ಕಾವ್ಯ ಭಾಗವತ :ವಿದುರ
ತೃತೀಯ ಸ್ಕಂದ
ಅಧ್ಯಾಯ – 1
ವಿದುರ
ವಿದುರ ನೀತಿ
ಬರೀ ಕೃಷ್ಣ ಪ್ರೀತಿಯೇ?
ದ್ವಾಪರದಲಿ ಮನುಜರೂಪಿಯಾಗಿ
ಜನಿಸಿ, ಭೂಭಾರವನಿಳಿಸುವ
ಕಾಯಕದಿ
ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೈದು
ತನ್ನ ಯಾದವ ಕುಲ
ಸಂಹಾರಕೂ ನಾಂದಿ ಹಾಡಿದ
ಕೃಷ್ಣ
ಕೇವಲ ಮನುಷ್ಯರೂಪಿಯಲ್ಲ
ನಾರಾಯಣ ಸ್ವರೂಪ
ಎಂದರಿತು ಬಾಳಿದ ವಿದುರನ,
ಹಿತ ನುಡಿಯ ಧಿಕ್ಕರಿಸಿ
ಕುರುಕ್ಷೇತ್ರದಿ
ಹತರಾದ ಕೌರವರ ವಿನಾಶಕೆ
ದೃಷ್ಟಿಹೀನ, ಮತಿಹೀನ
ಧೃತರಾಷ್ಟ್ರನ ಜಾಣ ಕಿವುಡು,
ಎಚ್ಚರಿಕೆಯ ಮಾತುಗಳ
ಸತ್ಯವನ್ನರಿತೂ
ಪುತ್ರಮೋಹದಿ
ಕುರುಕುಲದ ನಾಶಕೆ
ನಾಂದಿ ಹಾಡಿದ
ಧೃತರಾಷ್ಟ್ರನ ಬದುಕೊಂದು ದುರಂತ
ವೆಂದರಿತ
ಅವನನುಜ ವಿದುರನ
ಬದುಕು, ದಾಸಿ ಪುತ್ರನ ಬದುಕು
ಕೃಷ್ಣ ಪ್ರೀತಿಯ ಅರಿವಿಂದ
ಧನ್ಯ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41115
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತದ ಕಾವ್ಯಾನುಸಂಧಾನದಲ್ಲಿ..ದೃತರಾಷ್ಟ್ರ ಹಾಗೂ ವಿದುರನ ಪಾತ್ರ ದ ವಿಶ್ಲೇಷಣೆ.. ಕಾವ್ಯದ ಮುಖೇನ ಪಡಿಮೂಡಿಸಿರುವುದು..ಚಿಂತನಾ ಪೂರ್ಣ ವಾಗಿದೆ..ಸಾರ್
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಸರಳವಾಗಿ, ಚೆನ್ನಾಗಿ ಅರ್ಥವಾಗುತ್ತದೆ.
ವಂದನೆಗಳು.
ಅನುಕರಣೀಯ ವಿಧುರನ ಘನವ್ಯಕ್ತಿತ್ವದ ಚಿತ್ರಣ ಸುಂದರವಾಗಿ ಮೂಡಿ ಬಂದಿದೆ.
ವಂದನೆಗಳು.
ಪ್ರಕಟಿಸಿದ “ಸುರಹೊನ್ನೆ”ಗೆ ಧನ್ಯವಾದಗಳು.
ಮಹಾಭಾರತದಲ್ಲಿಯ ಸರಳ, ಸಜ್ಜನ, ವಿದುರನ ಪಾತ್ರವನ್ನು ಸೂಕ್ಷ್ಮವಾಗಿ, ಯಥಾವತ್ತಾಗಿ ಕಾವ್ಯ ಭಾಗವತ ಸರಣಿಯಲ್ಲಿ ಚಿತ್ರಿಸಲಾಗಿದೆ…ಧನ್ಯವಾದಗಳು ಸರ್.
ಪ್ರತಿಕ್ರಿಯೆಗಾಗಿ ಧನ್ಯವಾದಗಳು
“ಮಹಾರಾಜ” ಆದ ಧೃತರಾಷ್ಟ್ರ ಕೃಷ್ಣನ ಮಹಿಮೆಯನ್ನು ಭಾವಿಸದೆ ತನ್ನ ವಂಶಘಾತಕನಾದ, “ದಾಸಿಯ ಮಗ” ಆದ ವಿದುರನಾದರೋ ರಾಜ್ಯ, ವಂಶವನ್ನು ಉಳಿಸಲು ವಿಫಲನಾದ, ಕೃಷ್ಣನ ಪರದೈವತ್ವವನ್ನು ಭಾವಿಸಿ ತನ್ನ ಬದುಕನ್ನು ಸಾರ್ಥಕ ಪಡಿಸಿಕೊಂಡ ಎನ್ನುವುದು ಚೆನ್ನಾಗಿದೆ.