• ಬೆಳಕು-ಬಳ್ಳಿ

    ಗಜ಼ಲ್ : ಅವಕಾಶವೆಲ್ಲಿ ?

      ಹೊಳೆಯಾಗಿ ಹರಿಯವುದಿತ್ತು ಅವಕಾಶವೆಲ್ಲಿ ಕಡಲಾಗಿ ಕೂಡುವುದಿತ್ತು ಅವಕಾಶವೆಲ್ಲಿ ಹಕ್ಕಿಯ ರೆಕ್ಕೆ ಮನಸು ಎರಡೂ ಇತ್ತಲ್ಲ ಹಾರಿ ಚುಕ್ಕಿ ಸೇರುವುದಿತ್ತು…

  • ಬೆಳಕು-ಬಳ್ಳಿ

    ಹುಟ್ಟು

    ಧ್ವನಿ ತಟ್ಟೆಯಲ್ಲಿ ಹಾಡಿನ ಜಾಡು ಕೊರೆದಿದೆ.. ಕಂಪಿಸುವ ಮುಳ್ಳು ತಟ್ಟೆ ತಿರು ತಿರುಗಿದಂತೆಲ್ಲ ಅದೇ ಜಾಡುಗಳಲ್ಲಿ ಮುಳ್ಳು ಚಲಿಸಿ ..ಎದೆ ಗೀರಿ ಸೀಳಿ ಹೊಮ್ಮುವ ಹಾಡು .. ನೀನು ಕೇಳುತ್ತೀ – ನಿನ್ನ ಹಾಡಿನಲ್ಲಿ ಯಾಕೆ ಅಲುಗಿಸುವ ಯಾತನೆ.. ಮುಳ್ಳು, ಕಂಪನ  ಮತ್ತು ಎದೆಯ ಗಾಯವಿರದೆ ಹಾಡು ಹೊಮ್ಮೀತು ಹೇಗೆ ..? – ಗೋವಿಂದ ಹೆಗಡೆ…

  • ಬೆಳಕು-ಬಳ್ಳಿ

    ನಡೆ

    ನಡೆಯುತ್ತಲೇ ಇದ್ದೇನೆ ಬೆಳಗಿನಿಂದ ನಡು ಹಗಲು ದಾಟಿದೆ ಸೂರ್ಯ ಕೊಂಚ ವಾಲಿದ್ದಾನೆ ಈಗ. ದಾಟುತ್ತ ಬಂದಿರುವೆ ಹೂವಿನ ದಾರಿಗಳನ್ನು ಬೆಂಕಿಯ ಬೆಟ್ಟಗಳನ್ನು ಏರನ್ನು ಇಳಿಜಾರನ್ನು ಮುಂದಿನ ದಾರಿಯಲ್ಲಿ ಇದ್ದೀತು ಏನು ಇರಬಹುದೇ ಬಣ್ಣದ ಹಬ್ಬ – ಗಂಧದದೌತಣಗಳು (ಸದ್ಯ! ಕನಸಿಗಿಲ್ಲ ಸುಂಕ !) ನಡೆಯುವೆ- ಮುಗಿಲೋಳಿಯಲ್ಲಿ ಕಣ್ಣ ನೆಟ್ಟು ಖಾತ್ರಿ- ಈ ಪಯಣ ಮುಗಿಯುತ್ತದೆ ಸಂಜೆಯಲ್ಲಿ, ಪಡುವಣದಲ್ಲಿ…

  • ಬೆಳಕು-ಬಳ್ಳಿ

    ಬದಲು

    ಪಟಾಕಿ, ಮತಾಪುಗಳ ಗುಂಪಲ್ಲಿ ಹೂಕುಂಡಗಳ ನೋಡಿದ್ದೀರಲ್ಲ? ಹಚ್ಚಿದರೆ ಎರಡಾಳು ಎತ್ತರಕ್ಕೆ ಕೆಳಗಿನಿಂದ ಮೇಲೆ ಬೆಳಕಿನ ಮಳೆ ಸುರಿದು- ಕರಗುತ್ತದೆ . ಉರಿವ ಹೂಕುಂಡಗಳ ಕಣ್ಣಲ್ಲಿ ಸದಾ ಇರಿಸಿದಂಥ ಆ ಹುಡುಗ ಎಷ್ಟು ಹೊತ್ತಿಗೂ ಬಿಳಿಬಿಳಿಯ ಪುಟ್ಟ ಮೊಲವನ್ನು ಅಂಗಿ ಜೇಬಲ್ಲಿ ಇರಿಸಿಯೇ ಇದ್ದ ನಡೆಯುವಾಗ ನಿಲ್ಲುವಾಗ ಮಾತಾಡು -ವಾಗಲೂ ಕೈಯೊಂದನ್ನು ಮೊಲದ ಮೊಲದ ಮೇಲೇ ಇರಿಸಿರುತ್ತಿದ್ದ ಅದರ ಗುಲಗಂಜಿ ಕಣ್ಣುಗಳ ನಾನೂ…