ಶವಸ೦ಸ್ಕಾರಕ್ಕೊಂದು ಪೆಟ್ಟಿಗೆ

Share Button

ಮೇಲ್ನೋಟಕ್ಕೆ  ಡ್ರೈಯರ್ ನಂತೆ  ಕಾಣುವ ಈ  ಸಾಧನ  ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ  ಶವಸ೦ಸ್ಕಾರಕ್ಕೆ ಬಳಸುವ ‘ಚಿತಾಗಾರ’ ಎನ್ನಬಹುದು . ವಿದ್ಯುತ್  ಚಿತಾಗಾರದ ಮಾದರಿಯಂತಿರುವ ಇದು  ಸ್ವಂತ  ಭೂಮಿಯಲ್ಲಿ  ಶವ ಸಂಸ್ಕಾರ ಮಾಡುವ ಗ್ರಾಮೀಣ ಪ್ರದೇಶದ  ಜನರಿಗೆ  ಬಹಳ ಅನುಕೂಲಕರವಾಗಿದೆ .

ಸಾಮಾನ್ಯ  ಏಳರಿಂದ  ಒಂಭತ್ತು   ಅಡಿಗಳಷ್ಟು  ಉದ್ದದ ಕಬ್ಬಿಣದ  ಎರಡು  ಚಪ್ಪಟೆಯಾದ  ಸರಳುಗಳು , 7  ರಿಂದ 8  ಅಡ್ಡ ಸರಳುಗಳು, ಮೂರು  ಅರ್ಧ ಗೋಳಾಕಾರದ  ಗವಾಕ್ಷಿ ಇರುವ  ಕಬ್ಬಿಣದ ಮುಚ್ಚಿಗೆಗಳು ಇವಿಷ್ಟು ಇದರ ಅಂಗಗಳು. ಇದನ್ನು  ಜೋಡಿಸಿದಾಗ  ಚಿತ್ರದಲ್ಲಿರುವ  ರೂಪವನ್ನು ತಾಳುತ್ತದೆ. ಮುಚ್ಚಳವಿಲ್ಲದಾಗ ನೋಡಲು  ರೈಲ್ವೆ ಟ್ರ್ಯಾಕ್ ನ೦ತೆಯೇ   ಕ೦ಡುಬರುವುದು .ಇದನ್ನು ಸಾಗಿಸಲು  ಪಿಕ್- ಅಪ್  ಸಾಕಾಗುತ್ತದೆ . ಅರ್ಧಗೋಳಾಕಾರದ ಮೂರು  ಬಿಡಿಭಾಗಗಳನ್ನು (ಶವ ಸುಡುವ  ಜಾಗಕ್ಕೆ) ಸಾಗಿಸಲು  ನಾಲ್ಕು ಮಂದಿಯ ಆವಶ್ಯಕತೆ ಇರುತ್ತದೆ . ಉಳಿದ  ಭಾಗಗಳನ್ನು  ಒಬ್ಬೊಬ್ಬರಿಂದಲೇ  ಸಾಗಿಸಬಹುದು.
.

ಶವವನ್ನು   ಸುಡುವ  ಜಾಗದಲ್ಲಿ ಸಾಧಾರಣ   1 ಅಡಿ ಆಳ ಮತ್ತು 8 ರಿಂದ 9 ಅಡಿ ಉದ್ದದ   ಹೊಂಡವನ್ನು  ತೆಗೆದು ಆ ಹೊಂಡದಲ್ಲಿ ಉದ್ದಕ್ಕೂ ಮತ್ತು  ಅಗತ್ಯವಿರುವಷ್ಟು ಎತ್ತರಕ್ಕೆ  ಗೆರಟೆಗಳನ್ನು (ಉರುವಲು) ಹರಡಿ  ಅದರ  2 ಬದಿಯಲ್ಲಿ ಕಲ್ಲುಗಳನ್ನಿಟ್ಟು  ಆ ಕಲ್ಲುಗಳ ಮೇಲೆ ಕಬ್ಬಿಣದ ಉದ್ದ ಸರಳುಗಳನ್ನು, ಉದ್ದ ಸರಳುಗಳ ಚಡಿ (ಪಡ)ಗಳ  ಮೇಲೆ ಅಡ್ಡ  ಸರಳುಗಳನ್ನು  ಜೋಡಿಸುವುದಾಗಿದೆ.  ಎತ್ತರಿಸಲಷ್ಟೇ  ಕಲ್ಲಿನ  ಅಗತ್ಯವಿರುತ್ತದೆ. (ಸರಳಿನ  ಉದ್ದಕ್ಕೂ ಕಲ್ಲುಗಳನ್ನಿಟ್ಟರೆ   ಗಾಳಿಯಾಡಲು ಎಡೆ  ಇರುವುದಿಲ್ಲ. ಆ  ಕಾರಣದಿಂದ   ಶವವು   ಸರಿಯಾಗಿ ದಹನವಾಗದೇ  ಇರಬಹುದು) ಅದರ  ಮೇಲೆ ಅಂತ್ಯೇಷ್ಟಿಸಂಸ್ಕಾರಕ್ಕೆ  ಸಿದ್ದಗೊಂಡ  ಶವ.  ಈ  ವ್ಯವಸ್ಥೆಯಿಂದ,ಚಿತೆಯ  ಬಗ್ಗೆ ಚಿಂತೆ ಇಲ್ಲದೆ ಬೆಂಕಿ  ಹಚ್ಚಬಹುದು . ನಾನು  ಇದನ್ನು  ಇದೇ  ಮೊತ್ತ ಮೊದಲು  ಕಂಡಿರುವುದು. ಇದು  ಕಾಸರಗೋಡು  ಜಿಲ್ಲೆಯ ಪೈವಳಿಕೆ  ಪಂಚಾಯತಿನ  ಬಾಯಾರು  ಗ್ರಾಮದಲ್ಲಿ . ಇತರ ಪಂಚಾಯತು  ಪ್ರದೇಶದ  ವ್ಯಾಪ್ತಿಯಲ್ಲೂ  ಈ  ಸಾಧನದ  ಬಳಕೆ  ಇದೆಯಂತೆ. ಎಲ್ಲ ಕಡೆಯಲ್ಲೂ   ಊರವರೇ  ವಂತಿಗೆ  ಸೇರಿಸಿ ಮಾಡಿದ ಶ್ಲಾಘನೀಯ  ವ್ಯವಸ್ಥೆ .

ಮಾವಿನ ಮರ ಕಡಿದು  ಕಾಷ್ಠಕ್ಕೆ  ಸಾಗಿಸುವ  ಕೂಲಿಯಾಳುಗಳ  ಶ್ರಮ ,  ಜೀವಂತ ಮರದ ಉಳಿತಾಯ , ಸಮಯದ ಉಳಿತಾಯ , ವಿಳಂಬವಿಲ್ಲದೆ  ಶವಸಂಸ್ಕಾರ ,  ಮಳೆ ಬಂದರೆ  ಕಾಷ್ಠದ  ಬೆಂಕಿ ಆರಿಹೋಗದಂತೆ    ಚಪ್ಪರದ  ಆವಶ್ಯಕತೆ  ಇಲ್ಲದಿರುವುದು  ಇವೆಲ್ಲಾ  ಈ  ಪೆಟ್ಟಿಗೆಯಿಂದ  ಸಾಧ್ಯವಾಗಬಹುದಾದ  ಅನುಕೂಲತೆಗಳು . ಧರ್ಮ ಕಾಷ್ಠವೆಂದು  ನೆರೆದವರೆಲ್ಲ   ಗವಾಕ್ಷಿಯ  ಮೂಲಕ  ಚಿಕ್ಕ,ಚಿಕ್ಕ   ಮಾವಿನ  ಗೆಲ್ಲುಗಳನ್ನು  ಹಾಕುವ  ಅನುಕೂಲತೆಯಿದ್ದು  , ಇದು   ಶಾಸ್ತ್ರಕ್ಕೆ  ಪೂರಕವಾಗುವಂತೆಯು ಇದೆ . ಸಾಮಾನ್ಯವಾಗಿ  ಕಾಷ್ಠ ತಯಾರಿಸುವಲ್ಲಿ  ನುರಿತವರ  ಅವಶ್ಯಕತೆ ಇರುತ್ತದೆ .  ಇಲ್ಲವಾದಲ್ಲಿ  ಅರ್ಧ ಉರಿಯುತ್ತಿರುವಾಗಲೇ  ಶವ  ಜಾರಿ ಬೀಳುವೆ  ಸಾಧ್ಯತೆ ಇರುವುದು  . ಉರಿಯುತ್ತಿರುವ  ಕಾಷ್ಠದ  ಶಾಖದಿಂದಾಗಿ  ಮತ್ತೆ  ಅದನ್ನು  ಮೇಲೇರಿಸುವುದು  ಕಷ್ಟಕರ ವಾಗುವುದು . ಈ ಪೆಟ್ಟಿಗೆಯಲ್ಲಿ  ಮುಚ್ಚಳದ  ಸೌಲಭ್ಯವಿರುವುದರಿಂದ  ಇದಕ್ಕೆ ವಿಶೇಷ  ನೈಪುಣ್ಯದ  ಆವಷ್ಯಕತೆ ಇರುವುದಿಲ್ಲ .

-ಭಾಗ್ಯಲಕ್ಷ್ಮಿ , ಮೈಸೂರು

1 Response

  1. Krishna Pramod Mudipu says:

    ಇತ್ತೀಚೆಗೆ ಬದಿಯಡ್ಕ ಹತ್ರ ನೋಡಿದ್ದೇ
    ನಿಜವಾಗಿಯೂ ಸುಲಭದ ಅತ್ಯಂತ ಮಿತವ್ಯಯಕಾರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: