ಖಾಲಿ ಹಾಳೆ
ನಾವೆಂದೂ ಓದದ ಪುಟ
ಖಾಲಿ ಹಾಳೆಯ ನೋಟ
ಗೆರೆ ಇದ್ದರೆ ಬರಹ
ಬರಹ ಇದ್ದರೆ ಓದು
ನಮ್ಮ ಮಾತು ಕಥೆ
ಕಾವ್ಯ ಜೀವನವಾಗಿ
ಮನ ಮಾಗಿದಷ್ಟು
ಅನುಭವ ಜೊತೆ
ಪ್ರತಿ ಪುಟಕೂ
ತುಂಬಿದ ಭಾವ
ಜೀವ ತುಂಬುವ
ಕನಸುಗಳ ನೆರಳು
ಏನಾದರೂ ಆಗಿ
ಉಳಿಯಬಲ್ಲ ಹಾಳೆ
ಒಂದು ಬೇರಂತೆ
ಅದರ ಸೂಕ್ಷ್ಮತೆ
ಮಣ್ಣೊಳಗೆ ಸಣ್ಣದಾಗಿ
ಇಳಿವ ಉಳಿವ
ಬದುಕು ಇಷ್ಟೇ
ಎಂದರೂ ಇನ್ನೇನೋ
ಇದೆ ನಾಳೆಗೆ ಚಿತ್ರ
ಬೆಳಕೊಳಗೆ ಬದುಕು
ಬರೆದಷ್ಟು ಹಿರಿದು
ಖಾಲಿ ಹಾಳೆಯ ಹರಿವು
-ನಾಗರಾಜ ಬಿ.ನಾಯ್ಕ, ಕುಮಟಾ.
ಕವನ ಅರ್ಥಪೂರ್ಣ ವಾಗಿದೆ..ನೋಡಲು ಸರಳ ಚಿಂತನೆ ಬಹಳ..ಸಾರ್
ಧನ್ಯವಾದಗಳು ತಮ್ಮ ಓದಿಗೆ
ಸೊಗಸಾಗಿದೆ ಕವನ
ಖಾಲಿ ಹಾಳೆಯ ಹರಿವಿನ ಸೊಗಸಾದ ಚಿತ್ರಣ.
ಖಾಲಿ ಹಾಳೆಯ ಭಾವನಾತ್ಮಕ ಚಿಂತನೆಯು ಕವನದಲ್ಲಿ ದಟ್ಟವಾಗಿ ಪಡಿಮೂಡಿದೆ…ಧನ್ಯವಾದಗಳು.