Daily Archive: May 18, 2023
ವೃತ್ತಿಯಲ್ಲಿ ವೈದ್ಯರೂ, ಪ್ರವೃತ್ತಿಯಲ್ಲಿ ಸಾಹಿತಿಗಳೂ, ವೃತ್ತಿ-ಪ್ರವೃತ್ತಿಗಳೆರಡರಲ್ಲೂ ಮಹಾ ಆಧ್ಯಾತ್ಮಿಕ ಜೀವಿಯೂ ಆಗಿದ್ದ ಡಾ. ಎಂ.ಪಿ. ಉಮಾದೇವಿಯವರು ತಮ್ಮ ಜೀವನದ 24 ವರ್ಷಗಳನ್ನು ಮುಡಿಪಾಗಿಟ್ಟು, ಒಂದು ತಪ್ಪಸ್ಸಿನಂತೆ ರಚಿಸಿದ ಬೃಹತ್ ಕಾವ್ಯವೇ ಶೈವ ವಾತ್ಸಲ್ಯ. ಇದರ ಕಥಾ ವಸ್ತು ಶಿವ ಮತ್ತು ಉಮೆಯರ ಪ್ರೇಮ ಮತ್ತು ಶಿವೆಯ ಜನ್ಮಾಂತರಗಳ...
ತೀವ್ರ ನಿಗಾ ಘಟಕ ಎಂಬ ಬರಹದ ಕೋಣೆ ಪ್ರವೇಶಿಸಿ ಇಂದಿಗೆ ಮೂರು ದಿನ ಮೈ ಕೊರೆಯುವಷ್ಟು ತಂಪು ಮೂಗಿಗೆ ಕೈಗೆ ಅಳವಡಿಸಿದ ವಿಚಿತ್ರ ಪರಿಕರಗಳುಆಸ್ಪತ್ರೆಯವರು ತೊಡಿಸಿದ ಹಸಿರು ಬಣ್ಣದ ಗೌನುಗಳುಆಗಾಗ ಬಂದು ಅವರನ್ನು ನನ್ನ ಸ್ಥಾನದಲ್ಲಿ ಕಲ್ಪಿಸಿಕೊಂಡು ಭಯಪಡುವ ಬಂಧುಗಳು ಎಪ್ಪತ್ತೆಂಟು ವರ್ಷ ಸರಾಗವಾಗಿ ಹೊರ ಹೋಗುತ್ತಿದ್ದ...
ಒಂದೂರಿನಲ್ಲಿ ಒಬ್ಬ ಆಚಾರವಂತ ಬ್ರಾಹ್ಮಣನಿದ್ದನು. ಒಮ್ಮೆ ಅವನು ದೂರದೂರಿನಿಂದ ನಡೆದುಕೊಂಡು ಹಿಂದಿರುಗುತ್ತಿದ್ದ. ಬಿಸಿಲಿನಿಂದಾಗಿ ತುಂಬ ದಣಿದಿದ್ದ. ಬಾಯಾರಿಕೆಯು ಕಾಡಿತ್ತು. ದಣಿವಾರಿಸಿಕೊಳ್ಳಲು ಒಂದು ಮರದ ನೆರಳಿನಲ್ಲಿ ಕುಳಿತುಕೊಂಡ. ಆ ಬಯಲಿನಲ್ಲಿ ದಟ್ಟವಾದ ನೆರಳು ನೀಡುವ ಮರಗಳ್ಯಾವುವೂ ಇರದಿದ್ದುದರಿಂದ ಒಂದು ಈಚಲು ಮರ ಮಾತ್ರ ಕಾಣಿಸಿ ಅವನು ಅದರಡಿಯಲ್ಲಿ ಕುಳಿತಿದ್ದ....
ಇವಳೇ ಕರಾವಳಿಯ ಕಣ್ಣಾದ ನೇತ್ರಾವತಿ. ಚಿಕ್ಕಮಗಳೂರಿನ ಸಂಸೆಯ ಬಳಿಯಲ್ಲಿರುವ ಗಂಗಾಮೂಲದಲ್ಲಿ ಜನಿಸಿದ ತ್ರಿವಳಿ ಸೋದರಿಯರಲ್ಲಿ ಒಬ್ಬಳಾದ ನೇತ್ರಾವತಿ. ಇವಳ ಉಗಮ ಸ್ಥಾನದಲ್ಲಿ ಕಂಡುಬರುವ ದೃಶ್ಯ – ಕಣ್ಣಿನಾಕಾರದ ಬಂಡೆಗಳ ಮೂಲಕ ಭೂಗರ್ಭದಿಂದ ಹೊರಜಗತ್ತಿಗೆ ಹೆಜ್ಜೆಯಿಡುತ್ತಿರುವ ನೀರಿನ ಝರಿ. ಹಾಗಾಗಿ ನೇತ್ರಾವತಿಯೆಂಬ ನಾಮಧೇಯ ಇವಳದು. ಹಿರಣ್ಯಾಕ್ಷನೆಂಬ ಅಸುರನನನ್ನು ಸಂಹರಿಸಲು...
ನನ್ನನ್ನು ಕಾಡುವ ಸ್ಪೋಂಡಿಲೋಸಿಸ್ ನ ಚಿಕಿತ್ಸೆ ಗಾಗಿ ವೈದ್ಯರನ್ನು ಭೇಟಿ ಮಾಡಲು ಕಾಸರಗೋಡಿನ ಕೇರ್ ವೆಲ್ ಆಸ್ಪತ್ರೆಗೆ ಹೋಗಿ ಹಿಂತಿರುಗಿ ಬರಲು ಬಸ್ಸಿಗೆ ಕಾಯುತ್ತಿದ್ದೆ.ರಸ್ತೆ ಯ ಅಗಲೀಕರಣದ ಕಾಮಗಾರಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ದರಿಂದ ತಂಗುದಾಣವನ್ನು ಅಗೆದು ಹಾಕಿದ್ದರು. ಕೂರಲು ಆಸನವಿಲ್ಲ. ಕಾಮಗಾರಿಗೆ ಬಳಸುವ ಒಂದು ಕೆಂಪು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಜಗದ ಚಕ್ಷು ನಿದಿರೆಗೆ ಜಾರಿದ ಸೂರ್ಯನ ತಾಪದಿಂದ ಬಳಲಿ ಬೆಂಡಾದ ಹೆಂಗಳೆಯರ ಮೊಗವೆಲ್ಲಾ ತಲೆತಗ್ಗಿಸಿದ ಸೂರ್ಯಕಾಂತಿಯ ಹೂವಂತಾಗಿದ್ದವು. ನಾವು ಅಂದು ಉಳಿದುಕೊಳ್ಳುವ ಜಾಗಕ್ಕೆ ಕಾತರಿಸಿದೆವು. ಅಂತೂ ಇಂತೂ ಹೋಂ ಸ್ಟೇ ಬಂತು. ಮಾನತ್ ವಾಡಿಯದಲ್ಲಿ ಹೋಂ ಸ್ಟೇ ಮಾಡಲಾಗಿತ್ತು. ಐದೈದು ಜನಕ್ಕೆ ಒಂದು ಕೋಣೆಯ...
ಹತ್ತು ನಿಮಿಷ ನಿಧಾನಿಸು, ಸುಮ್ಮನಿದ್ದು ಧ್ಯಾನಿಸು;ನಿನ್ನ ಕುರಿತು ಬಂದ ಮಾತಿಗೆ ; ಮಂದಿ ಮನಸಿಗೆ ! ಹರಿವ ನೀರನು ನೆನಪಿಸು, ಕಸಕಡ್ಡಿ ತೇಲುವ ತಾಮಸವ ಗಮನಿಸುನಿನ್ನನೇ ‘ಲೋಕಿʼಸುವ, ಅವಲೋಕಿಸುವ ಏಕಾಗ್ರತೆಗೆ ; ಜಾಗ್ರತೆಗೆ ! ಹತ್ತು ನಿಮಿಷ ನಿಧಾನಿಸು, ನೀ ಪ್ರತಿಕ್ರಿಯಿಸುವ ಮುನ್ನ ;ಪ್ರತಿಬಿಂಬಿಸುವ ನಿನ್ನ ಕನ್ನಡಿ...
ಹೌದು..! ಲೇಖಕ ಸಂತೋಷಕುಮಾರ ಮೆಹಂದಳೆಯವರ ವೈಜಯಂತಿಪುರ ಕನ್ನಡ ಭಾಷೆಯನ್ನು ಎತ್ತಿ ಹಿಡಿದ ಸಾಮ್ರಾಜ್ಯವಾದ ಕದಂಬ ರಾಜ ಮನೆತನದ ಸ್ಥಾಪಕ ಮಯೂರವರ್ಮನ ಸಾಹಸಗಾಥೆ.. ಈ ಕೃತಿಯನ್ನು ಓದುತ್ತಿದ್ದರೆ ಮಯೂರನ ಜೀವನದ ನಿಜ ಘಟನೆಗಳು ಕಣ್ಣ ಮುಂದೆ ಕಟ್ಟಿದಂತೆ, ಮಯೂರನೇ ಮೈದಳೆದು ಕಣ್ಣ ಮುಂದೆ ಬಂದು ತನ್ನ ಕಥೆಯನ್ನು ತಾನೇ...
ನಿಮ್ಮ ಅನಿಸಿಕೆಗಳು…