Daily Archive: October 27, 2016
ಅಮ್ಮ ಹೇಳಿದುದಕ್ಕೆಲ್ಲ ನಾನು ಬರೀ ಹ್ಞೂ…ಗುಟ್ಟುತ್ತಿದೆ.. ನನ್ನ ಜಡೆ ಹಾಕುತ್ತಿದ್ದ ಅಮ್ಮ ನನ್ನ ಜಡೆ ಎಳೆದು ಅಂದರು, …ನಾನು ಹೇಳುವುದೆಲ್ಲವನ್ನು ಕೇಳುತ್ತಿದ್ದೀಯಲ್ಲ. ಹ್ಞೂ…ಹೇಳು… ಹ್ಞೂಗುಟ್ಟುವುದಕ್ಕೂ ಕೇಳುವುದಕ್ಕೂ ಇದು ಕತೆಯಲ್ಲ, ವಾಸ್ತವ… ಗೊತ್ತು ನನಗೆ…ಮುಂದುವರಿಸು…ನಾನಂದೆ. ಅಮ್ಮ ಮತ್ತೆ ಪ್ರಾರಂಭಿಸಿದಳು..ನಿನ್ನ ನಿರ್ಧಾರದ ಮೇಲೆ ಈ ಮಗುವಿನ ಭವಿಷ್ಯ ನಿಂತಿದೆ. ಇಷ್ಟಕ್ಕೂ...
ಇಬ್ಬನಿ ತೊಲೆಗಳು ಹಬ್ಬಿವೆ ನೋಡೀ ಮಬ್ಬಿನ ಬೆಳಕಿನ ತಂಪಿನೊಳು I ತಬ್ಬುತ ಶರದೆಯೊ- ಳುಬ್ಬಿದ ಚಂದಿರ- ನೆಬ್ಬಿಸಿ ಮಿತ್ರಗೆ ವಹಿಸಿದೊಲು II – ಭಾಗ್ಯಲಕ್ಷ್ಮಿ, ಮೈಸೂರು +16
ಎಲ್ಲಿ ಬೆಳಕು… ಬೆಳಕು ಎಲ್ಲಿ….? ಮೋಡ ಕವಿದ ಧರೆಯ ಮೇಲೆ ಧಾರೆ ಮಳೆ ಆಗುವಲ್ಲಿ ನದಿಯು ಭರದಿ ಹರಿದು ಕೂಡ ದೋಣಿ ದಡಕೆ ಸಾಗುವಲ್ಲಿ ಒಳಹೊರಗಿನ ಮಲಿನ ತೊಲಗಿ ಶುದ್ಧ ಗಾಳಿ ಬೀಸುವಲ್ಲಿ ವಿಕೃತಿ ಅಳಿದು ತೊಳೆದು ಪ್ರಕೃತಿ ಹೊಸತ ತೋರುವಲ್ಲಿ ತುಡಿವ ದುಡಿವ ಕಾಯಗಳಿಗೆ...
ಮನದೊಳ ಮನ ಕೇಳುತ್ತಿದೆಯೆನ್ನ ಸಾಯಂ ಸಂಧ್ಯೆಯೊಡನೆ ಪ್ರೇಮವೇಕೆ ತಂಗಾಳಿ ಛೇಡಿಸಿ ಪೀಡಿಸುತ್ತಿದೆಯೆನ್ನ ಮುಸ್ಸಂಜೆ ವೇಳೆಯಲಿ ಉಲ್ಲಾಸವೇಕೆ ಮೇಘಗಳ ಮರೆಯಿಂದ ಮೇಘವೊಂದಿಣುಕಿ ಸರಸ ಸಂದೇಶಗಳ ರವಾನಿಸುತ್ತಿದೆಯಲ್ಲಾ ಪ್ರತಿಕ್ಷಣ ಪ್ರತಿದಿನ ಮುದ ಪಡೆಯೆಂದು ಪ್ರೇಮಾಭಿಷೇಕ ಎರೆಯುತ್ತಿದೆಯಲ್ಲಾ ಮನದೊಳಗೆ ನದಿಯೊಂದು ಹರಿಯುತಾ ಕೇಳುತ್ತಿವೆ ಬೊಗಸೆ ನೀರಿನೊಡನೆ ಚೆಲ್ಲಾಟವೇಕೆ ಮನೆಯೊಳಗೆ ದೀಪಗಳು ಉರಿಯುತಾ...
ಯಮುನಾ ನದಿಯ ಉಗಮ ಸ್ಥಾನವಾದ ಯಮುನೋತ್ರಿಯು ಹಿಮಾಲಯದ ಮಡಿಲಿನಲ್ಲಿರುವ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿದೆ. ಸಮುದ್ರ ಮಟ್ಟದಿಂದ 10797 ಅಡಿ ಎತ್ತರದಲ್ಲಿರುವ ಯಮುನೋತ್ರಿಯನ್ನು ತಲಪಲು ‘ಜಾನಕಿಚಟ್ಟಿ’ ಎಂಬಲ್ಲಿಂದ ಸುಮಾರು 6.5 ಕಿ.ಮೀ ಏರುದಾರಿಯಲ್ಲಿ ಚಾರಣ ಮಾಡಬೇಕು. ನಡೆಯಲು ಕಷ್ಟವಾಗುವವರಿಗೆ ಕುದುರೆ ಸವಾರಿ, ಡೋಲಿ ಮತ್ತು ಕಂಡಿ...
ಈಗ ಹಗಲನ್ನು ಇರುಳನ್ನೂ ಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆ ತುಂಗೆಯ ಮರಳುರಾಶಿಯಲ್ಲಿ ಮೂಡಿದ ನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆ ನನ್ನ ಕಾಲುಗಳು ಹೂತುಹೋದದ್ದು ನನಗೆ ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯ ನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿ ಕಳೆದುಕೊಂಡಿದ್ದೆ ನಿನ್ನನೂ . ಕವಿತೆಯ ಪ್ರತಿಸಾಲನ್ನೂ ನೀನು ಆಕ್ರಮಿಸುವಾಗ ಪ್ರತಿ...
ನಾನಿರುವ ಹೆಗ್ಗುರುತು ನಿನ್ನ ಈ ಪ್ರೀತಿ ನನ್ನ ಸಾಧನೆಯ ಪ್ರತೀಕ ನೀನೇ ತಾನೇ ಓ ಸಂಗಾತಿ ನನ್ನೆಲ್ಲಾ ನೋವಿಗೆ ಹೆಗಲಾದೆ ನಿನ್ನ ಮಡಿಲಲಿ ನಾ ಮಗುವಾದೆ ನನ್ನಲಿ ನೀ ಕನಸ ಬಿತ್ತಿದೆ ಅದೀಗ ಹೆಮ್ಮರವಾಗಿ ನಿಂತಿದೆ ಬದುಕ ಬೇಸರಕೆ ನೀ ಆಸರೆ ನಿನ್ನ ಒಲವ ನೆರಳಲಿ ನಾ...
ನಿಮ್ಮ ಅನಿಸಿಕೆಗಳು…