನವ.
ಈಗಲೂ ಬಿಟ್ಟಿಲ್ಲ ಅವುಗಳಲ್ಲಿ
ಭಾಗವಹಿಸುವ ಪರಿಪಾಠವ.
ಎಲ್ಲಕ್ಕೂ ಮಿಗಿಲಾಗಿ ತಿಳಿಸುತ್ತಿದ್ದರು
ನಡೆ ನುಡಿಗಳಲ್ಲಿ ವಿಧೇಯತೆಯ.
ಪರಿಚಯಿಸಿದರು ಜೀವನದ ಮೌಲ್ಯ
ಅದಕ್ಕೇ ಇಂದಿಗೂ ಸಲ್ಲಿಸುತ್ತೇನೆ
ಅವರಿಗೊಂದು ನಮನ.
ಸದಾ ಕಾಲ ನೆನೆಯುತ್ತೇನೆ
ಅವರು ಕಲಿಸಿದ ಪಾಠವನ್ನೇ
ಅಳವಡಿಸಿಕೊಂಡು ನಡೆಸಿದ್ದೇನೆ
ನನ್ನ ಇಂದಿನವರೆಗಿನ ಜೀವನ.
-ಬಿ.ಆರ್.ನಾಗರತ್ನ. ಮೈಸೂರು.
ಈ ಬಾಳೆಂಬ ಪಯಣದಲ್ಲಿ ಬೆಳಗುವ ಹಣತೆಯಂತೆ ಎಲ್ಲಾ ಗುರುಗಳು
ಅಜ್ಞಾನದ ತಿಮಿರ ಕಳೆದು, ಸುಜ್ಞಾನದ ಜ್ಯೋತಿ ಬೆಳಗುವ ಸದ್ಗುರುವಿನ ಚರಣ ಕಮಲದಲ್ಲಿ ನಾನೊಂದು ಮರಿದುಂಬಿ.
ಸುಂದರ ಗುರು ನಮನ
ಭಾವಪೂರ್ಣ ಗುರುನಮನ ತುಂಬಾ ಚೆನ್ನಾಗಿದೆ.
ಗುರುಗಳು ಕಲಿಸಿದ ವಿದ್ಯೆ, ಎಂದಿಗೂ ಮರೆಯಲಾಗದು
ಓಂ ಗುರುಭ್ಯೊ ನಮಃ
ಗುರುನಮನ
ನನ್ನ ಕವನ ಓದಿ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿದವರೆಲ್ಲರಿಗೂ ನನ್ನ ವಂದನೆಗಳು.
ಮನದಲ್ಲಿ ಜ್ಣಾನದ ಬೀಜವ ಬಿತ್ತಿ ನೀರೆರದು ಪೋಷಿಸಿದ ಗುರುನಮನ ಸುಂದರವಾಗಿ ಮೂಡಿಬಂದಿದೆ. ಅಭಿನಂದನೆಗಳು, ನಾಗರತ್ನ ನಿಮಗೆ.
ಮನದಲ್ಲಿ ಜ್ಞಾನದ ಬೀಜವ ಬಿತ್ತಿ, ನೀರೆರದು ಪೋಷಿಸಿದ ಗುರುವಂದನೆಯ ಚಂದದ ಕವಿತೆ.