Monthly Archive: October 2016
ಕೇದಾರನಾಥ ದೇವಾಲಯದ ಗರ್ಭಗುಡಿಗೆ ಸಮಾನಾಂತರವಾಗಿ ಸುಮಾರು 20 ಅಡಿ ಹಿಂದೆ, ದೊಡ್ಡದಾದ ಬಂಡೆಯೊಂದು ಕಾಣಿಸುತ್ತದೆ. ಪ್ರಕೃತಿಯಲ್ಲಿ ಧಾರಾಳವಾಗಿ ಕಾಣಸಿಗುವ ಬಂಡೆಯಲ್ಲಿ ಏನು ವಿಶೇಷ ಎನ್ನುತ್ತೀರಾ? ಆ ಬಂಡೆ ಇರುವ ಜಾಗ, ಅದು ಅಲ್ಲಿಗೆ ಉರುಳುತ್ತಾ ಬಂದ ಪರಿ ಮತ್ತು ಬಹುಶ: ಬಂದು ತಲಪಿದ ಸಮಯ ಆಸ್ತಿಕರ ಮನಸ್ಸಿನಲ್ಲಿ ಅದಕ್ಕೆ ದೈವಿಕ...
‘ಟುಗು ನೆಗರ ‘ ಅಂದರೆ ಮಲಯ ಭಾಷೆಯಲ್ಲಿ ‘ರಾಷ್ಟ್ರೀಯ ಸ್ಮಾರಕ’ ಎಂದರ್ಥ. ಮಲೇಶ್ಯಾದ ಕೌಲಾಲಂಪುರ್ ನಲ್ಲಿರುವ ‘ಟುಗು ನೆಗರ’ ವು ಒಂದು ಅದ್ಬುತವಾದ ಕಂಚಿನ ಪುತ್ಥಳಿ . ಮಲೇಶ್ಯಾದ ಸ್ವಾತಂತ್ರ್ರ್ಯಕಾಗಿ ಹಾಗೂ ಎರಡನೆಯ ವಿಶ್ವ ಮಹಾಯುಧ್ಧದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಇದನ್ನು ಸ್ಥಾಪಿಸಲಾಗಿದೆ. 15 ಮೀಟರ್ ಎತ್ತರದ ಈ ಕಂಚಿನ...
‘ಹರೀಶ್ ಮಿಹಿರ’ ಆಳ್ವಾಸ್ ಕಾಲೇಜು ಮೂಡಬಿದಿರೆಯ ಕನ್ನಡ ಉಪನ್ಯಾಸಕರು. ಅವರ ಆತ್ಮಕತೆ ‘ತೊರೆಯೇ ತೋರಿದ ದಾರಿ‘ ಮಿಹಿರ ಪ್ರಕಾಶನದಿಂದ ಬಿಡುಗಡೆಯಾಗಿದೆ. ಮುದ್ದಣ ಮನೋರಮೆಯರ ಸಲ್ಲಾಪದ ಶೈಲಿಯಲ್ಲಿ ಮೂಡಿ ಬರುವ ಈ ಆತ್ಮಕತೆ ತನ್ನ ತೆಳುವಾದ ನವಿರು ಹಾಸ್ಯದಿಂದ, ಜೀವನ ಪ್ರೀತಿಯಿಂದ ಮನ ಸೆಳೆಯುತ್ತದೆ. ಬಾಳೆಂಬ ತೊರೆಯಲ್ಲಿ ತಮ್ಮ...
ಮಧ್ಯಾಹ್ನದ ಊಟ ಮುಗಿಸಿ ಒಂದರ್ಧ ತಾಸು ವಿರಮಿಸುವ ರಾಯರು ಮನೆಯ ಗೇಟಿಗೆ ಕಟ್ಟಿರುವ ಅಂಚೆ ಡಬ್ಬಿಯಲ್ಲಿ ಏನಾದರೂ ಪತ್ರಗಳಿವೆಯೇ ಎಂದು ನೋಡುವುದು ಅವರ ದೈನಂದಿನ ಕಾಯಕ. ಈ ಈಮೈಲು, ಮೊಬೈಲುಗಳ ಭರಾಟೆಯಲ್ಲಿ ಪತ್ರಗಳು ಬರುವುದೇ ನಿಂತು ಹೋಗಿದೆ. ಪತ್ರಗಳಿದ್ದರೂ ಕೆಇಬಿಯ ಬಿಲ್ಲು, ನೀರಿನ ಬಿಲ್ಲು, ಯಾರದೋ...
ನಮ್ಮೂರ ಮುಖ್ಯರಸ್ತೆಯ ಒಂದು ಬದಿಯಲ್ಲಿ ರಂಜಾನ್ ಪುಟ್ಟದೊಂದು ಡಬ್ಬಿ ಅಂಗಡಿ ಇಟ್ಟುಕೊಂಡಿದ್ದ, ಅದರಲ್ಲಿ ಪತ್ರಿಕೆ, ಪೆನ್ನು-ಪುಸ್ತಕ, ಪಂಚಾಂಗ್. ಅಂಚೆಪತ್ರ, ರೆವಿನ್ಯೂ ಸ್ಟ್ಯಾಂಪ್ ಹೀಗೆ ಹಲವುಗಳೆಲ್ಲಾ ಒಂದೇ ಸೂರಿನಡಿ ದೊರೆಯುತ್ತಿದ್ದವು. ರಂಜಾನ್‌ನಿಗೆ ಇಳಿವಯಸ್ಸಿನಲ್ಲಿರುವ ಅಪ್ಪ-ಅಮ್ಮ, ಇರ್ವ ತಮ್ಮಂದಿರು, ಮೂವರು ತಂಗಿಯರು, ಒಟ್ಟು ಎಂಟೂ ಜನರ ಹೊಟ್ಟೆ-ಬಟ್ಟೆಯ ವಿಷಯದಲ್ಲಿ ಈ...
ನೋವಿನೊಳಗೂ ಅರಳುವ ಸಂಭ್ರಮ ಅದುವೇ ನನ್ನವಳ ನಿರ್ಮಲ ಪ್ರೇಮ ಮಗುವ ಮುಗ್ದ ಮನದವಳು ನಗುವಿನಿಂದೆಲ್ಲಾ ಧಾರೆಯೆರೆವವಳು ನನ್ನೆದೆಯ ಭಾವಗೀತೆ ಅವಳು ಹಣತೆಯಾಗಿ ಮನ ಮನೆ ಬೆಳಗುವಳು ನೋವಲ್ಲಿ ನನ್ನ ಸಂತೈಸಿ ನಲಿವಲ್ಲಿ ಬೆರೆವಳು ಸಂಭ್ರಮಿಸಿ ಬದುಕುವ ಬಲು ಹಂಬಲದಾಕೆ ಅವಳೊಲವೇ ಬೆಂಬಲವದಕೆ ಎಲ್ಲವನ್ನೂ ಎದುರಿಸೋ ಗಟ್ಟಿಗಿತ್ತಿ ಸದಾ...
ನವರಾತ್ರಿ ಎಂದರೆ ಇಡೀ ದೇಶದಲ್ಲೇ ಸಡಗರದಿಂದ 9 ದಿನಗಳ ಕಾಲ ಆಚರಿಸುವ ಹಬ್ಬ. ಸ್ತ್ರೀರೂಪಿಣಿ ಶಕ್ತಿ ದೇವತೆಯ ವಿವಿಧ ರೂಪಗಳನ್ನು ಪೂಜಿಸುವ ಸಮಯವಿದು. ಅರಾಧನೆಗಳು ವಿವಿಧ ರೀತಿಯವು…ಅದರಲ್ಲಿ ನವರಾತ್ರಿ ಸಮಯದಲ್ಲಿ ಹಾಕುವ ಹುಲಿ ವೇಷವೂ ಒಂದು. ಇದು ಅವಿಭಜಿತ ದಕ್ಷಿಣಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಆಸು ಪಾಸು...
ಹಲಸಿನಕಾಯಿಗಳು ಧಾರಾಳವಾಗಿ ಬೆಳೆಯುವ ಕರಾವಳಿ-ಮಲೆನಾಡಿನ ಹಳ್ಳಿಮನೆಗಳಲ್ಲಿ ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ಎಳೆಗುಜ್ಜೆಗಳು ಸಿಗುತ್ತವೆ. ಎಳೆಗುಜ್ಜೆಯ ಪಲ್ಯದಿಂದ ಆರಂಭವಾದ ಹಲಸಿನ ಅಡುಗೆಗಳ ವೈವಿಧ್ಯತೆ ಜುಲೈ ವರೆಗೂ ಇರುತ್ತದೆ. ಖಾರದ ಅಡುಗೆಗಳಾಗಿ ಹಲಸಿನಕಾಯಿಯ ಪಲ್ಯ, ಸಾಂಬಾರು, ಜೀರಿಗೆಬೆಂದಿ, ಹಪ್ಪಳ, ಚಿಪ್ಸ್ ಇತ್ಯಾದಿ ಮೇಳೈಸಿದರೆ, ಸಿಹಿ ಅಡುಗೆಗಳಾಗಿ ಹಲಸಿನಹಣ್ಣಿನ ಪಾಯಸ, ಮುಳಕ,...
ಇದು ಈಗಿನ ನವರಾತ್ರಿಯ ನವೋಲ್ಲಾಸ ಅಲ್ಲ. ನಮ್ಮ ಬಾಲ್ಯದ ದಿನಗಳದ್ದು. ಆಗ ಪರೀಕ್ಷೆಗಳು ಮುಗಿದು ರಜೆ ಆರಂಭವಾಗಿರುತ್ತಿತ್ತು. ಮನಸ್ಸು ಹಕ್ಕಿಯಂತೆ ಹಗುರಾಗಿರುತ್ತಿತ್ತು. ರಜಾದ ಮಜಾವನ್ನು ಕೊಲ್ಲುವ ಖಳನಾಯಕರಂಥ ಕೆಲವು ಅಧ್ಯಾಪಕರು ಹೋಮ್ ವರ್ಕ್ ಕೊಡುತ್ತಿದ್ದರೂ ಅದನ್ನು ರಜೆಯ ಕೊನೆಯ ದಿನಕ್ಕೆ ಮೀಸಲಿರಿಸಿ ತತ್ಕಾಲಕ್ಕೆ ಮರೆತು ಬಿಡುತ್ತಿದ್ದೆವು. ಪಿತೃ...
ಗ್ರಂಥಾಲಯವು ಶ್ರೀಸಾಮಾನ್ಯನ ವಿಶ್ವವಿದ್ಯಾನಿಲಯ, ಜ್ಞಾನದಾಹಿಗಳಿಗೆ ಗ್ರಂಥಗಳೇ ನಿಜವಾದ ಹಿತೈಷಿಗಳು. ಒಂದು ಸದ್ಗ್ರಂಥವನ್ನು ಕೈಗೆತ್ತಿಕೊಂಡು ಓದಿದಾಗ ಮನಸ್ಸಿಗಾಗುವ ಆನಂದ ಅವರ್ಣನೀಯ. ಶಿಕ್ಷಣವೆಂಬುದು ನಾಲ್ಕು ಗೋಡೆಗಳ ನಡುವೆ ಶಾಲಾ ಕಾಲೇಜುಗಳ ಕೊಠಡಿಯಲ್ಲೇ ಆಗಬೇಕೆಂದಿಲ್ಲ. ಬದಲಾಗಿ ಉತ್ತಮ ಪುಸ್ತಕಗಳನ್ನು ಸದಾ ಅಧ್ಯಯನ ಮಾಡುವ ಮೂಲಕ ಜ್ಞಾನವನ್ನು ಸಾಕಷ್ಟು ವೃದ್ಧಿಸಿಕೊಳ್ಳಬಹುದು. ಖ್ಯಾತ ನ್ಯಾಯತಜ್ಞ,...
ನಿಮ್ಮ ಅನಿಸಿಕೆಗಳು…