Daily Archive: October 17, 2024
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಗ ಶಂಕರ, ಸೊಸೆ ಶಾರದೆಗೆ ಬಸಮ್ಮನವರ ಈ ವರ್ತನೆ ಅಚ್ಚರಿಯನ್ನುಂಟುಮಾಡಿತು. ಕಣ್ಣುಕಣ್ಣು ಬಿಡುತ್ತಾ ಒಬ್ಬರನ್ನೊಬ್ಬರು ನೋಡಿಕೊಂಡರು. ಅವರನ್ನು ನೋಡುತ್ತಿದ್ದ ಗೌರಮ್ಮನವರು ಗಂಡಹೆಂಡತಿಯೆಂದರೆ ಹೀಗಿರಬೇಕು. ಎಲ್ಲರಿಗೂ ಉದಾಹರಣೆಯಾಗುವಂತೆ ಬಾಳಿದವರು. ಇಂದು ತಮ್ಮ ಸಂಗಾತಿಯನ್ನು ಕಳೆದುಕೊಂಡು ಹೀಗೆ ವೈರಾಗ್ಯದ ಮಾತು. ಮಿಕ್ಕವರು ಧೃತಿಗೆಟ್ಟಾರೆಂದೇ. ಏನೋ ಎಲ್ಲವೂ...
ನನ್ನದಿದು ನಾ ಬರೆದೆ ಎನುವ ಅಮಲೇರಿದರೆಪಾತಾಳದೊಳು ಬಿದ್ದೆ ನೀ ಮೇರುವಿನಿಂದನಿನದಲ್ಲ ಪದಪುಂಜ ಯಾರದೋ ಕರುಣೆ ಅದುಬರಿ ನಿಮಿತ್ತವೋ ನೀನು – ಮುದ್ದುರಾಮ ಕವಿ ಕೆ ಸಿ ಶಿವಪ್ಪನವರು ಈ ನಾಲ್ಕು ಸಾಲುಗಳಲ್ಲಿ ಬರೆಹಗಾರರ ಅಹಮಿಗೆ ಕನ್ನಡಿ ಹಿಡಿದಿದ್ದಾರೆ. ಬರೆಯುವವರಿಗೆ ಅದೇನೋ ಗರ್ವ. ಇದು ನಾನು ಬರೆದದ್ದು, ನನ್ನದು...
ತೃತೀಯ ಸ್ಕಂದಅಧ್ಯಾಯ – 1ವಿದುರ ವಿದುರ ನೀತಿಬರೀ ಕೃಷ್ಣ ಪ್ರೀತಿಯೇ? ದ್ವಾಪರದಲಿ ಮನುಜರೂಪಿಯಾಗಿಜನಿಸಿ, ಭೂಭಾರವನಿಳಿಸುವಕಾಯಕದಿದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೈದುತನ್ನ ಯಾದವ ಕುಲಸಂಹಾರಕೂ ನಾಂದಿ ಹಾಡಿದಕೃಷ್ಣಕೇವಲ ಮನುಷ್ಯರೂಪಿಯಲ್ಲನಾರಾಯಣ ಸ್ವರೂಪಎಂದರಿತು ಬಾಳಿದ ವಿದುರನ,ಹಿತ ನುಡಿಯ ಧಿಕ್ಕರಿಸಿಕುರುಕ್ಷೇತ್ರದಿಹತರಾದ ಕೌರವರ ವಿನಾಶಕೆದೃಷ್ಟಿಹೀನ, ಮತಿಹೀನಧೃತರಾಷ್ಟ್ರನ ಜಾಣ ಕಿವುಡು,ಎಚ್ಚರಿಕೆಯ ಮಾತುಗಳಸತ್ಯವನ್ನರಿತೂಪುತ್ರಮೋಹದಿಕುರುಕುಲದ ನಾಶಕೆನಾಂದಿ ಹಾಡಿದಧೃತರಾಷ್ಟ್ರನ ಬದುಕೊಂದು ದುರಂತವೆಂದರಿತಅವನನುಜ...
ಚಿಂತನ ಧಾರೆ: ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಇದ್ದ ಚಿಂತನೆ ಮತ್ತು ಪೂಜಾ ಪರಂಪರೆಯನ್ನು ವಿದ್ವಾಂಸರು ವಿಭಿನ್ನವಾದ ಮತ್ತು ಸಮಾನಾಂತರವಾದ ವೈದಿಕ, ಅವೈದಿಕ ಎಂದು ವರ್ಗೀಕರಿಸಿದರೆ ಮನುಸ್ಮೃತಿಗೆ ಬಹಳ ವ್ಯಾಪಕವಾದ ಅರ್ಥವಿವರಣೆಯನ್ನು ಮೊಟ್ಟಮೊದಲಿಗೆ ಕೊಟ್ಟ ಕಲ್ಲುಭಟ್ಟನು ವೈದಿಕ, ತಾಂತ್ರಿಕ ಎಂದು ವಿಭಾಗಿಸಿದ್ದಾನೆ. ಮೊದಲನೆಯದು ಪುರುಷ-ಕೇಂದ್ರಿತ ಸಾಮಾಜಿಕ ವ್ಯವಸ್ಥೆ ಆಧಾರಿತ,...
ನಾವೆಂದೂ ಓದದ ಪುಟಖಾಲಿ ಹಾಳೆಯ ನೋಟಗೆರೆ ಇದ್ದರೆ ಬರಹಬರಹ ಇದ್ದರೆ ಓದು ನಮ್ಮ ಮಾತು ಕಥೆಕಾವ್ಯ ಜೀವನವಾಗಿಮನ ಮಾಗಿದಷ್ಟುಅನುಭವ ಜೊತೆಪ್ರತಿ ಪುಟಕೂತುಂಬಿದ ಭಾವಜೀವ ತುಂಬುವಕನಸುಗಳ ನೆರಳುಏನಾದರೂ ಆಗಿಉಳಿಯಬಲ್ಲ ಹಾಳೆಒಂದು ಬೇರಂತೆಅದರ ಸೂಕ್ಷ್ಮತೆಮಣ್ಣೊಳಗೆ ಸಣ್ಣದಾಗಿಇಳಿವ ಉಳಿವಬದುಕು ಇಷ್ಟೇಎಂದರೂ ಇನ್ನೇನೋಇದೆ ನಾಳೆಗೆ ಚಿತ್ರ ಬೆಳಕೊಳಗೆ ಬದುಕುಬರೆದಷ್ಟು ಹಿರಿದುಖಾಲಿ ಹಾಳೆಯ ಹರಿವು...
‘ಕೆಲವಂ ಬಲ್ಲವರಿಂದ ಕಲ್ತು’ ಅನ್ನುವ ಮಾತಿನಂತೆ ಕೆಲವೊಂದು ವಿಷಯಗಳನ್ನು ನಾವು ಕೇಳಿ ತಿಳಿದಿರುತ್ತೇವೆ. ಇನ್ನು ಕೆಲವನ್ನು ಓದಿ ತಿಳಿದಿರುತ್ತೇವೆ. ನಮ್ಮ ಮನಸ್ಸಿಗೆ ಸರಿ ಅನ್ನಿಸಿದ ವಿಷಯದ ಬಗ್ಗೆ/ಸಂಶಯವಿಲ್ಲದ ವಿಷಯಗಳ ಜಾಸ್ತಿ ಕೆದಕಲು ಹೋಗುವುದಿಲ್ಲ, ಜಾಸ್ತಿ ಯೋಚನೆಯೂ ಮಾಡುವುದಿಲ್ಲ. ಆದರೆ ಸಂಶಯವಿರುವ ವಿಷಯಗಳಾದರೆ ಆ ವಿಷಯದ ಬಗ್ಗೆ ಇನ್ನೂ...
ಅಜ್ಜೀ ಅಜ್ಜೀ ಎಲ್ಲಿಗೆ ಹೋಗ್ತಾ ಇದ್ದೀಯಾ?ಬೆಳಗಾಗೆದ್ದು ನಾನು ಎಲ್ಲಿಗೆ ಹೋಗ್ತೀನಿ ಹೇಳು, ಯೋಗ ಕ್ಲಾಸಿಗೆ ಅಲ್ವೇನೋ ಪುಟ್ಟಾ, ನೀನೂ ಬರ‍್ತೀಯಾ? ಬರ‍್ತೀನಿ ಅಜ್ಜಿ, ಹೇಗೂ, ಇವತ್ತು ಗಣಪತಿ ಮೆರವಣಿಗೆ ಅಂತ ಶಾಲೆಗೆ ರಜಾ ಕೊಟ್ಟಿದ್ದಾರೆ. ನನಗೊಂದು ಯೋಗ ಮ್ಯಾಟ್ ಕೊಡ್ತೀಯಾ?ಆಯ್ತು ಪುಟ್ಟಾ, ಬಾ ಯೋಗಕೇಂದ್ರಕ್ಕೆ ಹೋಗೋಣ.ಅಜ್ಜೀ, ನಿಮ್ಮ...
ನಿಮ್ಮ ಅನಿಸಿಕೆಗಳು…