Monthly Archive: September 2022
1ರೈತನ ಹೊಲದಲ್ಲಿಬೆಳೆದ ಹೂವಿನಮಕರಂದ ಹೀರುವಜೇನು ಹುಳುಗಳುಸುಂಕ ಕಟ್ಟುವುದಿಲ್ಲ 2ಸಂತಸದ ರೆಕ್ಕೆ ಕಟ್ಟಿಕೊಂಡುಅತ್ತಿಂದಿತ್ತ ಹಾರಿದೆ ಚಿಟ್ಟೆಹೂವಿಗೆ ಸುತ್ತಲೂ ರೆಕ್ಕೆ 3ಚಳಿಯ ಮುಂಜಾವಿನಲ್ಲೂದಾಸವಾಳಅರಳಿಕೊಳ್ಳುತ್ತಿದೆ 4ಭಕ್ತನೊಬ್ಬ ಕೀಳಬೇಕಿದ್ದಹೂವನ್ನುಕೀಟವೊಂದು ತಿನ್ನುತ್ತಿದೆಇದು ದೇವರ ಸೃಷ್ಟಿ 5ಗದ್ದಲ ತುಂಬಿದ ಮಾರುಕಟ್ಟೆಯೊಳಗೆಹೂವಿನ ಪರಿಮಳಸದ್ದು ಮಾಡದೇ ಅಲೆಯುತ್ತಿದೆ! 6ಹೂವ ಪ್ರೀತಿಸುವೆ,ದುಂಬಿಯನ್ನೂ..ನಾನೀಗ ಯಾರ ಪರ ನಿಂತುನ್ಯಾಯ ಹೇಳುವುದು! –ನವೀನ್ ಮಧುಗಿರಿ...
ಪ್ರಪಾತದತ್ತ ದೃಷ್ಟಿ ನೆಟ್ಟು….!! ಹೌದು…ಈ ಅತ್ಯಂತ ಕುತೂಹಲಕಾರಿಯಾದ ಕಣಿವೆಯೇ Grand Canyon. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅರಿಜೊನಾ ರಾಜ್ಯದ ಉತ್ತರ ಭಾಗದಲ್ಲಿ ಹರಿಯುವ ವಿಶ್ವವಿಖ್ಯಾತ ಕೊಲೊರಾಡೊ ನದಿಯ ಪ್ರಸ್ಥಭೂಮಿಯಲ್ಲಿ ನದಿ ನೀರಿನ ಕೊರೆತದಿಂದ ಉಂಟಾದ ಆಳವಾದ ಕಂದರಗಳಿಂದ ರೂಪುಗೊಂಡ ಈ ಕಣಿವೆಯು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ...
ಎಪ್ಪತ್ತು ಮಕ್ಕಳಿರುವಂತಹ ಒಂದು ಸರ್ಕಾರಿ ಶಾಲೆ. ಸುಂದರವಾದ ಪರಿಸರ, ಕೇರ್ ತಗಳುವ ಶಿಕ್ಷಕರು ಹೀಗೆ ಬಹಳ ಚೆನ್ನಾಗಿ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಅಕ್ಷರ ಮತ್ತುಅನ್ನ ದಾಸೋಹವೂ ಕೂಡಾ ಸಾಕಷ್ಟು ಚೆನ್ನಾಗಿಯೇ ನಡೆಯುತ್ತಿತ್ತು.ಅದರಲ್ಲಿ ಎರಡನೇ ತರಗತಿಯಲ್ಲಿ ಒಂದು ಗಣೇಶ ಅನ್ನುವ ಮಗುವೇ ನನ್ನ ಕಥಾನಾಯಕ. ಬಹಳ ಮುದ್ದಾದ ಮಗು,...
1ನೀನು ಹೋದ ಮೇಲೆಈ ಗಿಡದ ಹೂವುಗಳುಸುಮ್ಮನೆ ಅರಳಿ ಉದುರುತ್ತಿವೆ 2ಎಷ್ಟೊಂದು ಹೂವುಗಳಬಣ್ಣ ಮೆತ್ತಿಕೊಂಡಿದೆಈ ಚಿಟ್ಟೆಯ ರೆಕ್ಕೆಗಳಿಗೆ 3 ಹೂವುಗಳಿಗೆ ಬಣ್ಣಗಳಬಳಿದವರು ಯಾರಿರಬಹುದು?ಇದು ನನ್ನ ಪ್ರಶ್ನೆಉತ್ತರದೊಂದಿಗೆದೇವರು ಮಾಯವಾಗಿದ್ದಾನೆ! 4ಗಾಳಿಯೊಂದಿಗೆ ಹೊರಟಿದ್ದಹೂವಿನ ಘಮವನ್ನುಮನಸಿಗೆ ತುಂಬಿಕೊಂಡಿದ್ದೇನೆನಿನ್ನ ನೆನಪಿನ ಜೊತೆಅದೂ ಇರಲಿ 5ಹೂಮಾಲೆ ಕಟ್ಟುವಕೈಗಳಿಗೆಸಾವಿರ ಹೂಗಳಸಾವಿರ ಸೂತಕ –ನವೀನ್ ಮಧುಗಿರಿ +4
ಅಷ್ಟೆಶ್ವರ್ಯಗಳಲ್ಲಿ ಆರೋಗ್ಯ ಭಾಗ್ಯವೇ ಮೇಲು. ಅದಕ್ಕಾಗಿಯೇ ‘ಆರೋಗ್ಯವೇ ಭಾಗ್ಯ’ ಎಂಬ ಸೂಕ್ತಿ ಇದೆ. ಆರೋಗ್ಯ ಹೀನ ಮಾನವನಿಗೆ ಯಾವುದೇ ಸಕಾರಾತ್ಮಕ ಸಾಧನೆ ಸಾಧ್ಯವಾಗಲಾರದು. ಧನ ನಷ್ಟಗೊಂಡರೆ ಮತ್ತೆ ತುಂಬಬಹುದು. ಆದರೆ ಆರೋಗ್ಯ ಹದಗೆಟ್ಟರೆ…? ಅದನ್ನು ಭರಿಸುವುದು ಅಷ್ಟೇನು ಸುಲಭದ ಮಾತಲ್ಲ. ಅನಾರೋಗ್ಯ ಮನುಷ್ಯನಿಗೆ ಬೇರಾವುದೇ ಭಾಗ್ಯವಿದ್ದರೂ ಅನುಭವಿಸುವ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸ್ವಲ್ಪ ಹೊತ್ತು ಅದೂ ಇದೂ ಮಾತನಾಡುತ್ತಾ ನಾಣಜ್ಜ ಕೊಟ್ಟ ಹಾಲು ಹಣ್ಣುಗಳನ್ನು ಸ್ವೀಕರಿಸಿ ಮಗನೊಡನೆ ಗುರು ರಾಘವೇಂದ್ರರು ಹಿಂತಿರುಗಿದರು. ಅವರನ್ನು ಬೀಳ್ಕೊಟ್ಟು ಒಳಬಂದ ತಟ್ಟೆಯನ್ನು ಜೋಯಿಸರ ಪಾದದ ಬಳಿಯಲ್ಲಿಟ್ಟು “ಮಾವಯ್ಯಾ ಅವರೇನೇ ಹೇಳಲಿ, ಇದು ನಿಮಗೇ ಸೇರಬೇಕಾದದ್ದು ನನಗಲ್ಲ. ಪಾಠಪ್ರವಚನಗಳಿಂದ ನನಗೆ ಬಂದ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ದ್ವಾರಕಾನಾಥ ಗೋಪ್ತು ಅವರ ಮೊಮ್ಮಗ ಫಣೀಂದ್ರ ನಾಥ ಗೋಪ್ತು ಇವರು ಇಂಗ್ಲೆಂಡಿನಲ್ಲಿ ವ್ಯಾಪಾರ, ಉದ್ಯಮ, ವಾಣಿಜ್ಯಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು 1905ರಲ್ಲಿ ಅಧ್ಯಯನ ಮಾಡಿ F.N. Gooptu & Co ಎಂಬ ಹೆಸರಿನಲ್ಲಿಯೇ ಇನ್ನೊಂದು ಉದ್ಯಮವನ್ನು ಆರಂಭಿಸಿದರು. ಇದು ಪೆನ್, ಪೆನ್ಸಿಲ್‌ಗಳ ಉತ್ಪಾದನೆಯಲ್ಲಿ ಯುಗ...
ಕಣಿವೆಯತ್ತ ಸಾಗುತ್ತಾ…. ಹೌದು…ನಾವು ವೀಕ್ಷಿಸುತ್ತಿರುವ ಕಣಿವೆಯ ಅದ್ಭುತ ಆಳ ಪ್ರಪಾತದ ಕಡೆಗೆ ದೃಷ್ಟಿ ನೆಟ್ಟಾಗ ಕಂಡದ್ದೇನು?!…ಅಬ್ಬಾ.. ಆ ಕೊಲೊರಾಡೊ ನದಿಯ ಗ್ಲೆನ್ ಕಣಿವೆ (Glen Canyon) ಯಲ್ಲಿ ಹರಿಯುತ್ತಿರುವ ತುಂಬು ನೀರು ತನ್ನಲ್ಲಿ, ಆದಿತ್ಯನ ಹೊನ್ನಕಿರಣಗಳನ್ನು ಪ್ರತಿಫಲಿಸಿ, ಆ ನಡುಗುಡ್ಡೆಗೆ ಬಂಗಾರದ ಮಾಲೆಯನ್ನು ತೊಡಿಸಿಬಿಟ್ಟಿತ್ತು!. ನೋಡಲು ನೂರು...
ಅಂದು ಕೃಷ್ಣ ಜನ್ಮಾಷ್ಟಮಿ. ಹತ್ತಾರು ಮಕ್ಕಳು ಕೃಷ್ಣ ರಾಧೆಯರ ವೇಷ ಧರಿಸಿ ನೃತ್ಯ ಮಾಡಲು ಸಜ್ಜಾಗಿದ್ದರು. ಸ್ಥಳ – ಸ್ಕಾಟ್‌ಲ್ಯಾಂಡಿನಲ್ಲಿರುವ ಒಂದು ಸುಂದರ ನಗರ ಅಬರ್ಡೀನ್. ಸಮುದ್ರ ತೀರದಲ್ಲಿದ್ದ ಹಳೆಯ ಚರ್ಚ್‌ನ್ನು ನವೀಕರಿಸಿ, ಹಿಂದೂ ದೇಗುಲವನ್ನಾಗಿ ಮಾರ್ಪಡಿಸಿದ್ದರು. ಧಾರ್ಮಿಕ ಆಚರಣೆಗಳ ಜೊತೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದರು....
ಭಾದ್ರಪದ ಬರುತಲಿದೆಕಳೆದು ಶ್ರಾವಣಗಣೇಶ ಬರುತಿಹನುತೋರುತ ನಗುವ ವದನನಮ್ಮೆಲ್ಲರ ಹರಸಿಹೋಗುವನುಪಾರ್ವತಿ ನಂದನ ಆಮೇಲೆ ಆಶ್ವಯುಜನವರಾತ್ರಿಯ ಆಗಮನದುರ್ಗಾಷ್ಟಮಿ, ಮಹಾನವಮಿವಿಜಯದಶಮಿಯಲಿನಾಡಾಗಲಿದೆಆನಂದ ನಂದನ ಕಾರ್ತೀಕದಲಿ ದೀಪಾವಳಿಬೆಳಕಿನ ಹೂಬಾಣಎಲ್ಲೆಲ್ಲೂ ಹಣತೆಯಬೆಳಕಿನ ತೋರಣಎಲ್ಲ ಮನೆ ಮನದಲಿಸಂತಸದ ಹೂರಣ ನಂತರದ ದಿನಗಳಲಿಪೂಜೆ ,ಪುಣ್ಯಸ್ನಾನತುಲಾಸಂಕ್ರಮಣಎಳ್ಳು ಬೆಲ್ಲದ ಸಂಕ್ರಾಂತಿಕೊನೆಯಲ್ಲಿ ಶಿವರಾತ್ರಿನಮ್ಮ ನಾಡಲ್ಲಿ ಹೀಗೆಹಬ್ಬದ ಸಂಸ್ಕೃತಿ ಯುಗಾದಿಯೊಂದಿಗೆ ಆರಂಭವರುಷವಿಡೀ ಮನೆ ಮನಗಳಲ್ಲಿಹಬ್ಬವೋ...
ನಿಮ್ಮ ಅನಿಸಿಕೆಗಳು…