Daily Archive: May 4, 2023

5

ಸ್ಮೃತಿಕಾರ ಯಾಜ್ಞವಲ್ಕ್ಯ

Share Button

ಯಾವುದೇ ಒಂದು ಕೆಲಸವನ್ನು ಗುರಿಯಿಟ್ಟು ಆಸ್ಥೆ ವಹಿಸಿ ಪೂರೈಸಿದಾಗ ಅದನ್ನು ಸಾಧಿಸಿದ ಸಾರ್ಥಕ ಭಾವ ನಮ್ಮದಾಗುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ಅದು ಕೂಡಲೇ ನಾಶವಾದರೆ …ಹೇಗಾಗಬೇಡ?. ನಾಶವಾಗಲು ಕಾರಣರಾದವರ ಮೇಲೆ ಅಸಾಧ್ಯ ಸಿಟ್ಟು ಬರುತ್ತದೆ. ಹಾಗೆಯೇ ನಾವು ಇಷ್ಟಪಟ್ಟು  ಒಂದು ವಿದ್ಯೆಯನ್ನು ಗುರುಮುಖೇನ ಕಲಿಯುತ್ತೇವೆ ಎಂದಿಟ್ಟುಕೊಳ್ಳಿ....

5

ಮಲೆನಾಡಿನ ಜೀವನಾಡಿಗಳು ಅಂಕ-೪: ಅಂತಿಂತ ನದಿಯು ನೀನಲ್ಲ, ನಿನ್ನಂತ ನದಿಯು ಬೇರಿಲ್ಲ -ಭದ್ರಾ

Share Button

ಕುದುರೆಮುಖ ಅಭಯಾರಣ್ಯದ ವರಾಹ ಪರ್ವತಗಳ ಸಾಲಿನಲ್ಲಿರುವ ಗಂಗಾಮೂಲದಲ್ಲಿ ಜನಿಸಿದ ಭದ್ರೆ, ಸೋದರಿ ತುಂಗೆಯಷ್ಟು ಸೌಮ್ಯ ಸ್ವಭಾವದವಳಲ್ಲ, ನಯ ನಾಜೂಕಿನವಳೂ ಅಲ್ಲ, ಲಾವಣ್ಯವತಿಯೂ ಆಗಿಲ್ಲ. ಕುದುರೆಮುಖದ ಕಬ್ಬಣದ ಅದುರುಳ್ಳ ಬೆಟ್ಟಗುಡ್ಡಗಳ ಮಣ್ಣಿನ ಸಾರವನ್ನು ಹೀರುತ್ತಾ ಸಾಗುವಳು. ಇವಳ ಬಣ್ಣ ತುಂಗೆಗಿಂತ ತುಸು ಕಪ್ಪು, ಆದರೆ ಗಾತ್ರ ದೊಡ್ಡದೇ. ತುಂಗೆ...

7

ವಸುಧೇಂದ್ರ ಅವರ ‘ತೇಜೋತುಂಗಭದ್ರಾ’: ಚರಿತ್ರೆಯ ಮರುಸೃಷ್ಟಿ

Share Button

‘ತೇಜೋತುಂಗಭದ್ರಾ’ ವಸುಧೇಂದ್ರ‌ ಅವರ ಬಹುಚರ್ಚಿತ ಕೃತಿ. 2019 ರಂದು ಬಿಡುಗಡೆಯಾದ, 10 ಮರು ಮುದ್ರಣಗಳನ್ನು ಕಂಡ ಈ ಕೃತಿ ತನ್ನ ಚಾರಿತ್ರಿಕ ಒಳ ನೋಟಗಳಿಂದಲೂ ಹಿತಮಿತವಾದ ನಿರೂಪಣೆಯಿಂದಲೂ‌ ಎಲ್ಲಕ್ಕಿಂತ ಮಿಗಿಲಾಗಿ ವಿಜಯನಗರ ಸಾಮ್ರಾಜ್ಯದ ವೈಭವ, ಪೋರ್ಚುಗೀಸರ‌ ಆಕ್ರಮಣ ಇವುಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥನ ಶೈಲಿಯಿಂದಲೂ‌ ಒಂದು...

9

ಮನೋ ವೃಕ್ಷ

Share Button

ಭರವಸೆ ಆಶಾಭಾವನೆಗಳೆಂಬ ಎಲೆಗಳುದುರಿವೆ ಮನಸ್ಸೆಂಬ ಮರದಿಂದಉತ್ಸಾಹ ಆಸಕ್ತಿಗಳೆಂಬ ಟೊಂಗೆಗಳು ಬೋಳಾಗಿವೆ ಬುಡದಿಂದ ಸಂತಸ ಖುಷಿಗಳೆಂಬ ಹಣ್ಣುಗಳು ಒಣಗಿ ಹೋಗಿವೆ ಸ್ಪರ್ಧೆಯ ಬಿರು ಬಿಸಿಲಿನಿಂದ ಕಾರ್ಯನಿರ್ವಹಣೆಯೆಂಬ ಹಸಿರು ತುಂಬಿತ್ತು ಮೊದಲು ವೃಕ್ಷದಲಿಮೆಚ್ಚುಗೆಯೆಂಬ ಹಕ್ಕಿ ಗೂಡು ಕಟ್ಟಿತ್ತು ಆಗ ತರುವಿನಲಿ ಹಲವು ಮೊದಲುಗಳ ಫಲಗಳು ತುಂಬಿ ಜಂಗಿತ್ತುಬಂದು ಹೋಗುವವರ ಕೈ...

4

ಮತದಾನ ಮರೆತ ಮಂಗನ ಕಥೆ….

Share Button

ದೇವಲೋಕದಲ್ಲಿ ದೇವಾನುದೇವತೆಗಳ ಸಭೆ ನೆಡೆದಿತ್ತು. ಭೂಲೋಕದಲ್ಲಿ ಪ್ರಾಣಿಗಳ ರಾಜನ್ಯಾರಾಗಬೇಕೆಂಬುದೇ ಸಭಾವಿಷಯ. ಒಬ್ಬಬ್ಬರೂ ಒಂದೊಂದು ಹೆಸರನ್ನು ಸಭೆಯ ಮುಂದಿಟ್ಟರು. ಸುಬ್ರಮಣ್ಯ ನವಿಲೇ ರಾಜನಾಗಬೇಕೆಂದ, ಗಣಪತಿ ಇಲಿಯೇ ರಾಜನಾಗಬೇಕೆಂದ, ಯಮರಾಜ ಕೋಣವೇ ರಾಜನಾಗಬೇಕೆಂದ, ಶನಿದೇವ ಕಾಗೆಯೇ ರಾಜನಾಗಬೇಕೆಂದ. ಆದರೆ ಒಮ್ಮತದ ಆಯ್ಕೆಗೆ ಬಹುಮತ ಮೂಡಲಿಲ್ಲ. ಕೊನೆಯಲ್ಲಿ ಸಭಾನಾಯಕ ಈಶ್ವರನ ಆಜ್ಞೆಯಂತೆ...

10

ನಮ್ಮ ಮತದಾನ, ನಮ್ಮ ಸ್ವಾಭಿಮಾನ.

Share Button

ನಮ್ಮ ದೇಶ ಭಾರತವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು. ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗಾಗಿ ರಚಿಸಲ್ಪಡುವ ಪ್ರಜಾಪ್ರಭುತ್ವ ಸರ್ಕಾರ ವ್ಯವಸ್ಥೆಯನ್ನು ಹೊಂದಿದ್ದು. ಪ್ರಜೆಗಳು ತಮ್ಮನ್ನು ಆಳುವ ಪ್ರಭುಗಳನ್ನು ತಾವೇ ಸ್ವತಃ ಆಯ್ಕೆ ಮಾಡಿಕೊಳ್ಳಲು ಭಾರತೀಯ ಸಂವಿಧಾನವು ರಾಜಕೀಯ ಹಕ್ಕಿನ ಮೂಲಕ ಮತದಾನದ ಅವಕಾಶವನ್ನು ಕಲ್ಪಿಸಿದೆ. ಪ್ರತಿ ಐದು...

5

ದೇವರನಾಡಲ್ಲಿ ಒಂದು ದಿನ – ಭಾಗ 4

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಪ್ರಾಣವಿಧಾತನ ಸನ್ನಿಧಾನ ನಾನಾ ಜೀವಿಗಳ ಆಧಾರತಾಣ ನಾಗರಹೊಳೆಯ ಸೌಂದರ್ಯವನ್ನು ಸವಿಯುತ್ತಾ ಹೊರಟವಳಿಗೆ ಚೆಕ್ ಪೋಸ್ಟ್ ಬಂದದ್ದು ತಿಳಿಯಲೇ ಇಲ್ಲ.  ಏರಿಳಿತಗಳ ಬದುಕಿನಂತೆ ಕಂಡ  ರಸ್ತೆಯ ಉದ್ದಕ್ಕೂ ಸಾಕಷ್ಟು ಗುಂಡಿಗಳು ಎದುರಾದವು.   ತುಂಬಾ ಕಿತ್ತು ಹೋದ ರಸ್ತೆಯಲ್ಲಿ ನಮ್ಮ ಪ್ರಯಾಣ ಸಾಗಿತ್ತು. ಆದರೆ ಚೆಕ್ ಪೋಸ್ಟ್...

5

ವಾಟ್ಸಾಪ್ ಕಥೆ 17 : ಎತ್ತರ.

Share Button

ಒಂದೂರಿನಲ್ಲಿ ಪಾರಿವಾಳಗಳ ಒಂದು ಗುಂಪು ಮಸೀದಿಯೊಂzರ ಗೋಪುರಗಳಲ್ಲಿ ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಕೆಲವು ತಿಂಗಳುಗಳು ಕಳೆದಮೇಲೆ ಮುಸ್ಲಿಮರ ಪವಿತ್ರವಾದ ಹಬ್ಬ ರಂಜಾನ್ ಹತ್ತಿರ ಬರುತ್ತಿತ್ತು. ಭಕ್ತರುಗಳು ತಮ್ಮ ಮಸೀದಿಯ ಸಂದಿಗೊಂದಿಗಳನ್ನೆಲ್ಲ ಸ್ವಚ್ಛಗೊಳಿಸಿ ಅದಕ್ಕೆ ಹೊಸದಾಗಿ ಬಣ್ಣ ಬಳಿಸಬೇಕೆಂದು ಸಿದ್ಧತೆ ಮಾಡಿಕೊಂಡರು. ಅದನ್ನು ತಿಳಿದು ಪಾರಿವಾಳಗಳು ಅಲ್ಲಿರುವುದು ಕಷ್ಟವೆಂದು...

Follow

Get every new post on this blog delivered to your Inbox.

Join other followers: