ನದಿಯ ಬೇಗುದಿ
ಭಾವದ ಭಾರ ಹೊತ್ತ ಕಾರ್ಮುಗಿಲು
ಪಳ್ ಪಳಾರೆಂದು ಸಿಡಿಮಿಡಿಯುತ್ತಾ
ಇನ್ನು ಹೊರಲಾರೆನೆಂದು ಗುಡುಗುಡಿಸುತ್ತಾ
ಒಮ್ಮೆಲೇ ಸುರಿಸಿತ್ತು ಧೋ..ಧೋ..ಮಳೆ
ಭಾವದ ಬರ ಹೊತ್ತ ಇಳೆ
ಹನಿ ನೀರಿಗಾಗಿ ಪರಿತಪಿಸುತ್ತಾ
ಬಿಡುಸುಯ್ವ ಬೇಗೆಯಲಿ ಬೇಯುತ್ತಾ
ಕಾಯುತ್ತಿತ್ತು ತೊಳೆದುಕೊಳ್ಳಲು ತನ್ನ ಕೊಳೆ.
ಒಮ್ಮೆಲೇ ಸುರಿದ ಕುಂಭದ್ರೋಣ ಮಳೆಗೆ
ಇಳೆ ಕೊಚ್ಚಿ,….ಕೋಡಿ ಕವಲುಗಳೊಡೆದು
ಕವಲುಗಳೆಲ್ಲ ರೌದ್ರತಾಂಡವವಾಡಿದಾಗ
ಬಯ್ದುಕೊಂಡವರೆಷ್ಟೋ ಈಮಳೆಗೆ…ಈ ಇಳೆಗೆ.
ಮಳೆ ಸುರಿಸಿದ ಮೋಡವನು ಬಯ್ದವರೆ ಇಲ್ಲ
ಮುಗಿಲು ಭಾರವಾದ ಬಗೆಯ ಹುಡುಕಲೇ ಇಲ್ಲ
ತುಂಬಿ ಹರಿದ ನದಿಗಳ ಬಯ್ದವರೆ ಎಲ್ಲಾ
ನದಿಯ ಮನದ ಬೇಗುದಿಯ ಆ ದೇವರೇ ಬಲ್ಲ..
-ವಿದ್ಯಾ ಶ್ರೀ. ಎಸ್. ಅಡೂರ್
ಅರ್ಥಗರ್ಭಿತ ಕವನ ಮೇಡಂ
Thank you
Tumba chennagide
Nice
ಪ್ರಕೃತಿಯಂತೆಯೇ ಮನದ ಬೇಗುದಿಯೂ. ಚೆನ್ನಾಗಿದೆ ಕವನ
ಥ್ಯಾಂಕ್ ಯು.ನಿಜವಾಗಿಯೂ ಹೇಳಬೇಕೆಂದರೆ ಇಲ್ಲಿ ಮೋಡವನು ಗಂಡೆಂದೂ, ಭೂಮಿ ಮತ್ತು ನದಿಯನ್ನು ಹೆಣ್ಣು ಎಂದೂ ಭಾವಿಸಿ ಬರೆದಿದ್ದೇನೆ. ಎಲ್ಲಾ ದೂರು,ಆರೋಪ ಹೆಣ್ಣಿಗೆ ಮಾತ್ರ ಗಂಡನ್ನು ಯಾರೂ ಏನೂ ಅನ್ನುವುದೇ ಇಲ್ಲ ಎಂಬುದು ಈ ಕವನದ ಸಾರ.
ನದಿಯ ಬೆಗುದಿ ಕವನ ತುಂಬಾ ಅರ್ಥಪೂರ್ಣವಾಗಿತ್ತು. ಕವಯತ್ರಿ ಅವರಿಗೆ ಧನ್ಯವಾದಗಳು
Super instant samayochita kavana, kavi ,Havana lekhakividyashri adoor
ಅರ್ಥಪೂರ್ಣ ಕವನ ಇಷ್ಟವಾಯ್ತು.
.ಭಾವ ಮತ್ತು ಭಾಷೆಯ ಹದ ಚೆನ್ನಾಗಿದೆ. ಅಭಿನಂದನೆಗಳು ವಿದ್ಯಾಶ್ರೀ ಅವರಿಗೆ.