ಕೇರಳದ ಕಥಕ್ಕಳಿ…!

Share Button

ತುಂಬು ವೈವಿಧ್ಯಮಯ ರಂಗಿನಾಲಂಕಾರ
ಸಾಂಪ್ರದಾಯಿಕ ನೃತ್ಯ ಕಥಕ್ಕಳಿ ಸಾಕಾರ
ಕೇರಳದ ಜನತೆಯಲಿ ಹಾಸುಹೊಕ್ಕಿರೆ ಸಾರ
ನಟನೆಯ ಈ ನೋಟ ನಯನ ಮನೋಹರ

ಚೆಂಡೆ,ತಾಳ ಲಯಬದ್ಧ ಹಾಡು ಚಂದ
ಅಕ್ಷಿ,ಆಂಗಿಕಾಭಿನಯ ನೋಡಲಾನಂದ
ಪೌರಾಣಿಕಾ ನೆಲೆಯ ಕಥನ ಕಥಕ್ಕಳಿಯು
ಕರಾವಳಿ ಕೇರಳದ ಜಾನಪದ ಕಲೆಯು

ದಿನ ದಿನದ ದುಡಿತಗಳಿಗೆ ಬೇಕು ವಿಶ್ರಾಂತಿ
ಶ್ರೀಮಂತ ಕಲೆಗಳಲಿ ಸಿಗಲು ಮನಃಶಾಂತಿ
ನವರಸಗಳಲಿ ನಲಿವ ಈ ದಿವ್ಯ ನೋಟ
ನಿರುತ ನಡೆಯಲಿ ಭವ್ಯ ಕಥಕ್ಕಳಿಯಾಟ

–  ಶಂಕರಿ ಶರ್ಮ, ಪುತ್ತೂರು.

1 Response

  1. Shankara Narayana Bhat says:

    ದಿನದಿನದ ದುಡಿತಗಳಿಗೆ ವಿಶ್ರಾಂತಿ ಬೇಕು. ಆದರೆ ಶ್ರೀಮಂತ ಕಲೆಗಳು ನಮಗೆ ಮನ:ಶಾಂತಿ ಒದಗಿಸುತ್ತವೆ, ಮೇಡಮ್ ಶಂಕರಿ ಪುತ್ತೂರು, ಅವರ ಬರಹ ಚೆನ್ನಾಗಿದೆ. ಅವರು ಕೇರಳದಲ್ಲಿ ಇದ್ದರೋ ಅಥವಾ ಪ್ರವಾಸ ಮಾಡಿ ತಿಳಕೊಂಡರೊ ಎಂದು ಸಂಶಯ ಬರುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: