Monthly Archive: October 2018

4

ಸಿಂಧೂ-ಜಂಸ್ಕರ್ ಸಂಗಮ

Share Button

ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುವ ಹಿಮವಿಲ್ಲದ ಒಣಬೆಟ್ಟಗಳು ಅಥವಾ ಹಿಮದ ಚಾದರ ಹೊದ್ದ ಬೆಟ್ಟಗಳು, ಇವುಗಳ ಮಧ್ಯೆ ಹೆಬ್ಬಾವಿನಂತೆ ಬಳಸಿ ಹಾದುಹೋಗುತ್ತಿರುವ ರಸ್ತೆಯ ಇಕ್ಕೆಲದಲ್ಲಿ ಆಗಾಗ  ಕಾಣಿಸುವ ಬೌದ್ಧರ ಸ್ತೂಪಗಳು,  ಅಪರೂಪವಾಗಿ ಕಂಗೊಳಿಸುವ  ಹಸಿರು ಹೊಲದಲ್ಲಿ ಅರಳಿದ ಹಳದಿ ಸಾಸಿವೆ ಹೂಗಳು, ಬಾರ್ಲಿಯ ತೆನೆಗಳು…ಹೀಗೆ  ಪ್ರತಿ ನೋಟವನ್ನು...

0

ಬದಲು

Share Button

ಪಟಾಕಿ, ಮತಾಪುಗಳ ಗುಂಪಲ್ಲಿ ಹೂಕುಂಡಗಳ ನೋಡಿದ್ದೀರಲ್ಲ? ಹಚ್ಚಿದರೆ ಎರಡಾಳು ಎತ್ತರಕ್ಕೆ ಕೆಳಗಿನಿಂದ ಮೇಲೆ ಬೆಳಕಿನ ಮಳೆ ಸುರಿದು- ಕರಗುತ್ತದೆ . ಉರಿವ ಹೂಕುಂಡಗಳ ಕಣ್ಣಲ್ಲಿ ಸದಾ ಇರಿಸಿದಂಥ ಆ ಹುಡುಗ ಎಷ್ಟು ಹೊತ್ತಿಗೂ ಬಿಳಿಬಿಳಿಯ ಪುಟ್ಟ ಮೊಲವನ್ನು ಅಂಗಿ ಜೇಬಲ್ಲಿ ಇರಿಸಿಯೇ ಇದ್ದ ನಡೆಯುವಾಗ ನಿಲ್ಲುವಾಗ ಮಾತಾಡು -ವಾಗಲೂ ಕೈಯೊಂದನ್ನು ಮೊಲದ ಮೊಲದ ಮೇಲೇ ಇರಿಸಿರುತ್ತಿದ್ದ ಅದರ ಗುಲಗಂಜಿ ಕಣ್ಣುಗಳ ನಾನೂ ಕಂಡವನೇ . ತೀರ ಮೊನ್ನೆ ಅವನು ಮತ್ತೆ ಸಿಕ್ಕಾಗ ಮೊಲ ಇರಲಿಲ್ಲ- ಬದಲಿಗೆ ಸ್ಯಾಟಿನ್ ನಲ್ಲಿ ಮಾಡಿದ ಗೊಂಬೆ- ಜೂಲು ಹರಿದು ಬಂದ ಮೈ, ಕಿತ್ತು ಹೋದ ಕಣ್ಣು . ಅವನ ಕಣ್ಣಲ್ಲಿ ಬೆಳಗಿದ್ದ ಹೂ ಕುಂಡಗಳು ಎಲ್ಲಿ ಹೋದವು.. . -ಡಾ.ಗೋವಿಂದ ಹೆಗಡೆ +11

1

ಶವಸ೦ಸ್ಕಾರಕ್ಕೊಂದು ಪೆಟ್ಟಿಗೆ

Share Button

ಮೇಲ್ನೋಟಕ್ಕೆ  ಡ್ರೈಯರ್ ನಂತೆ  ಕಾಣುವ ಈ  ಸಾಧನ  ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ  ಶವಸ೦ಸ್ಕಾರಕ್ಕೆ ಬಳಸುವ ‘ಚಿತಾಗಾರ’ ಎನ್ನಬಹುದು . ವಿದ್ಯುತ್  ಚಿತಾಗಾರದ ಮಾದರಿಯಂತಿರುವ ಇದು  ಸ್ವಂತ  ಭೂಮಿಯಲ್ಲಿ  ಶವ ಸಂಸ್ಕಾರ ಮಾಡುವ ಗ್ರಾಮೀಣ ಪ್ರದೇಶದ  ಜನರಿಗೆ  ಬಹಳ ಅನುಕೂಲಕರವಾಗಿದೆ . ಸಾಮಾನ್ಯ  ಏಳರಿಂದ  ಒಂಭತ್ತು   ಅಡಿಗಳಷ್ಟು  ಉದ್ದದ ಕಬ್ಬಿಣದ  ಎರಡು  ಚಪ್ಪಟೆಯಾದ  ಸರಳುಗಳು ,...

1

ಕೇರಳದ ಕಥಕ್ಕಳಿ…!

Share Button

ತುಂಬು ವೈವಿಧ್ಯಮಯ ರಂಗಿನಾಲಂಕಾರ ಸಾಂಪ್ರದಾಯಿಕ ನೃತ್ಯ ಕಥಕ್ಕಳಿ ಸಾಕಾರ ಕೇರಳದ ಜನತೆಯಲಿ ಹಾಸುಹೊಕ್ಕಿರೆ ಸಾರ ನಟನೆಯ ಈ ನೋಟ ನಯನ ಮನೋಹರ ಚೆಂಡೆ,ತಾಳ ಲಯಬದ್ಧ ಹಾಡು ಚಂದ ಅಕ್ಷಿ,ಆಂಗಿಕಾಭಿನಯ ನೋಡಲಾನಂದ ಪೌರಾಣಿಕಾ ನೆಲೆಯ ಕಥನ ಕಥಕ್ಕಳಿಯು ಕರಾವಳಿ ಕೇರಳದ ಜಾನಪದ ಕಲೆಯು ದಿನ ದಿನದ ದುಡಿತಗಳಿಗೆ ಬೇಕು...

4

ಕಾಗದ ಬಂದಿದೆಯೇ …

Share Button

ಸಂಘಜೀವಿಯಾದ ಮಾನವನು ಮಾಹಿತಿಯನ್ನು ಇನ್ನೊಬ್ಬರಿಗೆ ರವಾನಿಸುವುದಕ್ಕಾಗಿ ಮನುಷ್ಯನು ಕಂಡುಕೊಂಡ ಮಾಧ್ಯಮಗಳು ಹಲವಾರು. ಶಿಲಾಯುಗದ ರೇಖಾಚಿತ್ರಗಳು, ಸಂಜ್ಞೆಗಳಿಂದ ಆರಂಭವಾದ ಸಂವಹನವು ಭಾಷೆಯ ಉಗಮವಾದ ಮೇಲೆ  ಸಂಕೇತ ಭಾಷೆ, ಮೌಖಿಕ ಭಾಷೆ, ತಮಟೆ ಬಡಿದು ಡಂಗುರ ಸಾರಿಸುವುದು, ದೂತರ ಮೂಲಕ ಸಂದೇಶ ರವಾನೆ,   ವಿವಿಧ ಪ್ರಕಾರಗಳ  ಓಲೆಗಳು, ಪತ್ರಗಳ ಮೂಲಕ...

4

ನೊಂದವರ ನಡುವೆ..

Share Button

           ಹೌದು, ನಮ್ಮ ದಕ್ಷಿಣಕನ್ನಡ ಜಿಲ್ಲೆಯ ನೆರೆ ಜಿಲ್ಲೆಯೇ ನಮ್ಮೆಲ್ಲರ ಹೆಮ್ಮೆಯ ಕೊಡಗು. ಸವಿ ಕಿತ್ತಳೆಯ ನಾಡು,ದೇಶದ ಹೆಮ್ಮೆಯ ಯೋಧರ ಬೀಡು. ಕೊಡಗಿನ ಕಾಫಿಯ ಘಮಲು ದೇಶ,ಪರದೇಶಗಳಲ್ಲೆಲ್ಲಾ ಹರಡಿ ಜನಮನ ಗೆದ್ದಿರುವುದು ಹಳೆ ಕತೆ! ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿ ಇರುವುದೂ ಅಲ್ಲದೆ ತನ್ನದೇ ಆದ ಭಾಷೆ,ಆಹಾರ ಸಂಸ್ಕೃತಿಯಿರುವ ಸಂಪದ್ಭರಿತ ...

0

ಹೆಣ್ಣಿಗಿಲ್ಲವೆ ಆಯ್ಕೆಯ ಸಾಮರ್ಥ್ಯ ?

Share Button

ಆಯ್ಕೆಯ ಮಾತು ಬಂದಾಗ ಹೆಣ್ಣು ಇನ್ನೊಬ್ಬರ ನಿರ್ದೇಶನದ ಪರಿಧಿಯಲ್ಲಿಯೇ ಉಳಿದು ಬಿಡುತ್ತಾಳೆ. ಅವಳ ಆಯ್ಕೆಯ ಬಗ್ಗೆ ಸಮಾಜ ಯಾವತ್ತೂ ಅವಿಶ್ವಾಸವನ್ನೇ ತೋರುತ್ತ ಬಂದಿದೆ. ‘ನಿನಗೇನೂ ತಿಳಿಯುವುದಿಲ್ಲ’ ಎಂಬ ಧೋರಣೆಯನ್ನು ಹೊಂದಿ ಆಕೆಯ ವೈಯಕ್ತಿಕ ಜೀವನದಲ್ಲೂ ಮೂಗು ತೂರಿಸಿ ಆಕೆಯ ಆಯ್ಕೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಹೆಣ್ಣು ಅಬಲೆ, ಆಕೆಯ...

ಹಿರಿಯ ನಾಗರಿಕರ ಪರಿಧಿಯಲ್ಲಿ..

Share Button

” ನಮ್ಮತ್ತೆಗೆ ಇತ್ತೀಚೆಗೆ ತೀರಾ ಮರೆವು , ಬಾಗಿಲು ತೆಗೆದು ರಸ್ತೆಗೆ ಹೋಗ್ತಾರೆ, ವಾಪಾಸು ಮನೆಗೆ ಬರಲು  ದಾರಿ ಗೊತ್ತಾಗಲ್ಲ,    ಶುಗರ್ ಇದ್ದರೂ ಬಾಯಿ ಚಪಲಕ್ಕೇನೂ ಕಮ್ಮಿ ಇಲ್ಲ, ಬೆನ್ನು ನೋವು ಅಂತಾರೆ, ಸದಾ ಅವರ ಹಳೇ ಪ್ರವರ ಕೇಳ್ತಾ ಇರ್ಬೇಕು, ಆಫೀಸಿನಲ್ಲಿ ಕೆಲ್ಸ ಮಾಡಿ ನಂಗೆ...

1

ನನ್ನ ವಿಮಾನ ಪಯಣ

Share Button

ಚಿಕ್ಕ ವಯಸ್ಸಿನಲ್ಲಿ ವಿಮಾನ ಹಾರುವ ಶಬ್ದ ಕೇಳಿಸಿದಾಕ್ಷಣ ಏನೇ  ಕೆಲಸ ಮಾಡುತ್ತಿದ್ದರೂ ಹೊರಗೆ ಓಡಿ ಬಂದು ಬಿಡುತ್ತಿದ್ದೆವು.ಊಟ ಮಾಡುತ್ತಿರಲಿ ,ಓದುತ್ತಿರಲಿ ,ಬರೆಯುತ್ತಿರಲಿ ಮಲಗಿರಲಿ, ಕೆಲಸ ಮಾಡುತ್ತಿರಲಿ ,ಸ್ನಾನ ಮಾಡುತ್ತಿರಲಿ, ಕೊನೆಗೆ ಶೌಚ ಗೃಹದಲ್ಲಿ ಇರಲಿ ಅರ್ಧಕ್ಕೆ ನಿಲ್ಲಿಸಿ  ಓಡೋಡಿ ಬಂದು ತಲೆ ಎತ್ತಿ  ಆಕಾಶದಲ್ಲಿ ಚುಕ್ಕೆಯಂತೆ ಕಾಣುತ್ತಿದ್ದ...

1

ಮೊಬೈಲ್ ಕಣ್ಣು

Share Button

ಹೊರಗಿನ ಆಕರ್ಷಣೆಗೆ ಕಾಲದ ಮಿತಿ ಇರುತ್ತದೆ. ಒಳಗಿನ ಆಕರ್ಷಣೆ ಕಾಲದ ಆಚೆಗೂ ಇರುತ್ತದೆ. ನೆನ್ನೆ ಬಿದ್ದ ಮಳೆಗೆ  ಹುಟ್ಟಿಕೊಂಡ ಜೀವ, ಎಲ್ಲರನ್ನು ಆಕರ್ಷಿಸಿ ಕಾಲದ ಮಿತಿಯಲ್ಲಿ ಮರೆಯಾಗಿ ಹೋಗುತ್ತದೆ. ಆದರೆ ಮಣ್ಣಿನೊಳಗಿನ ಆಕರ್ಷಣೆ ಕಾಲದ ಆಚೆಗೂ ಇರುತ್ತದೆ, ಮಳೆಯ ಸ್ಪರ್ಶಕ್ಕೆ ಮತ್ತೆ ಮತ್ತೆ ಹೊರಕ್ಕೆ ಜಿಗಿಯುತ್ತದೆ.  –  ಶೈಲಜೇಶ್...

Follow

Get every new post on this blog delivered to your Inbox.

Join other followers: