Monthly Archive: October 2022
ಹಜಾರದಲ್ಲಿ ಹಾಕಿದ್ದ ಗಡಿಯಾರ ಮೂರು ಹೊಡೆದ ಕೂಡಲೇ, ಉಂಡು 20 ನಿಮಿಷಗಳಷ್ಟೇ ವಿಶ್ರಾಂತಿಗಾಗಿ ಅಲಾರಾಂ ಇಟ್ಟುಕೊಂಡು ಮಲಗಿದ್ದ 80 ವರ್ಷಗಳ ಭಾರತಮ್ಮನವರು ಧಡ್ ಎಂದು ಎದ್ದು ಕುಳಿತು, ತಂಗಿ ಗೀತಳನ್ನು ಕೇಳಿದರು –‘ನಾನು 2.50 ಕ್ಕೆ ಮೊಬೈಲ್ಲಿನಲ್ಲಿ ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಆಗಲೇ ಗಂಟೆ ಮೂರು ಹೊಡೆಯಿತು,...
ಬಾ ದೀಪಾವಳಿಯೇ….ಸಾಲು ದೀಪಗಳ ಶಾಂತ ಬೆಳಕಿನಲಿನಕ್ಷತ್ರಗಳ ತೋರಣ ಕಟ್ಟುಆಕಾಶದೆತ್ತರಕೇರಿ ನಿಂತಜಗದಾಸೆಗಳಿಗೆ ಏಣಿಯಾಗುಮಿಣುಕುವ ಒಣಗಣ್ಣುಗಳಿಗೆಭರವಸೆಯ ಕಿರಣಗಳ ಬೀರು ಓ ದೀಪಾವಳಿಯೇ……ತಲೆಬೇನೆಗಳ ಸುಟ್ಟುಬಿಡುರೋಗರುಜೆಗಳ ಬೂದಿಯಾಗಿಸುಕಳ್ಳಮನಸುಗಳ ಸುಳ್ಳು ಯೋಚನೆಗಳನುಕರಕಲಾಗಿಸು ಹೂಬತ್ತಿಯೊಸಗೆಯಾಗುವಿಷ್ಣುಚಕ್ರವ ಬೀಸಿಕೆಡುಕಿನ ಸರಮಾಲೆಗಳ ಕಡಿತಗೊಳಿಸುಮನೆಮನದೊಳಗೆ ತುಂಬಿನಿಂತ ಕಹಿಗಳಭೂಚಕ್ರದಲಿ ಹೊಸಕಿಹಾಕು ಬಾ ದೀಪಾವಳಿಯೇ….. ಬಾಬದುಕಿನ ನಿಂತ ನೀರಿಗೆ ಚಲನೆಯಾಗುಕನಸುಗಳ ಕಡಲಿಗೆ ಹೂಮಳೆಯಾಗುಕೋಗಿಲೆಗಳ ದನಿಗೆ,...
ಈ “ದೀಪಾವಳಿ” ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಸಂಭ್ರಮ, ಸಡಗರ ಮನೆ- ಮನ ತುಂಬುತ್ತದೆ. ಒಂದು ಕಡೆ ದೀಪಗಳ ಸಾಲು ಸಾಲು….. ಮತ್ತೊಂದೆಡೆ ಭಾರಿ ಶಬ್ದಗಳೊಂದಿಗೆಪಟಾಕಿಗಳ ಕಾರುಬಾರು…. ಇವುಗಳ ಜೊತೆಗೆ ಭಕ್ತಿ- ಭಾವದ ಹಬ್ಬದ ಆಚರಣೆಗೆ ತಯಾರಾಗುವ ದೊಡ್ಡವರು….. ಹೊಸ ಹೊಸ ಬಟ್ಟೆಗಳೊಂದಿಗೆ, ಪಟಾಕಿಗಳ ಕನಸು ಕಾಣುವ...
ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ತ್ರಿವೇಣಿಯವರ ಜನ್ಮದಿನ ಅಂಗವಾಗಿ, ಲೇಖಿಕಾ ಸಾಹಿತ್ಯ ವೇದಿಕೆ ಬೆಂಗಳೂರು ಮತ್ತು ತ್ರಿವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ (ರಿ) ಮೈಸೂರು ಇವರು ರಾಜ್ಯಮಟ್ಟದ ಮನೋವೈಜ್ಞಾನಿಕ ಕಥಾಸ್ಪರ್ಧೆಯನ್ನು ಆಯೋಜಿಸಿದ್ದರು. ಆಲ್ಲಿ ಪ್ರಥಮ ಬಹುಮಾನ ಪಡೆದ ಕಥೆ ಶ್ರೀಮತಿ ಬಿ.ಆರ್.ನಾಗರತ್ನ ಅವರು ಬರೆದ ‘ಮೂಕಶಂಕೆ’ ಎಂಬುದು ನಮಗೆ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಬಯೋ ಕೆಮಿಸ್ಟ್ರಿಯಲ್ಲಿ 1939ರಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆದ ಪ್ರಪ್ರಥಮ ಭಾರತೀಯ ಮಹಿಳೆ ಕಮಲ ಸೋಹನಿ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪ್ರಪ್ರಥಮ ಸಂಶೋಧನಾ ವಿದ್ಯಾರ್ಥಿನಿಯಾಗಿ ಆಯ್ಕೆಯಾದದ್ದು ಇವರ ಹೆಗ್ಗಳಿಕೆ. ಭಾರತೀಯ ಬಡಜನರ ಆಹಾರವಾದ ಬೇಳೆ, ಅಕ್ಕಿ ಮತ್ತಿತರ ಆಹಾರಾಂಶಗಳ ಪ್ರಮಾಣ...
––ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಈ ಅಂತರದಲ್ಲಿ ರಾಮಣ್ಣನವರ ಮಗ ಮಧು ಭಟ್ಟರ ಮನೆ ಅಂಗಡಿ ಎಲ್ಲದ್ದಕ್ಕೂ ಬೆಲೆ ಕಟ್ಟಿಸಿ ತಾನೇ ಕೊಡುಕೊಳ್ಳಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದನು. ಮಗಳ ಮನೆಯನ್ನು ಬಿಟ್ಟು ಹೋಗಲಾರದ ಅನಿವಾರ್ಯತೆ, ಅಗತ್ಯತೆ, ಆವಶ್ಯಕತೆಗಳನ್ನರಿತ ಲಕ್ಷ್ಮಿ ಭಟ್ಟರಿಗೆ ತಿಳಿಯಹೇಳಿ ಅವನ್ನು ಮಾರಲು ಒಪ್ಪಿಸಿದಳು. ನಿರ್ವಾಹವಿಲ್ಲದೆ ಭಟ್ಟರು ಅವುಗಳನ್ನು...
ಚಟ ಪಟ, ಢಾಂ ಢೂಂ,ಡಸ್ ಪುಸ್ ಬಾಲಂಗೋಚಿಯ , ಸರ್ ಪುರ್ ಲಕ್ಷಿ ಪಟಾಕಿಯ, ಬೆಂಕಿಯ ಹೂಗಳ ಕುಂಡದ, ವಿಷ್ಣು ಚಕ್ರವ, ಸುರು ಸುರು ಬತ್ತಿಯ, ಕಿವಿಗಡಚಿಕ್ಕುವ ಪಟಾಕಿಗಳ ಸದ್ದಿನ ದೀಪಾವಳಿ ಇನ್ನೇನು ಬಂದೇ ಬಿಟ್ಟಿತು. ದಸರ ಹಬ್ಬದ ಸಡಗರ ಮರೆಯುವ ಮೊದಲೇ ದೀಪಾವಳಿಯ ಸಡಗರಕೆ ಎಲ್ಲರ...
ಅದೊಂದು ಹಳೆಯ ಕುರ್ಚಿ, ನನ್ನ ದೃಷ್ಟಿಯಲ್ಲಿ ಆ ಕುರ್ಚಿ ಅದ್ಭುತವೇ ಸರಿ. ನಾನು ನಿತ್ಯ ಆ ಮಾರ್ವಾಡಿ ಗಲ್ಲಿಯಿಂದ ಹೋಗಿ ಬರುವಾಗ ಕರಿಕಲ್ಲಿನ ಮನೆಯಂಗಳದಲ್ಲಿ ಆ ಕುರ್ಚಿ ಕಾಣುತಿತ್ತು. ಯಾಕೋ ಏನೋ ಆ ಕುರ್ಚಿಯ ಬಗ್ಗೆ ನನಗೆ ಕುತೂಹಲ ಮೂಡಿ ಅದರ ಬಗ್ಗೆ ಯೋಚನೆ ಶುರುವಾಗುತಿತ್ತು. ಆ ಕುರ್ಚಿ ಯಾವಾಗಲೂ ಖಾಲಿಯಾಗಿರದೆ ಅದರ ಮೇಲೊಬ್ಬ ವೃದ್ಧ ...
ಹಲವು ವಿಶೇಷತೆಗಳ ಸುತ್ತ… ಅದಾಗಲೇ ಸಂಜೆ ಗಂಟೆ ಆರು…ನಸುಗತ್ತಲು ಆವರಿಸುತ್ತಿದ್ದಂತೆಯೇ ಮಹಾನಗರದ ನಿಜ ವೈಭವ ಕಣ್ಣಮುಂದೆ ಧುತ್ತೆಂದು ಎದ್ದು ನಿಂತಿತು! ನಡೆದಾಡಲು ಜಾಗವಿಲ್ಲದಷ್ಟು ಜನಜಂಗುಳಿ! ಕಣ್ಣು ಕೋರೈಸುವ ಬಣ್ಣ ಬಣ್ಣದ ಬೆಳಕಿನಲ್ಲಿ ಇಡೀ ಮಹಾನಗರವೇ ಮಿಂದೆದ್ದಿದೆ… ಪ್ರತಿಯೊಂದು ಬಹುಮಹಡಿ ಕಟ್ಟಡಗಳು ಪೂರ್ತಿ ಝಗಝಗಿಸುವ ವಿವಿಧ ರೀತಿಯ ದೀಪಾಲಂಕಾರಗಳಿಂದ...
ಮುಂಜಾನೆಯ ವಾಕಿಂಗಿಗೆಂದು ಗೇಟು ದಾಟಿದರೆ ಇಂಥದೇ, ಪಾರ್ಕ್, ಮೈದಾನ, ರಸ್ತೆ ಎಂದೇನೂ ಇಲ್ಲ. ಮುಖ್ಯ ರಸ್ತೆ, ಅಡ್ಡರಸ್ತೆ, ಅಡ್ಡಾದಿಡ್ಡಿ ರಸ್ತೆ, ಅಡ್ಡಾಡ್ಡ ರಸ್ತೆ, ಕಿರು ರಸ್ತೆ, ಕಳ್ಳರು ಓಡಿ ತಪ್ಪಿಸಿಕೊಳ್ಳುವ ತಿರುವು ಮುರುವಿನ ಹಾದಿ, ಓಣಿ ಓಣಿ ಹಾದು, ಗಲ್ಲಿ ಗಲ್ಲಿ ಬಿದ್ದು, ವಠಾರದ ರಸ್ತೆ, ಕೊಳಚೆ...
ನಿಮ್ಮ ಅನಿಸಿಕೆಗಳು…