ಮನೋ ವೃಕ್ಷ
ಭರವಸೆ ಆಶಾಭಾವನೆಗಳೆಂಬ ಎಲೆಗಳುದುರಿವೆ ಮನಸ್ಸೆಂಬ ಮರದಿಂದ
ಉತ್ಸಾಹ ಆಸಕ್ತಿಗಳೆಂಬ ಟೊಂಗೆಗಳು ಬೋಳಾಗಿವೆ ಬುಡದಿಂದ
ಸಂತಸ ಖುಷಿಗಳೆಂಬ ಹಣ್ಣುಗಳು ಒಣಗಿ ಹೋಗಿವೆ ಸ್ಪರ್ಧೆಯ ಬಿರು ಬಿಸಿಲಿನಿಂದ
ಕಾರ್ಯನಿರ್ವಹಣೆಯೆಂಬ ಹಸಿರು ತುಂಬಿತ್ತು ಮೊದಲು ವೃಕ್ಷದಲಿ
ಮೆಚ್ಚುಗೆಯೆಂಬ ಹಕ್ಕಿ ಗೂಡು ಕಟ್ಟಿತ್ತು ಆಗ ತರುವಿನಲಿ
ಹಲವು ಮೊದಲುಗಳ ಫಲಗಳು ತುಂಬಿ ಜಂಗಿತ್ತು
ಬಂದು ಹೋಗುವವರ ಕೈ ಬೀಸಿ ಕರೆದಿತ್ತು
ಎಲ್ಲೆಲ್ಲಿಯೂ ಸಂಭ್ರಮ ಸಡಗರ ತುಂಬಿತ್ತು
ತೆಗೆದುಕೊಂಡ ನಿರ್ಧಾರಗಳೆಲ್ಲಾ ಸರಿಯಾಗಿ ಯಶಸ್ಸು ಕಂಡಿತ್ತು
ಮುಟ್ಟಿದ್ದೆಲ್ಲಾ ಬಿಡದೆ ಚಿನ್ನವಾಗಿ ಸಮಾಜದಲಿ ಬೇಡಿಕೆಯಿತ್ತು
ಯಾರ ಶಾಪದ ಫಲವೋ ಇಲ್ಲ ಅತಿಯಾದ ಆತ್ಮವಿಶ್ವಾಸವೋ
ಮಾಡುವ ಪ್ರತಿ ಕಾರ್ಯದಲಿ ಗೆಲುವು ಕೂದಲೆಳೆ ಅಂತರದಲ್ಲಿ ತಪ್ಪುತ್ತಿದೆ
ನಿನ್ನ ಮೊನ್ನೆ ಬಂದ ಎಂತೆಂತವರೆಲ್ಲಾ ಮೀಸೆ ತಿರುವಂತಾಗಿದೆ
ಎಮ್ಮ ಕಂಡು ಕುಹಕ ನಗೆ ಬೀರುವಂತಾಗಿದೆ
ಎಲ್ಲಾ ಸಂಕಟವ ಕಳೆಯುವ ಸರ್ವಶಕ್ತನೇ….
ನೀನೇ ಇದಕೆ ಸೂಕ್ತ ಪರಿಹಾರ ನೀಡು
ಪಟ್ಟ ಪರಿಶ್ರಮಕ್ಕೆ ತಕ್ಕಂತೆ ಫಲವ ಕೊಡು
ಬಿದ್ದ ಎಲೆಗಳ ಒಟ್ಟುಗೂಡಿಸಿ ಪೋಷಣೆಗೆ ಗೊಬ್ಬರವಾಗಿಸುವ ಶಕ್ತಿ ದಯಪಾಲಿಸು
ದುಡಿಮೆ ತಾಳ್ಮೆಯ ನೀರು ಹರಿಸಿ ಮತ್ತೆ ಮರವ ಚಿಗುರಿಸುವ ಭಾಗ್ಯ ಕರುಣಿಸು
-ಕೆ.ಎಂ ಶರಣಬಸವೇಶ
ಭಗವಂತನಲ್ಲಿ… ಮೊರೆಯಿಡುವ…ಪರಿ..ಮನೋವೃಕ್ಷ..ಕವನದಲ್ಲಿ.. ಸೊಗಸಾಗಿ ಅನಾವರಣ ವಾಗಿದೆ…ಧನ್ಯವಾದಗಳು ಸಾರ್
ಧನ್ಯವಾದಗಳು ನಾಗರತ್ನ ಮೇಡಂ
ಚೆನ್ನಾಗಿದೆ
ಧನ್ಯವಾದಗಳು ನಾಗರತ್ನ ಹಾಗೂ ನಯನ ಮೇಡಂ ಗೆ
ಚೆನ್ನಾಗಿ ದೆ
ಪಟ್ಟ ಶ್ರಮಕ್ಕೆ ತಕ್ಕುದಾದ ಪ್ರತಿಫಲವನ್ನು ಬೇಡಿದ ಮೊರೆಯು ಮನೋವೃಕ್ಷಕ್ಕೆ ನೀರುಣಿಸಿ ಸಂಪದ್ಭರಿತವಾಗಿ ಮಾಡುವುದರಲ್ಲಿ ಸಂಶಯವಿಲ್ಲ…ಚಂದದ ಕವನ!
ಸೊಗಸಾದ ಶಿರ್ಷಿಕೆ ಹೊತ್ತ ಸುಂದರ ಕವನ.
ಓದಿ ಪ್ರತಿಕ್ರಿಯಿಸಿದ ಎಲ್ಲಾ ಸಹೃದಯರಿಗೆ ವಂದನೆಗಳು
ಶಿಶಿರ ಹೊರಟಿಹೋಯಿತು. ವಸಂತ ಬರುವ ಸಮಯ ಬಂದಿದೆ. ಹೊಸ ಚಿಗುರು ಬರಲಿದೆ.