ಗುರುವಂದನಾ..
ಅರಿವ ಹಣತೆಯ ಹಚ್ಚಿ ನಮ್ಮೆಲ್ಲ ಬದುಕಿನಲಿ
ಹೆಜ್ಜೆ ಹೆಜ್ಜೆಯ ಇಡಲು ದಾರಿ ಬೇಕು…
ಇರುವ ಸಾವಿರದಾರಿಯೊಳಗೆನ್ನ ಕೈಹಿಡಿದು
ಗುರಿಯ ತೋರಲು ಒಬ್ಬ ಗುರುವು ಬೇಕು
ತಂದೆ ತಾಯಿಯೆ ಮೊದಲ ಗುರುವೆಮ್ಮ ಬದುಕಿನಲಿ
ಅರುಹೇ ಹೊಸ ವಿಷಯ ಯಾರ್ ಅವರು ಗುರುವೇ ..
ಗೆಳೆಯಗೆಳತಿ, ಪತಿ ಪತ್ನಿ, ಅಣ್ತಮ್ಮರಲು
ಗುರುವೊಬ್ಬ ಕುಳಿತಿಹನು, ಕಣ್ಣು ತೆರೆಯೇ..
ನಿಜವಾದ ಗುರುವಿನಲಿ ತಾಳ್ಮೆಶಿಖರವು ‘ಮೇರು’
ಇತರರಿಗೆ ಕಲಿಸುವುದೇ ಒಲುಮೆಯಾಗಿ
ಕಲಿಯುತಿಹ ವಿದ್ಯಾರ್ಥಿ ವಿನಯದಿಂ ಕರಮುಗಿಯೇ
ಹರಸುವನು ತನ್ನ ಮೀರ್ವ ಗೆಲುಮೆಗಾಗಿ…
-ವಿದ್ಯಾ ಶ್ರೀ ಎಸ್ ಅಡೂರ್
ಚನ್ನಾಗಿದೆ
ಚೆನ್ನಾಗಿದೆ ಕವನ
ಎಲ್ಲರಲ್ಲೂ ಗುರುವನ್ನು ಕಾಣುವ ಮನೋಭಾವವಿರಬೇಕೆನ್ನುವ …ಗುರುವಿನ ಮಹೋನ್ನತೆಯನ್ನು ಎತ್ತಿ ಹಿಡಿಯುವಂತಹ ಸೊಗಸಾದ ಕವನ.